ಸರಗೂರು ಎಪಿಎಂಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಮೈಸೂರು

ಸರಗೂರು ಎಪಿಎಂಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

November 5, 2018

ಸರಗೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರಾಗಿ ಕಾಂಗ್ರೆಸ್‍ನ ಬೊಪ್ಪನಹಳ್ಳಿ ಬಿ.ಪಿ.ಭಾಸ್ಕರ್ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್‍ನ ಮೀನಾಕ್ಷಿ ಆಯ್ಕೆಯಾಗಿದರು.

16 ಸದಸ್ಯರನ್ನೊಳಗೊಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೊಪ್ಪನಹಳ್ಳಿ ಬಿ.ಪಿ.ಭಾಸ್ಕರ್ ಮತ್ತು ಜಗದೀಶ್ ನಾಮಪತ್ರ ಸಲ್ಲಿಸಿದ್ದರು, ಉಪಾಧ್ಯಕ್ಷೆ ಸ್ಥಾನಕ್ಕೆ ರತ್ನಮ್ಮ ಮತ್ತು ಮೀನಾಕ್ಷಿ ನಾಮ ಪತ್ರ ಸಲ್ಲಿಸಿದ್ದರು. ನಂತರ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಬೊಪ್ಪನಹಳ್ಲಿ ಭಾಸ್ಕರ್ ಮತ್ತು ಜಗದೀಶ್ ಅವರಿಗೆ ತಲಾ 8 ಮತಗಳು ಬಂದವು ಲಾಟರಿ ಮೂಲಕ ಬೊಪ್ಪನಹಳ್ಳಿ ಬಿ.ಪಿ.ಭಾಸ್ಕರ್ ಆಯ್ಕೆಯಾದರು. ಹೀಗೆಯೇ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಮೀನಾಕ್ಷಿ ಮತ್ತು ರತ್ನಮ್ಮ ಅವರಿಗೆ ತಲಾ 8 ಮತಗಳು ಬಂದವು. ಲಾಟರಿ ಮೂಲಕ ಮೀನಾಕ್ಷಿ ಸಹ ಆಯ್ಕೆಯಾದರು. ಹೆಚ್.ಡಿ. ಕೋಟೆ ತಹಶೀಲ್ದಾರ್ ಮಂಜುನಾಥ್, ಎಪಿಎಂಸಿ ಕಾರ್ಯದರ್ಶಿ ಭರತ್ ಚುನಾ ವಣೆ ಪ್ರಕ್ರಿಯೆ ನಡೆಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಸಂತೋಷ್, ಸಿದ್ದರಾಜು, ಡಿ.ಪಿ.ಮಹೇಶ್, ಸುಜಾತಾ, ಮಂಜುನಾಥ್, ಹೊ.ಕೆ.ಮಹೇಂದ್ರ, ಜವರನಾಯಕ, ಮಹದೇವಪ್ಪ, ರಾಮಣ್ಣ, ಮಂಜುನಾಥ್, ಉಮ್ಮರ್, ತುಳಸಿ, ಪರ ಶಿವಮೂರ್ತಿ ಉಪಸ್ಥಿತರಿದ್ದರು. ನಂತರ ಕಾಂಗ್ರೆಸ್‍ನಿಂದ ಅಧ್ಯಕ್ಷರಾದ ಬಿ.ಪಿ.ಭಾಸ್ಕರ್ ರವರನ್ನು ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅಭಿನಂದಿ ಸಿದರು. ಪಕ್ಷದ ಕಾರ್ಯರ್ತರಾದ ಮಾಜಿ ಜಿಪಂ ಸದಸ್ಯ ಪಿ.ರವಿ. ಮೈಮೂಲ್ ನಿರ್ದೇಶಕ ಕೆ.ಈರೇಗೌಡ, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಶಂಭುಲಿಂಗನಾಯಕ, ಪಪಂ ಮಾಜಿ ಸದಸ್ಯ ಶ್ರೀನಿವಾಸ್, ರಮೇಶ್, ಕೋಟೆ ಪರಶಿವ ಇದ್ದರು.

Translate »