ನೂತನ ಪದಾಧಿಕಾರಿಗಳ ಆಯ್ಕೆ
ಮೈಸೂರು

ನೂತನ ಪದಾಧಿಕಾರಿಗಳ ಆಯ್ಕೆ

November 5, 2018

ಚುಂಚನಕಟ್ಟೆ:  ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣದ) ತಾಲೂಕು ಘಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆಯ ನಂತರ ಗೌರವ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಮಾರಗೌಡನಹಳ್ಳಿ ಎಂ.ಜೆ.ಮಲ್ಲೇಶ್, ಕೆ.ಆರ್.ನಗರ ತಾಲೂಕಿನಾದ್ಯಂತ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ತಾಲೂಕು ಆಡಳಿತ ಮತ್ತು ಸರ್ಕಾರ ಶೀಘ್ರದಲ್ಲಿಯೇ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಿ ರೈತರು ಬೆಳೆದ ಭತ್ತಕ್ಕೆ ಸಮರ್ಪಕ ಬೆಲೆ ಸಿಗದೆ ದಳ್ಳಾಳಿಗಳ ಮೊರೆ ಹೋಗುವ ಮೂಲಕ ಆಗುವ ನಷ್ಟ ತಪ್ಪಿಸಬೇಕು. ಹಾಗಾಗಿ ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲವಾದಲ್ಲಿ ನ. 12ರಂದು ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಘಟಕದ ಗೌರವಾಧ್ಯಕ್ಷ-ಹೆಚ್.ಎನ್.ರಾಮೇಗೌಡ, ಪ್ರಧಾನ ಕಾರ್ಯದರ್ಶಿ-ಬ್ಯಾಡರಹಳ್ಳಿ ಸಿದ್ದೇಗೌಡ (ಕುಬೇರ), ಉಪಾಧ್ಯಕ್ಷರಾಗಿ ಹೋಂಬಾಳೆಗೌಡ, ಅರ್ಜುನಹಳ್ಳಿ ಬಸಪ್ಪ, ಕಾರ್ಯಾಧ್ಯಕ್ಷ- ಟಿ.ಎಂ.ಮಲ್ಲೇಶ್, ಜಿಲ್ಲಾ ಖಾಯಂ ಸಮಿತಿ ಸದಸ್ಯರಾಗಿ ಮೂಡಲಬೀಡು ಮಹದೇವ್, ಎಂ.ಎಸ್. ನಟರಾಜು, ದೊಡ್ಡಕೊಪ್ಪಲು ಲೋಕೇಶ್ ಅರ್ಜುನಹಳ್ಳಿ ಮಂಜುನಾಥ್ ಆಯ್ಕೆಯಾದರು.

Translate »