ಸಂಗೀತ ವಿವಿ ಕುಲಪತಿ ವರ್ಗಾವಣೆಗೆ ವಿದ್ಯಾರ್ಥಿಗಳ ಆಗ್ರಹ
ಮೈಸೂರು

ಸಂಗೀತ ವಿವಿ ಕುಲಪತಿ ವರ್ಗಾವಣೆಗೆ ವಿದ್ಯಾರ್ಥಿಗಳ ಆಗ್ರಹ

November 5, 2018

ಮೈಸೂರು: ಸಂಗೀತ ವಿಶ್ವವಿದ್ಯಾ ಲಯದ ಮೌಲ್ಯಮಾಪನ ಕುಲಸಚಿವರೂ ಆದ ಹಂಗಾಮಿ ಕುಲಪತಿ ಪ್ರೊ.ರಾಜೇಶ್ ಅವರು ವಿಶ್ವವಿದ್ಯಾನಿಲ ಯದ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿದ್ದು, ಜೊತೆಗೆ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸಂಗೀತ-ಕಲೆಗಳ ವಿಷಯ ಜ್ಞಾನ ಹೊಂದಿರದ ಇವರನ್ನು ಮಾತೃ ಇಲಾಖೆಗೆ ವಾಪಸ್ಸು ಕಳುಹಿಸ ಬೇಕೆಂದು ವಿವಿಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನು ವಾರ ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿ ಮುಖಂಡರು ಈ ರೀತಿ ಒತ್ತಾಯ ಮಾಡಿದ್ದಾರೆ. ವಿದ್ಯಾರ್ಥಿ ಮುಖಂಡ ಸೂರಜ್ ಮಾತನಾಡಿ, ವಿವಿಯ ಅಭಿವೃದ್ಧಿಗೆ ಶ್ರಮಿಸ ಬೇಕಾದ ಹಂಗಾಮಿ ಕುಲಪತಿ ಪ್ರೊ.ರಾಜೇಶ್ ಅವರೇ ವಿವಿಗೆ ಮಾರಕವಾಗುತ್ತಿದ್ದಾರೆ. ಈ ಕೂಡಲೇ ಸರ್ಕಾರ ಇವರನ್ನು ಮಾತೃ ಇಲಾಖೆಗೆ ವಾಪಸ್ಸು ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಶ್ವವಿದ್ಯಾಲಯದಲ್ಲಿ ಮೂಲಭೂತ ಸೌಲಭ್ಯ ಒದ ಗಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದೆವು. ಈ ಹಿನ್ನೆಲೆಯಲ್ಲಿ ಸೆ.9ರಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮಂಡಕಳ್ಳಿಯ ಮುಕ್ತ ವಿವಿಯ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಆದೇಶಿಸಿದ್ದರು. ಅದರಂತೆ ಅ.15ರಿಂದ ಮಂಡ ಕಳ್ಳಿಯಲ್ಲಿರುವ ಮುಕ್ತ ವಿವಿ ಕಟ್ಟಡಕ್ಕೆ ವಿವಿಯ ಕಾರ್ಯ ಚಟುವಟಿಕೆಗಳನ್ನು ಸ್ಥಳಾಂತರ ಮಾಡಲಾಯಿತು. ಆದರೆ ಸಂಗೀತ ಸಲಕರಣೆಗಳು, ಪೀಠೋಪಕರಣ ಗಳು, ಕುಡಿಯುವ ನೀರು ಸೇರಿದಂತೆ ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಲು ಆಸಕ್ತಿ ತೋರದ ಹಂಗಾಮಿ ಕುಲಪತಿ ಪ್ರೊ.ರಾಜೇಶ್, ಮತ್ತೆ ಬಲ್ಲಾಳ್ ವೃತ್ತದಲ್ಲಿ ರುವ ಹಳೆಯ ಕಟ್ಟಡಕ್ಕೆ ವಿಶ್ವವಿದ್ಯಾಲಯವನ್ನು ಸ್ಥಳಾಂತರಿ ಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬಲ್ಲಾಳ್ ವೃತ್ತದಲ್ಲಿರುವ ಹಳೇ ಕಟ್ಟಡದ ಆವರಣ ದಲ್ಲೇ 4.5 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಅಗತ್ಯ ಪ್ರಕ್ರಿಯೆ ನಡೆಸಲು ಉನ್ನತ ಶಿಕ್ಷಣ ಸಚಿವರು ಕುಲಪತಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಕುಲಪತಿ ಪ್ರೊ.ರಾಜೇಶ್ ಅವರು ತಮ್ಮ ಹಾಗೂ ಈ ಹಿಂದಿನ ಕುಲಪತಿಗಳ ಹಿತಾಸಕ್ತಿಗೆ ಅನುಗುಣವಾಗಿ ಯಾವುದೇ ಪ್ರಕ್ರಿಯೆ ನಡೆಸದೇ ಕೈ ಚೆಲ್ಲಿದ್ದಾರೆ. ಜೊತೆಗೆ ವಿವಿಯ ಶೈಕ್ಷಣಿಕ ಚಟುವಟಿಕೆಗಳಿಗೆ ಭಂಗ ತರು ವಂತಹ ಅವೈಜ್ಞಾನಿಕ ತೀರ್ಮಾನಗಳನ್ನು ಕೈಗೊಳ್ಳುತ್ತಿ ದ್ದಾರೆ ಎಂದು ಆಪಾದಿಸಿದರು.
ಸಿಂಡಿಕೇಟ್ ಸಭೆಯ ಅನುಮತಿ ಇಲ್ಲದೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹೊಸ ವಿಷಯಗಳನ್ನು ಸೇರಿಸಿ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ದೂಡಿದ್ದಾರೆ. ವಿದ್ಯಾರ್ಥಿ ಗಳ ದಾಖಲಾತಿ ಹೆಚ್ಚಿಸುವ ಸಲುವಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಹಲವರಿಗೆ ಪ್ರವೇಶ ನೀಡಿ ಅವರಿಗೆ ಹಾಜ ರಾತಿಯಲ್ಲಿ ವಿನಾಯಿತಿ ನೀಡಲಾಗಿದೆ. `ಸೈನ್ಸ್ ಅಂಡ್ ಟೆಕ್ನಾಲಜಿ’ ಎಂಬ ವಿಷಯವನ್ನು ಪಠ್ಯಕ್ರಮದಲ್ಲಿ ಅವೈಜ್ಞಾ ನಿಕವಾಗಿ ಸೇರಿಸಿರುವುದಲ್ಲದೆ, ಯುಜಿಸಿ ನಿಯಮ ದಂತೆ ಕನಿಷ್ಠ 36 ತರಗತಿಗಳನ್ನು ನಡೆಸದೆ ಕೇವಲ 14 ತರಗತಿಗಳನ್ನು ಮಾತ್ರ ನಡೆಸಿದ್ದಾರೆ. ಈ ಸಂಬಂಧ ಪರೀಕ್ಷೆಯೂ ನಡೆದಿದ್ದು, ಅನ್ಯ ವಿಷಯದ ಬೋಧಕರಿಂದ ಮೌಲ್ಯಮಾಪನ ಮಾಡಿಸಿದ್ದಾರೆ ಎಂದು ದೂರಿದರು.

