ಮೈಸೂರು ಕೋರ್ಟ್ನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ತಮಿಳುನಾಡಿನ ಮೂವರು ದೋಷಿಗಳು ಶಿಕ್ಷೆ ಪ್ರಮಾಣ ಕಾಯ್ದಿರಿಸಿದ ಎನ್‌ಐಎ ವಿಶೇಷ ಕೋರ್ಟ್
ಮೈಸೂರು

ಮೈಸೂರು ಕೋರ್ಟ್ನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ತಮಿಳುನಾಡಿನ ಮೂವರು ದೋಷಿಗಳು ಶಿಕ್ಷೆ ಪ್ರಮಾಣ ಕಾಯ್ದಿರಿಸಿದ ಎನ್‌ಐಎ ವಿಶೇಷ ಕೋರ್ಟ್

October 9, 2021
  • ೨೦೧೬ರಲ್ಲಿ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣ
  • ಶಾಲಾ ಬಾಲಕಿ,ಮತ್ತೋರ್ವರಿಗೆ ಸಣ್ಣಪುಟ್ಟ ಗಾಯವಾಗಿತ್ತು
  • ಚಾಮರಾಜನಗರ-ತಿರುಪತಿ ಎಕ್ಸ್ಪ್ರೆಸ್ ರೈಲು ಗುರಿಯಾಗಿಸಲಾಗಿತ್ತು
  • ಅದೃಷ್ಟವಶಾತ್ ದುಷ್ಕರ್ಮಿಗಳ ಎಲ್ಲಾಲೆಕ್ಕಚಾರ ತಲೆಕೆಳಗಾಗಿತ್ತು
  • ದುಷ್ಕರ್ಮಿಗಳು ಅಲ್‌ಖೈದಾ ಸಂಪರ್ಕ ಹೊಂದಿದ್ದ ಬೇಸ್ ಮೂವ್‌ಮೆಂಟ್ ಸಂಘಟನೆಗೆ ಸೇರಿದವರು
  • ಕೊಲ್ಲಂ, ಚಿತ್ತೂರು ಕೋರ್ಟ್ಗಳಲ್ಲಿ ನಡೆದ ಸ್ಫೋಟದ ಪುರಾವೆ ತನಿಖೆಗೆ ಪುಷ್ಠಿ

