ವಿದ್ಯಾರ್ಥಿ ಮಂತ್ರಿ ಮಂಡಲ ಪದಗ್ರಹಣ ಸಮಾರಂಭ
ಮೈಸೂರು

ವಿದ್ಯಾರ್ಥಿ ಮಂತ್ರಿ ಮಂಡಲ ಪದಗ್ರಹಣ ಸಮಾರಂಭ

August 14, 2018

ಮೈಸೂರು: ಸಂತ ಜೋಸೆಫ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜು ಸಾತಗಳ್ಳಿಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ಪದಗ್ರಹಣ ಸಮಾರಂಭ ನಡೆಯಿತು. ವಿದ್ಯಾರ್ಥಿ ಅಧ್ಯಕ್ಷತೆ ವಹಿಸಿದ್ದ ಎಂಡಿಇಎಸ್‍ನ ಕಾರ್ಯದರ್ಶಿ ಹಾಗೂ ವ್ಯವಸ್ಥಾಪಕ ಸ್ವಾಮಿ ವಿಜಯ್ ಕುಮಾರ್ ಮಾತನಾಡಿ, ಇಂದಿನ ಮಕ್ಕಳು ತ್ಯಾಗ, ಸೇವೆ, ಮಾನವೀಯತೆ ಮೈಗೂಡಿಸಿ ಕೊಳ್ಳಬೇಕೆಂದು ಕರೆ ಕೊಟ್ಟರು.

ಸಂತ ಜೋಸೆಫ್ ಹಾಗೂ ಮಥಿಯಾಸ್ ಸಂಸ್ಥೆಗಳ ಉಸ್ತುವಾರಿ ಸ್ವಾಮಿ ಪ್ರವೀಣ್ ಕುಮಾರ್, ಸಂತ ಜೋಸೆಫ್ ಕಾಲೇಜುಗಳ ಸಿಇಓ ಸಿ.ಮಣಿಮ್ಯಾಥ್ಯು, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಅನಿಷಾ ಕುಮಾರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕ್ರಿಸ್ಟಿನಾ ಟೈಲರ್ ವಿದ್ಯಾರ್ಥಿ ನಾಯಕರು ಗಳಿಗೆ ಬ್ಯಾಡ್ಜ್ ಪ್ರಧಾನ ಮಾಡಿದರು. ದೈಹಿಕ ಶಿಕ್ಷಣ ಉಪನ್ಯಾಸಕಿ ವಾಣಿ ಕ್ರಿಸ್ಟೋಫರ್ ಕಾರ್ಯಕ್ರಮ ನಿರೂಪಿಸಿದರು.

Translate »