ಹಿರೋಶಿಮಾ, ನಾಗಾಸಾಕಿ ದಿನ ಆಚರಣೆ
ಮೈಸೂರು

ಹಿರೋಶಿಮಾ, ನಾಗಾಸಾಕಿ ದಿನ ಆಚರಣೆ

August 14, 2018

ಮೈಸೂರು:  ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿ ರುವ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ ದಿನವನ್ನು (ಆ್ಯಂಟಿ ನ್ಯೂಕ್ಲಿಯರ್ ಡೇ) ನೆನೆದು ಇತ್ತೀಚೆಗೆ ಸಂತಾಪ ಸೂಚಿಸಲಾಯಿತು.

ಬಳಿಕ ಪ್ರಾಂಶುಪಾಲ ಶ್ರೀಧರ್ ಮಾತನಾಡಿ, ಜುಲೈ 25, 1945ರಂದು ಅಮೆರಿಕಾ ಮತ್ತು ಯುರೋಪಿಯನ್ ದೇಶಗಳು ಜಪಾನಿನ ಮೇಲೆ ಅಣ್ವಸ್ತ್ರವನ್ನು ಪ್ರಯೋಗ ಮಾಡಲು ನಿರ್ಧರಿಸಿದವು.

ಜಪಾನಿನ ಪ್ರಮುಖ ಸ್ಥಳವಾದ ಹಿರೋಶಿಮಾ ಮೇಲೆ ದಿನಾಂಕ ಆಗಸ್ಟ್ 8, 1945 ರಂದು ಲಿಟಲ್ ಬಾಯ್ (ಯುರೇ ನಿಯಂ ಯುಕ್ತ) ಅಣುಬಾಂಬ್ ಅನ್ನು ಬೋಯಿಂಗ್ ಎಸ್-29 ಮೂಲಕ ಗನ್ ವಿಧದ ಬಾಂಬ್ ಹಾಕಿದ್ದರಿಂದ ಸುಮಾರು 1,60,000 ಜನರು ಸಾವಿಗೀಡಾದರು. ಹಾಗೆಯೇ ಮತ್ತೊಂದು ನಗರವಾದ ನಾಗಾಸಾಕಿಯ ಮೇಲೆ ಬಿ-29 ವಿಮಾನದಲ್ಲಿ (ಪ್ಲೊಟೋನಿಯಂ ಯುಕ್ತ) ಫ್ಯಾಟ್‍ಮನ್ ಎನ್ನುವ ಅಣು ಬಾಂಬ್ ಅನ್ನು ಆಗಸ್ಟ್ 9, 1945ರಂದು ಹಾಕಿದ್ದರಿಂದ ಸುಮಾರು 3 ಲಕ್ಷಕಿಂತ ಹೆಚ್ಚು ಜನರು ಸಾವಿಗೀಡಾದರು. ಇದರಿಂದ ಚಿಂತೆಗೀಡಾದ ಜಪಾನ್ ಆಗಸ್ಟ್ 15, 1945ರಂದು ಶರಣಾಗತ ವಾಯಿತು. ಹಾಗಾಗಿ ಎರಡನೇ ಮಹಾಯುದ್ದ ಮುಕ್ತಾಯ ವಾಯಿತು. ವಿಶ್ವಸಂಸ್ಥೆಯು ಈ ನಗರಗಳ ಮೇಲೆ ಆದ ಪರಿಣಾಮವನ್ನು ಪರಿಗಣಿಸಿ ಸೆಪ್ಟೆಂಬರ್ 2, 1945 ರಂದು ಯಾವುದೇ ದೇಶಗಳು ಇನ್ನು ಮುಂದೆ ಅಣುಬಾಂಬ್ ಪ್ರಯೋಗಿಸಬಾರದು ಎಂಬ ಒಪ್ಪಂದಕ್ಕೆ ಬಂದು ವಿಶ್ವಸಂಸ್ಥೆಯು ಎಲ್ಲಾ ದೇಶಗಳಿಂದ ಸಹಿಯನ್ನು ಹಾಕಿಸಿಕೊಂಡಿತು ಎಂದು ವಿವರವಾಗಿ ಪ್ರಾಂಶುಪಾಲರು ತಿಳಿಸಿದರು.

ವಿಜ್ಞಾನಿ ಡಾ. ಕೃಷ್ಣನ್ ದೊರೆಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರೋಶಿಮಾ ನಾಗಾಸಾಕಿಯ ಮೇಲೆ ಆದ ದೌರ್ಜನ್ಯ, ಪರಿಣಾಮಗಳನ್ನು ತಿಳಿಸುತ್ತಾ ಈಗಲೂ ಕೂಡ ವಿಶ್ವದಲ್ಲಿ ಇದರ ಪರಿಣಾಮ ಎಲ್ಲರ ಮನವನ್ನು ಕಲಕು ವಂತಿದೆ ಎಂದು ತಿಳಿಸಿದರು. ಹಾಗೆಯೇ ಇಂದಿಗೂ ಕೂಡ ಹಿರೋಶಿಮಾ ಹಾಗೂ ನಾಗಾಸಾಕಿಯಲ್ಲಿ ಹಲವಾರು ರೀತಿಯ ಸಾವು ನೋವುಗಳು ಸಂಭವಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಂಯೋಜನಾಧಿಕಾರಿಯಾದ ಶ್ರೀಮತಿ ಕಾಂತಿ ನಾಯಕ್, ಪ್ರಾಂಶುಪಾಲರಾದ ಶ್ರೀಧರ್.ಎಂ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Translate »