ಮೈಸೂರು, ಅ.೮-ಐದು ವರ್ಷದ ಹಿಂದೆ ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬAಧಿಸಿ ದಂತೆ ಅಲ್‌ಖೈದಾ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ತಮಿಳುನಾಡಿನ ಬೇಸ್ ಮೂವ್‌ಮೆಂಟ್ ಸಂಘಟನೆಗೆ ಸೇರಿದ ಮೂವರನ್ನು ದೋಷಿಗಳೆಂದು ರಾಷ್ಟಿçÃಯ ತನಿಖಾ ತಂಡದ (ಎನ್‌ಐಎ) ವಿಶೇಷ ನ್ಯಾಯಾಲಯ ಘೋಷಿಸಿದ್ದು, ಶಿಕ್ಷೆಯ ಪ್ರಮಾಣ ವನ್ನು ಕಾಯ್ದಿರಿಸಿದೆ. ನೈಸರ್ ಅಬ್ಬಾಸ್ ಅಲಿ, ಸಂಸುಲ್ ಕರೀಂ ರಾಜ ಮತ್ತು ದಾವೂದ್ ಸುಲೈಮನ್ ದೋಷಿ ಗಳಾಗಿದ್ದು, ಇವರೆಲ್ಲರೂ ಹಾಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ವಿವರ: ಮೈಸೂರು ಜಿಲ್ಲಾ ನ್ಯಾಯಾಲಯದ ಆವ ರಣದಲ್ಲಿ ನಾಲ್ಕನೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹೊಂದಿಕೊAಡAತಿರುವ ಶೌಚಾಲಯದಲ್ಲಿ ೨೦೧೬ರ ಆಗಸ್ಟ್ ೧ರಂದು ಮಧ್ಯಾಹ್ನ ಕುಕ್ಕರ್ ಬಾಂಬ್ ಸ್ಫೋಟ ವಾಗಿತ್ತು. ನ್ಯಾಯಾಲಯಕ್ಕೆಹೊಂದಿಕೊAಡAತೆ ರೈಲ್ವೆ ಟ್ರಾö್ಯಕ್ ಇದ್ದು, ಚಾಮರಾಜನಗರ-ತಿರುಪತಿ ಎಕ್ಸ್ಪ್ರೆಸ್ ರೈಲು ಬರುವ ವೇಳೆ ಸ್ಫೋಟಗೊಳ್ಳುವಂತೆ ಬಾಂಬ್ ಇರಿಸಲಾಗಿತ್ತಾದರೂ, ಅದೃಷ್ಟ ವಶಾತ್ ಆ ವೇಳೆಗೆ ರೈಲು ಬಂದಿರಲಿಲ್ಲ. ಈ ರೈಲು ಬರುವ ವೇಳೆಗೆ ರೈಲ್ವೆ ಗೇಟ್ ಹಾಕಲಾಗುತ್ತದೆ. ಆ ವೇಳೆ ನ್ಯಾಯಾಲಯದ ಶೌಚಾಲಯಕ್ಕೆ ಹೊಂದಿಕೊAಡAತಿರುವ ಕಾಂಪೌAಡ್‌ಗೆ ಪಕ್ಕದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಹಾಗೂ ೪ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ಹಾಗೂ ವಕೀಲರು ಸಾಮಾನ್ಯವಾಗಿ ಈ ಶೌಚಾಲಯಕ್ಕೆ ಅನತಿ ದೂರದಲ್ಲಿ ನಿಂತಿರುತ್ತಾರೆ. ಹೀಗಾಗಿ ಬಾಂಬ್ ಸ್ಫೋಟಗೊಂಡಾಗ ಭಾರೀ ಪ್ರಮಾಣದ ಪ್ರಾಣಹಾನಿ ಉಂಟಾಗಬೇಕೆAಬುದು ದುಷ್ಕರ್ಮಿಗಳ ಯೋಜನೆ ಯಾಗಿತ್ತಾದರೂ, ಅದೃಷ್ಟವಶಾತ್ ಬಾಂಬ್ ಸ್ಫೋಟಗೊಂಡ ವೇಳೆ ಶೌಚಾಲಯದ ಬಳಿ ವಕೀಲರಾಗಲೀ, ಕಕ್ಷಿದಾರರಾಗಲೀ ಇರಲಿಲ್ಲ. ಜೊತೆಗೆ ಆ ಸಮಯಕ್ಕೆ ರೈಲು ಬಾರದ ಕಾರಣ ರೈಲ್ವೆ ಗೇಟನ್ನು ಹಾಕದೇ ಇದ್ದುದರಿಂದ ಕೋರ್ಟ್ ಕಾಂಪೌAಡ್‌ಗೆ ಹೊಂದಿಕೊAಡAತಿರುವ ರಸ್ತೆಯಲ್ಲಿ ವಾಹನಗಳೂ ಕೂಡ ಸಾಲುಗಟ್ಟಿ ನಿಂತಿರಲಿಲ್ಲ.

ಆದರೆ ಸ್ಫೋಟ ನಡೆದ ವೇಳೆ ರೈಲ್ವೆ ಗೇಟ್ ದಾಟಿ ತೆರಳುತ್ತಿದ್ದ ಶಾಲಾ ಮಕ್ಕಳನ್ನು ಕರೆದೊಯ್ಯುವ ವ್ಯಾನ್‌ನಲ್ಲಿದ್ದ ವಿದ್ಯಾರ್ಥಿನಿಗೆ ಈ ಬಾಂಬ್ ಸ್ಫೋಟದ ಸಣ್ಣ ಅವಶೇಷ ತಗುಲಿ ಸಣ್ಣ ಪ್ರಮಾಣದ ಗಾಯವಾಗಿತ್ತು. ಹಾಗೂ ಶೌಚಾಲಯದ ಬಳಿ ಇದ್ದ ವೆಂಕಟೇಶ್ ಎಂಬಾತನ ಕಿವಿಗೆ ಶೌಚಾಲಯದ ಕಿಟಕಿ ಗಾಜಿನ ಚೂರು ತಗುಲಿ ಸಣ್ಣ ಪ್ರಮಾಣದಲ್ಲಿ ಗಾಯವಾಗಿದ್ದನ್ನು ಹೊರತುಪಡಿಸಿದರೆ, ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ಅಂತ್ಯಕ್ರಿಯೆ ಅಂದೇ ಮೈಸೂರಿನಲ್ಲಿ ನಡೆದಿದ್ದರಿಂದ ಹಲವಾರು ಗಣ್ಯಾತಿಗಣ್ಯರು ಮೈಸೂರಿಗೆ ಆಗಮಿಸಿದ್ದರು. ಈ ವೇಳೆಯಲ್ಲೇ ಬಾಂಬ್ ಸ್ಫೋಟಿಸಿ ಗಮನ ಸೆಳೆಯಬೇಕು ಎನ್ನುವುದೂ ಕೂಡ ದುಷ್ಕರ್ಮಿಗಳ ಲೆಕ್ಕಾಚಾರವಾಗಿತ್ತು ಎಂದು ಆ ಸಂದರ್ಭದಲ್ಲಿ ಹೇಳಲಾಗಿತ್ತು.

