ನ.11ರಂದು ಕಾಯಕ ಸಮಾಜಗಳ ಒಕ್ಕೂಟ ಅಸ್ತಿತ್ವಕ್ಕೆ
ಮೈಸೂರು

ನ.11ರಂದು ಕಾಯಕ ಸಮಾಜಗಳ ಒಕ್ಕೂಟ ಅಸ್ತಿತ್ವಕ್ಕೆ

November 5, 2018

ನಂಜನಗೂಡು: ವಿವಿಧ ಕೆಲಸಗಳನ್ನು ಮಾಡುತ್ತಾ ಅಲೆಮಾರಿ ಗಳಾಗಿ ಬದುಕು ನಡೆಸಿಕೊಂಡು ಬರುತ್ತಿ ರುವ ಕಾಯಕ ಸಮಾಜದ ಜನರು ನ್ಯಾಯ ಒದಗಿಸಬೇಕೆಂಬ ದೃಷ್ಟಿಯಿಂದ ನ.11 ರಂದು ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟ ಅಸ್ತಿತ್ವಕ್ಕೆ ಬರಲಿದೆ ಎಂದು ವಿಧಾನಸಭಾ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಾವು ತಯಾರಿ ಸುವಂತಹ ವಸ್ತುಗಳಿಗೆ ಮಾರು ಕಟ್ಟೆ ಕೊರತೆ ಎದುರಾಗುತ್ತಿರುವುದರಿಂದ ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ಆದ್ದರಿಂದ ಕಾಯಕ ಸಮಾಜ ವನ್ನು ಸರ್ಕಾರ ಗುರು ತಿಸಿ ಸೌಲಭ್ಯಗಳನ್ನು ಒದಗಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಸುಮಾರು 21 ಸೂಕ್ಷ್ಮ ಜಾತಿಗಳನ್ನು ಕಾಯಕ ಸಮಾಜದ ಒಕ್ಕೂಟದ ಅಡಿಯಲ್ಲಿ ಒಂದಾಗಿಸುತ್ತಿ ದ್ದೇವೆ. ಪ್ರತಿ ತಾಲೂಕಿನಲ್ಲೂ ಘಟಕಗಳನ್ನು ರಚಿಸಲಾಗಿದೆ. ಎಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಉದ್ಘಾಟನೆಯು ನ.11ರಂದು ಮೈಸೂರಿನ ಟೌನ್‍ಹಾಲ್‍ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರು ಬಸವಣ್ಣನವರ ಭಾವಚಿತ್ರ ಅನಾವರಣ ಗೊಳಿಸುವರು.

ಇದೇ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಚಂದ್ರ ಶೇಖರ್ ಕಂಬಾರ ಅವರನ್ನು ಸನ್ಮಾನಿಸಲಾಗುವುದು. ಬೃಹನ್ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘ ರಾಜೇಂದ್ರ ಶ್ರೀಗಳು ಮತ್ತು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸುವರು ಎಂದರು.

ಗೋಷ್ಠಿಯಲ್ಲಿ ಕಾಯಕ ಸಮಾಜದ ತಾಲೂಕು ಅಧ್ಯಕ್ಷ ಮಹದೇವ ಗಾಣಿಗ, ರಂಗಸ್ವಾಮಿ, ಹೆಚ್.ಎಸ್.ಮೂಗ ಶೆಟ್ಟಿ, ನಟೇಶ್, ಸಿದ್ದರಾಜು ಮತ್ತಿತರರಿದ್ದರು.

Translate »