ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಪೂರಕವಾಗಿ ದಸರಾ ಪ್ರಾಧಿಕಾರ ರಚನೆ ಶೀಘ್ರದಲ್ಲೇ ಪರಿಶೀಲನಾ ಸಭೆ: ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು

ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಪೂರಕವಾಗಿ ದಸರಾ ಪ್ರಾಧಿಕಾರ ರಚನೆ ಶೀಘ್ರದಲ್ಲೇ ಪರಿಶೀಲನಾ ಸಭೆ: ಸಚಿವ ಎಸ್.ಟಿ.ಸೋಮಶೇಖರ್

October 9, 2021

ಎಸ್.ಎಂ.ಕೃಷ್ಣರ ಸಲಹೆಗೆ ಸ್ಪಂದನೆ

ಪ್ರವಾಸ ಪ್ಯಾಕೇಜ್ ಬಗ್ಗೆಯೂ ಚರ್ಚೆ

ಮೈಸೂರು, ಅ.೮(ಎಂಟಿವೈ)-ಮೈಸೂರು ಹಾಗೂ ಸುತ್ತ-ಮುತ್ತಲಿನ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ದಸರಾ ಪ್ರಾಧಿಕಾರ ರಚನೆ ಮಾಡಲಾಗುವುದು ಎಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ .ಸೋಮಶೇಖರ್, ಈ ಸಂಬAಧ ಶೀಘ್ರವೇ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.
ಮೈಸೂರು ಅರಮನೆಯ ವರಹ ದ್ವಾರದ ಬಳಿ ಶುಕ್ರವಾರ ದಸರಾ ಗಜಪಡೆ ಹಾಗೂ ಅಶ್ವಪಡೆಯ ಅಂತಿಮ ಹಂತದ ತಾಲೀಮು ವೀಕ್ಷಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ

ಅವರು, ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು, ಮೈಸೂರು- ಚಾಮರಾಜನಗರದ ಪ್ರವಾಸಿ ತಾಣಗಳ ಅಭಿ ವೃದ್ಧಿ ಸಂಬAಧ ನೀಡಿರುವ ಸಲಹೆಯನ್ನು ಸ್ವೀಕರಿಸಿ, ಜಾರಿಗೊಳಿಸಲು ದಸರಾ ಮುಗಿದ ನಂತರ ಪರಿ ಶೀಲನಾ ಸಭೆ ಮಾಡುತ್ತೇನೆ. ಅಲ್ಲದೆ, ಪ್ರವಾಸ ಪ್ಯಾಕೇಜ್ ರೂಪಿಸುವ ಸಂಬAಧವೂ ಚರ್ಚಿಸ ಲಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳು ಸಭೆ ನಡೆಸಿ ಪರಾಮರ್ಶಿಸಲಿದ್ದಾರೆ ಎಂದರು.

ಮೈಸೂರಿಗೆ ಮಂಜೂರಾಗಿರುವ ಚಿತ್ರನಗರಿ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿ ಸುವ ಬಗ್ಗೆಯೂ ಚರ್ಚಿಸಲಾಗುವುದು. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಎಸ್.ಎಂ.ಕೃಷ್ಣ ಅವರು ನೀಡಿದ ಟೂರಿಸಂ ಕುರಿತು ಕಾರ್ಯಕ್ರಮ ರೂಪಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಟೂರಿಸಂಗೆ ಸಂಬAಧಿಸಿದAತೆ ಮೈಸೂರು, ಚಾಮರಾಜ ನಗರ ಸುತ್ತಮುತ್ತಲಿನ ಅಧಿಕಾರಿಗಳು ವರದಿ ಸಿದ್ಧಪಡಿಸಲಿದ್ದು ಅವರ ಜೊತೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಗಮನಕ್ಕೆ ತರಲಾಗು ವುದು ಎಂದು ಸಚಿವರು ವಿವರಿಸಿದರು.
ದಸರಾ ವೀಕ್ಷಣೆಗೆ ೫೦೦ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೋವಿಡ್ ಮಾರ್ಗ ಸೂಚಿ ನಿಯಮ ಮೀರುವುದಕ್ಕೆ ಸಾಧ್ಯವಿಲ್ಲ. ದಸರಾ ಕಾರ್ಯಕ್ರಮವನ್ನು ಸಾರ್ವಜನಿಕರು ಫೇಸ್‌ಬುಕ್, ಯೂಟ್ಯೂಬ್, ವರ್ಚ್ಯುವಲ್ ನಲ್ಲಿ ವೀಕ್ಷಿಸಬಹುದಾಗಿದೆ. ನವರಾತ್ರಿ ಮೊದಲ ದಿನದ ಸಾಂಸ್ಕöÈತಿಕ ಕಾರ್ಯಕ್ರಮವನ್ನು ೭೦ ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ ಎಂದರು.

ಸಂಬAಧವಿಲ್ಲ: ರಾಜ್ಯದ ವಿವಿಧೆಡೆ ನಡೆದ ಐಟಿ ದಾಳಿಗೂ ಸರ್ಕಾರಕ್ಕೂ ಯಾವುದೇ ಸಂಬAಧವಿಲ್ಲ. ಅಲ್ಲದೆ ದಾಳಿ ಮಾಡಿದ ಮಾತ್ರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಂಬAಧ ಇದೆ ಅಂತಲ್ಲ.

ಲೆಕ್ಕಪತ್ರಗಳ ಬಗ್ಗೆ ಐಟಿ ಇಲಾಖೆಯವರು ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸವಾಲಿನ ಕೆಲಸ: ದಸರಾ ಆನೆ ಹಾಗೂ ಕುದುರೆಗಳಿಗೆ ಸಿಡಿಮದ್ದಿನ ತಾಲೀಮನ್ನು ಅಚ್ಚುಕಟ್ಟಾಗಿ ನಡೆಸಲಾಗಿದೆ. ಪೊಲೀಸ್ ಇಲಾಖೆಗೆ ಸೇರಿದ ೩೦ ಸಿಬ್ಬಂದಿಯುಳ್ಳ ಪಿರಂಗಿ ದಳ ಪ್ರಾಣಾಪಾಯವನ್ನು ಲೆಕ್ಕಿಸದೆ ಸಿಡಿಮದ್ದು ಸಿಡಿಸುವ ಸಾಹಸ ಕಾರ್ಯ ಮಾಡುತ್ತಿದ್ದಾರೆ. ಅಪಾಯ ಹಾಗೂ ಸವಾಲಿನ ಕೆಲಸವಾಗಿದ್ದರೂ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಪಣತೊಟ್ಟಿದ್ದಾರೆ. ಈಗಾಗಲೇ ಸಿಡಿಮದ್ದು ಸಿಡಿಸುವುದಕ್ಕೆ ಸಾಕಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಸಿಬ್ಬಂದಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜೆಎಲ್‌ಆರ್ ಅಧ್ಯಕ್ಷ ಎಂ.ಅಪ್ಪಣ್ಣ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Translate »