ಇಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ
ಮೈಸೂರು

ಇಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ

November 5, 2018

ಮೈಸೂರು: ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸರ್ಕಾರಿ ಆಯುರ್ವೇದ ಹೈ-ಟೆಕ್ ಪಂಚಕರ್ಮ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ನ.5ರಂದು ಬೆಳಿಗ್ಗೆ 5.30 ಗಂಟೆಗೆ ಧನ್ವಂತರಿ ಜಯಂತಿ ಆಚರಣೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ, ಬೆನ್ನು ಹುರಿಯ ಮೂಳೆ ರೋಗಗಳು, ವೆರಿಕೋಸ್ ವೇನ್ಸ್ & ಅಲ್ಸರ್, ಗರ್ಭಿಣಿ ಪರಿಚರ್ಯೆ ಮತ್ತು ಮುಟ್ಟಿನ ಸಮಸ್ಯೆ, ಶಿರೋ ಬಾಧೆ, ಮಕ್ಕಳಲ್ಲಾಗುವ ಕುಂಠಿತ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಈ ತೊಂದರೆಗಳಿಗೆ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ, ಹಾಗೂ ಸಂಜೆ 6.30ರಿಂದ ಆಯುರ್ ದೀಪೆÇೀತ್ಸವ ಕಾರ್ಯಕ್ರಮವನ್ನು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಆಯುರ್ವೇದ ಜಾಗೃತಿ ಸಪ್ತಾಹ ಕುರಿತು ನ.12 ಹಾಗೂ 18ರವರೆಗೆ ಮೈಸೂರಿನ ಆಯ್ದ 70 ಸ್ಥಳಗಳಲ್ಲಿ `ಆಯುರ್ವೇದದಿಂದ ಆರೋಗ್ಯ’ ಕುರಿತು ಸರಣಿ ಉಪನ್ಯಾಸಗಳು ಹಮ್ಮಿಕೊಳ್ಳಲಾಗಿದೆ. ನ.14ರಂದು ಬೆಳಿಗ್ಗೆ 10 ಗಂಟೆಗೆ ಜನ ಸಾಮಾನ್ಯರಲ್ಲಿ ಆಯುರ್ವೇದ ಅರಿವು ಮೂಡಿಸಲು, ಜನ ಜಾಗೃತಿ ಜಾಥಾ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಹಮ್ಮಿ ಕೊಳ್ಳಲಾಗಿದೆ. ಮುಕ್ತ ದಿನ ಆಯುರ್ ದರ್ಶನ ನ.17ರಂದು ಕಾಲೇ ಜಿನ ವಿವಿಧ ವಿಭಾಗಗಳಿಂದ ಮಾಹಿತಿ ಮತ್ತು ಪ್ರದರ್ಶನ ಆಮಲಕಿ ಉತ್ಸವ: ಬೆಟ್ಟದ ನೆಲ್ಲಿಕಾಯಿಯ ಆಹಾರ, ಔಷಧ ಗುಣಗಳು ಹಾಗೂ ಅವುಗಳ ತಯಾರಿಕೆ ಕುರಿತು ವಿಸ್ಕøತ ಕಾರ್ಯಕ್ರಮ ಹಾಗೂ ಅಗ್ನಿ ಇಲ್ಲದೇ ಆಹಾರ ತಯಾರಿಕಾ ಸ್ಪಧೆರ್É ನಡೆಯಲಿದೆ. ನವೆಂಬರ್ 20ರಂದು ಆರೋಗ್ಯ ಸಚಿವರ ಉಪಸ್ಥಿತಿಯಲ್ಲಿ ಆಯುರ್ವೇದ ದಿನಾಚರಣೆ ಪ್ರಯುಕ್ತ ಸಭಾ ಕಾರ್ಯಕ್ರಮ ನಡೆಯಲಿದೆ. ಮಾಹಿತಿಗೆ ಸಂಘಟನಾ ಸಮಿತಿಯ ಮೊ. 94804 41974, 9449772701, 7975491224, 9886116189 ಅನ್ನು ಸಂಪರ್ಕಿಸಬಹುದು.

Translate »