ನ್ಯಾಯಾಲಯದ ಆವರಣದಲ್ಲಿ ನಡೆದ ಸ್ಫೋಟದಿಂದ ಸಾಂಸ್ಕೃತಿಕ ನಗರಿ ಮೈಸೂರು ಮಾತ್ರವಲ್ಲದೆ ಇಡೀ ರಾಜ್ಯವೇ ತಲ್ಲಣಗೊಂಡಿತ್ತು. ಈ ಹಿಂದೆ ಕೇರಳ ಮತ್ತು ಆಂಧ್ರ ನ್ಯಾಯಾಲಯಗಳಲ್ಲಿ ಸ್ಫೋಟಗಳು ಸಂಭವಿಸಿದ್ದರಿAದ ಅಲ್ಲಿನ ಪೊಲೀಸ್ ಅಧಿಕಾರಿ ಗಳೂ ಕೂಡ ಮೈಸೂರು ನ್ಯಾಯಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಈ ಸ್ಫೋಟದ ಹಿಂದೆ ಉಗ್ರವಾದಿಗಳ ಕೈವಾಡವಿರಬಹುದು ಎಂದು ಶಂಕಿಸಲಾಗಿತ್ತು. ಕೇರಳದ ಕೊಲ್ಲಂ ಮತ್ತು ಆಂಧ್ರದ ಚಿತ್ತೂರು ನ್ಯಾಯಾಲಯಗಳಲ್ಲಿ ನಡೆದಿದ್ದ ಸ್ಫೋಟಕ್ಕೂ, ಮೈಸೂರಿನಲ್ಲಿ ನಡೆದಿದ್ದ ಸ್ಫೋಟಕ್ಕೂ ಸಾಮ್ಯತೆ ಇತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಿ ರಾಷ್ಟಿçÃಯ ತನಿಖಾ ತಂಡಕ್ಕೆ ಜವಾಬ್ದಾರಿಯನ್ನು ವಹಿಸಲಾಗಿತ್ತು. ಎನ್‌ಐಎ ಅಧಿಕಾರಿಗಳು ಮೈಸೂರು ನ್ಯಾಯಾಲಯದ ಸ್ಫೋಟದ ಬಗ್ಗೆ ಅಂದಿನ ಕೇಂದ್ರ ಗೃಹ ಸಚಿವ ರಾಜಾನಾಥ್ ಸಿಂಗ್ ಅವರಿಗೆ ವರದಿ ಸಲ್ಲಿಸಿದ್ದರು. ಕೊನೆಗೂ ಆರೋಪಿಗಳನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು, ಸೂಕ್ತ ಸಾಕ್ಷಾö್ಯಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರನ್ನೂ ದೋಷಿಗಳೆಂದು ಘೋಷಿಸಿ, ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿದೆ.

೨೦೧೬ರ ಆಗಸ್ಟ್ ೧ರಂದು ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದ ಶೌಚಾಲಯದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಶೌಚಾಲಯದ ಮೇಲ್ಛಾವಣ ಹಾರಿಹೋಗಿತ್ತು. ಕಿಟಕಿ ಗಾಜುಗಳು ಸರಳು ಸಮೇತ ಕಿತ್ತು ಬಂದಿದ್ದವು. ೩೦ ಸೆಕೆಂಡ್ ಅಂತರದಲ್ಲಿ ಎರಡು ಸ್ಫೋಟಗಳು ಸಂಭವಿಸಿದ್ದವು. ಶೌಚಾಲಯದಲ್ಲಿಡ ಲಾಗಿದ್ದ ಬ್ಯಾಗ್‌ನಲ್ಲಿ ೩ ಲೀಟರ್ ಕುಕ್ಕರ್ ಇರಿಸಿ ಅದರೊಳಗೆ ೩ ಸೆಲ್ ಹಾಗೂ ಪಿಪಿ ಬೋರ್ಡ್ ಬಳಸಿ ಸ್ಫೋಟ ನಡೆಸಲಾಗಿತ್ತು. ಸ್ಥಳದಲ್ಲಿ ಗನ್‌ಪೌಡರ್‌ನ ೨ ಪ್ಯಾಕೆಟ್‌ಗಳು ಪತ್ತೆಯಾಗಿದ್ದವು. ಈ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು.

Translate »