ಪಾಂಡವಪುರದಲ್ಲಿ ಪುಂಡರ ಹಾವಳಿ ಶಾಸಕ ಪುಟ್ಟರಾಜು ಮನೆ, ಕಾರು ಅಲ್ಲದೆ ಹಲವೆಡೆ ಕಲ್ಲು ತೂರಾಟ
ಮಂಡ್ಯ

ಪಾಂಡವಪುರದಲ್ಲಿ ಪುಂಡರ ಹಾವಳಿ ಶಾಸಕ ಪುಟ್ಟರಾಜು ಮನೆ, ಕಾರು ಅಲ್ಲದೆ ಹಲವೆಡೆ ಕಲ್ಲು ತೂರಾಟ

October 9, 2021
  • ಶಾಸಕರ ಮನೆ ಕಿಟಕಿ ಗಾಜು ಪುಡಿ
  • ಹಲವು ವಾಹನಗಳು ಜಖಂ
  • ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಪಾಂಡವಪುರ, ಅ.೮- ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ನಿವಾಸ ಸೇರಿದಂತೆ ಅನೇಕ ಮನೆಗಳ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.

ಪಾಂಡವಪುರ ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ಶಾಸಕರ ಮನೆ ಸೇರಿದಂತೆ ರಸ್ತೆಗಳಲ್ಲಿ ನಿಲ್ಲಿಸಿದ್ದ ಹಲವು ಕಾರುಗಳ ಮೇಲೆ ಕಲ್ಲು ತೂರಿ ದ್ದಾರೆ. ಕಲ್ಲು ತೂರಾಟದಿಂದ ಶಾಸಕ ಸಿ.ಎಸ್.ಪುಟ್ಟರಾಜು ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಮೂರು ಕಾರು, ಒಂದು ಖಾಸಗಿ ಬಸ್, ಹೋಂಡಾ ಶೋರೂಂ ಮೇಲೂ ಕಲ್ಲು ತೂರಿರುವ ಪುಂಡರು, ಕಾರುಗಳ ಗಾಜು ಪುಡಿ ಪುಡಿ ಮಾಡಿದ್ದಾರೆ. ಒಂದು ಕಾರಿನ ಮೇಲೆ ಭಾರೀ ಗಾತ್ರದ ಕಲ್ಲು ಎಸೆದಿರುವ ಕಿಡಿಗೇಡಿಗಳ ಕೃತ್ಯಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪಾಂಡವಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಟ್ಟರಾಜು ನಿವಾಸದ ಮೇಲೆ ಕಲ್ಲು ತೂರಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಶಾಸಕ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಇದು ರಾಜಕೀಯ ಪ್ರೇರಿತವಲ್ಲ. ಯಾರೋ ಕಿಡಿಗೇಡಿಗಳ ಕೃತ್ಯ. ಇದಕ್ಕೂ ಮೊದಲು ಕಿಡಿಗೇಡಿಗಳು ಪೆಟ್ರೋಲ್ ಬಂಕ್‌ವೊAದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬAಧಿಸಿದAತೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗದೆ ಶಾಂತಿ ಕಾಪಾಡಬೇಕು ಎಂದು ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ಪಿಎಸ್‌ಐ ಪ್ರಭಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Translate »