ತಿ.ನರಸೀಪುರದಲ್ಲಿ ಆಕ್ಯುಪಂಕ್ಚರ್ ಚಿಕಿತ್ಸಾ ಶಿಬಿರ
ಮೈಸೂರು

ತಿ.ನರಸೀಪುರದಲ್ಲಿ ಆಕ್ಯುಪಂಕ್ಚರ್ ಚಿಕಿತ್ಸಾ ಶಿಬಿರ

November 5, 2018

ತಿ.ನರಸೀಪು: ಆಕ್ಯುಪಂಕ್ಚರ್ ಚಿಕಿತ್ಸೆಯು ಪ್ರಾಚೀನ ಕಾಲದ ಚಿಕಿತ್ಸಾ ಪದ್ಧತಿಯಾಗಿದ್ದು, ಶಸ್ತ್ರಚಿಕಿತ್ಸೆ ರಹಿತವಾಗಿ 165ಕ್ಕೂ ಹೆಚ್ಚಿನ ಖಾಯಿಲೆಗಳನ್ನು ಗುಣಪಡಿಸಬಹುದಾಗಿದೆ ಎಂದು ಖ್ಯಾತ ವೈದ್ಯ ಡಾ.ಎನ್.ಎಸ್.ಮಹಮ್ಮದ್ ಹಿಫ್ಜುಲ್ಲಾ ಹೇಳಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎನ್‍ಕೆಎಫ್ ಫೌಂಡೇಶನ್ ಹಾಗೂ ಕೌನ್ಸಿಲ್ ಆಫ್ ಇಂಡಿಯನ್ ಆಕ್ಯುಪಂಕ್ಚರ್ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಜೆಎಸ್‍ಎಸ್ ಸಭಾಭವನದಲ್ಲಿ ನಡೆದ ಉಚಿತ ಆಕ್ಯುಪಂಕ್ಚರ್ ಚಿಕಿತ್ಸಾ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.

ಪ್ರಾಚೀನ ಚಿಕಿತ್ಸಾ ಪದ್ಧತಿಯು 8,400 ವರ್ಷದ ಹಿಂದೆ ಚೈನಾ ದೇಶದಲ್ಲಿ ಆರಂಭಗೊಂಡು ಖ್ಯಾತಿಯನ್ನು ಪಡೆದಿದೆ. ಈ ಪದ್ಧತಿಯಲ್ಲಿ ಕೇವಲ ಸೂಜಿ ಚುಚ್ಚುವ ಮೂಲಕ ಮಧುಮೇಹ, ಹೃದಯ ಖಾಯಿಲೆ, ಅಲ್ಸರ್, ಚರ್ಮದ ಖಾಯಿಲೆ, ಬಿಪಿ, ಅಸ್ತಮಾ, ಸೈನಸ್, ಮಂಡಿನೋವು, ಸೊಂಟನೋವು ಸೇರಿದಂತೆ 165 ಪ್ರಮುಖ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಆರ್ಥಿಕ ದುಬಾರಿಯಲ್ಲದ ವಿಜ್ಞಾನದಿಂದ ಹಳೆಯ ಖಾಯಿಲೆಗಳು ಮತ್ತೆ ಬರದಂತೆ ತಡೆಯುವ ಅದ್ಭುತವಾದ ಚಿಕಿತ್ಸೆ ಇದಾಗಿದೆ ಎಂದರು.

ವಾಟಾಳು ಮಠದ ಸಿದ್ದಲಿಂಗಶಿವಾಚಾರ್ಯ ಸ್ವಾಮಿ ಚಿಕಿತ್ಸಾ ಶಿಬಿರದ ಉದ್ಘಾಟನೆ ನೆರವೇರಿಸಿದರು. ಪುರಸಭಾ ಸದಸ್ಯರಾದ ಅಹ್ಮದ್ ಸೈಯಿದ್, ಮಂಜುನಾಥ್, ಹೆಳವರಹುಂಡಿ ಸೋಮು, ಎನ್‍ಕೆಎಫ್ ಅಧ್ಯಕ್ಷ ಫರೀದ್, ಲಾಡ್ಜ್ ಗೋವಿಂದ, ಡಾ.ತುಫೆಲ್ ಅಹ್ಮದ್, ಡಾ.ರೆಡ್ಡಪ್ಪ, ಡಾ.ರಂಗ ನಾಥ್, ಡಾ.ಮೋಹನ್, ಡಾ.ವೆಂಕಟ ಸುಬ್ಬರಾವ್, ಡಾ.ರಂಜನಿ ಪೊನ್ನಚ್ಚ, ಡಾ. ಕೆ.ಆರ್.ಜಾಹ್ನವಿ, ಡಾ.ಅಬ್ದುಲ್ ರೆಹಮಾನ್, ಅಬ್ದುಲ್ ಘನಿ, ರೇಷ್ಮ, ಇಮ್ರಾನ್, ರಾಜಲಕ್ಷ್ಮಿ, ಫರೀದಾಬೇಗಂ, ನರೇಂದ್ರನ್, ನಾಗಮಣಿ, ಪ್ರಶಾಂತ್, ವೆಂಕಟೇಶ್ವರ ಮಟ್ಟಿ, ಪೆದ್ದಣ್ಣ, ಬಾಲವೆಂಕಟರಾಮನ್ ಮತ್ತಿತರಿದ್ದರು.

Translate »