ಮೈಸೂರು,ಸೆ.22(ಆರ್‍ಕೆಬಿ)- ಒಬ್ಬ ದಕ್ಷ ಜಿಲ್ಲಾಧಿಕಾರಿ ಯಾವುದೇ ಕಠಿಣ ಪರಿಸ್ಥಿತಿ ಯನ್ನೂ ತಾಳ್ಮೆ ಹಾಗೂ ತನ್ನನ್ನು ಪರಿಸ್ಥಿತಿಗೆ ಅರ್ಪಿಸಿಕೊಂಡರೆ ಜಿಲ್ಲೆಯನ್ನು ಸುಸ್ಥಿತಿಯ ಲ್ಲಿಡಬಹುದು ಎಂಬುದನ್ನು ಅಭಿರಾಂ ಜಿ.ಶಂಕರ್ ನಿರೂಪಿಸಿ ತೋರಿಸಿ ಕೊಟ್ಟಿ ದ್ದಾರೆ ಎಂದು ಕರ್ನಾಟಕ ರಾಜ್ಯ ವಾಣಿಜ್ಯ ಮಹಾಮಂಡಳಿ (ಎಫ್‍ಕೆಸಿಸಿಐ) ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತಿಳಿಸಿದರು.
ಪ್ರಸ್ತುತ ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶಕರಾಗಿರುವ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವ ರನ್ನು ಎಫ್‍ಕೆಸಿಸಿಐ ಮತ್ತು ಎಂಸಿಸಿಐ ವತಿ ಯಿಂದ ಸನ್ಮಾನಿಸಿ ಅವರು ಮಾತನಾಡಿ ದರು. ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಕೊರೊನಾ ವೈರಸ್ ಮೊದಲ ಬಾರಿಗೆ 70 ಜನರಿಗೆ ತಗುಲಿ ದಾಗ ಇಡೀ ಮೈಸೂರನ್ನು ರಾಜ್ಯಾದ್ಯಂತ ರೆಡ್ eóÉೂೀನ್ ಎಂದು ನೋಡುವ ಪರಿ ಸ್ಥಿತಿಗೆ ಬಂದಿತ್ತು. ಆ ವೇಳೆ ಅಭಿರಾಂ ಜಿ. ಶಂಕರ್ ತಮ್ಮ ಕಾರ್ಯದಕ್ಷತೆಯಿಂದ ಜಿಲ್ಲೆ ಯನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಅಧಿಕಾರಿ ವರ್ಗಗಳ ಮೂಲಕ ಮೈಸೂ ರಲ್ಲಿ ಆ ದಿನದ ಮಟ್ಟಿಗೆ ಒಮ್ಮೆ ಸಂಪೂರ್ಣ ವಾಗಿ ಕೊರೊನಾ ವೈರಸ್ ಮುಕ್ತ ಜಿಲ್ಲೆ ಯಾಗಿ ನೋಡಿಕೊಂಡಿದ್ದರು. ಯಾವುದೇ ಕಾರಣಕ್ಕೂ ಹೆಚ್ಚಿನ ಪ್ರಚಾರಕ್ಕಾಗಿ ಕೆಲಸ ನಿರ್ವಹಿಸದೆ ತಮ್ಮ ಕರ್ತವ್ಯವನ್ನು ನಿಷ್ಠೆ ಯಿಂದ ಮಾಡಿದ್ದಾರೆ ಎಂದು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಕಾರ್ಯ ದರ್ಶಿ ಶ್ರೀಶೈಲಾ ರಾಮಣ್ಣ, ರವೀಂದ್ರಸ್ವಾಮಿ, ಅಶೋಕ್, ವಿನೋದ್ ಜೈನ್, ಶ್ರೀಹರಿ, ಮಹೇಂದ್ರ ಇನ್ನಿತರರು ಉಪಸ್ಥಿತರಿದ್ದರು.