ಬೇಡಿಕೆಗಳು: ಮಂಡಕಳ್ಳಿ ಮುಕ್ತ ವಿವಿ ಕಟ್ಟಡದಿಂದ ಮತ್ತೆ ಬಲ್ಲಾಳ್ ವೃತ್ತದ ಕಟ್ಟಡಕ್ಕೆ ಸ್ಥಳಾಂತರಿಸುವ ನಿರ್ಧಾರವನ್ನು ಕೈ ಬಿಡಬೇಕು. ಕೂಡಲೇ ಬಲ್ಲಾಳ್ ವೃತ್ತದ ವಿವಿ ಆವರಣದಲ್ಲಿ ಉನ್ನತ ಶಿಕ್ಷಣ ಸಚಿವರ ನಿರ್ದೇ ಶನದಂತೆ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕು. ಅಂಕಪಟ್ಟಿ ಸಮಸ್ಯೆ ಸರಿ ಪಡಿಸಿ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಆಗ್ರಹಿಸಿ ದರು. ವಿದ್ಯಾರ್ಥಿಗಳಾದ ಎಂ.ಜಿ.ಸರಸ್ವತಿ, ಸಿದ್ದೇಶ್ವರ್, ವಸಂತಕುಮಾರ್, ಕಿರಣ್‍ಕುಮಾರ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಗೋಷ್ಠಿಯಲ್ಲಿದ್ದರು.

Translate »