- ಪ್ರಧಾನಿ ಮೋದಿ ಕರೆಗೆ ಜಿಲ್ಲೆಯಾದ್ಯಂತ ಅಭೂತಪೂರ್ವ ಬೆಂಬಲ
- ಮನೆಯಿಂದ ಹೊರಬಾರದ ಜನ
- ರಸ್ತೆಗಿಳಿಯದ ವಾಹನಗಳು
- ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣ, ಮಾರ್ಕೆಟ್,ಪೇಟೆ ಬೀದಿ ರಸ್ತೆಗಳು.!
ಮಂಡ್ಯ, ಮಾ.22(ನಾಗಯ್ಯ)-ಇಡೀ ವಿಶ್ವವನ್ನೇ ಆವರಿಸಿರುವ ಕೊರೊನಾ ವೈರಸ್ ಭಾರತದೊಳಗೂ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಭಾನುವಾರದ ಜನತಾ ಕಪ್ರ್ಯೂಗೆ ಮಂಡ್ಯ ಜಿಲ್ಲೆಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಜಿಲ್ಲಾಕೇಂದ್ರ ಮಂಡ್ಯ ಸಿಟಿ, ಕೆಆರ್ ಪೇಟೆ, ನಾಗಮಂಗಲ, ಪಾಂಡವಪುರ, ಶ್ರೀರಂಗ ಪಟ್ಟಣ, ಮದ್ದೂರು, ಮಳವಳ್ಳಿ ತಾಲೂಕು ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿಯೂ ಸಹ ಜನತಾ ಕಫ್ರ್ಯೂಗೆ ಜನ ಬೆಂಬಲ ವ್ಯಕ್ತವಾಗಿರುವ ಬಗ್ಗೆ ವರದಿಯಾಗಿದೆ.
ಮಂಡ್ಯಸ್ತಬ್ಧ: ಭಾನುವಾರ ಇಡೀದಿನ ಜಿಲ್ಲಾ ಕೇಂದ್ರ ಮಂಡ್ಯ,ಜನತಾ ಕಪ್ರ್ಯೂಗೆ ಸ್ತಬ್ಧವಾಗಿತ್ತು. ಸಾಮಾನ್ಯವಾಗಿ ಬಂದ್‍ಗಳಿಗೆ ಕರೆ ಕೊಟ್ಟಾಗ ಸ್ವಲ್ಪ ಪ್ರತಿಭಟನೆಗಳು ನಡೆ ಯುತ್ತವೆ. ಆದರೆ ಈ ಬಾರಿ ಮಾತ್ರ ಯಾವುದೇ ಪ್ರತಿಭಟನೆಯೇ ಇಲ್ಲದೆ ಮೋದಿಯವರ ಕರೆಗೆ ಮಂಡ್ಯದ ಜನ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸುವ ಮೂಲಕ ಸಂಪೂರ್ಣ ವಾಗಿ ಬೆಂಬಲ ವ್ಯಕ್ತ ಪಡಿಸಿದ್ದುದು ಕಂಡುಬಂತು.
ಸದಾ ಸಾವಿರಾರು ವಾಹನಗಳು, ಜನ ರಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ಹೆದ್ದಾರಿಯ ಪ್ರಮುಖ ವೃತ್ತಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಹಾಲು ಮಾರುವ ಅಂಗಡಿ ಗಳು, ಪತ್ರಿಕೆ ಹಂಚುವವರು ತಮ್ಮ ದೈನಂ ದಿನ ಚಟುವಟಿಕೆ ಮುಗಿಸಿ ಬೆಳಿಗ್ಗೆ 7 ಗಂಟೆಗೆ ಮನೆ ಹೋಗಿದ್ದು ಬಿಟ್ಟರೆ ಬೇರೆ ಯಾರೂ ಸಹ ಮನೆಯಿಂದ ಹೊರಗೆ ಬರದೆ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದುದು ಕಂಡು ಬಂತು.
ಕಾವೇರಿ ಹೋರಾಟದ ಕಫ್ರ್ಯೂ ಸಂದರ್ಭದಲ್ಲಿಯೂ ನಿಲ್ಲದ ಮಂಡ್ಯದ ಮಾರುಕಟ್ಟೆ ವ್ಯಾಪಾರ ಇದೇ ಮೊದಲ ಬಾರಿಗೆ ಸಂಪೂರ್ಣ ಬಂದ್ ಆಗಿತ್ತು, ಕೆಲವು ಮೆಡಿಕಲ್ಸ್ ಸ್ಟೋರ್‍ಗಳು ಬಾಗಿಲು ತೆರೆದು ಕೊರೊನಾ ತಡೆಗೆ ಉಪಯೋಗಿ ಸುವ ಮಾಸ್ಕ್ ಮತ್ತು ಅಗತ್ಯ ಔಷಧಿಯನ್ನು ಮಾರಾಟ ಮಾಡಿದವು. ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವು ಕಾರ್ಯ ನಿರ್ವಹಿಸಿದ್ದು ಹೊರತು ಪಡಿಸಿದರೆ, ರೈಲ್ವೆ, ಬಸ್ ನಿಲ್ದಾಣ, ಮಾರ್ಕೇಟ್, ಪೇಟೆ ಬೀದಿಗಳು, ಸಿನಿಮಾ ಥಿಯೇಟರ್ ಬಹುತೇಕ ಆಸ್ಪತ್ರೆಗಳು, ದೊಡ್ಡ ದೊಡ್ಡ ಮಾಲ್‍ಗಳು, ಬಾರ್ ಮತ್ತು ವೈನ್ ಸ್ಟೋರ್ ಗಳು, ರಸ್ತೆ ಬದಿಯ ಕೈಗಾಡಿ, ಟೀ ಅಂಗಡಿ ಗಳು ಕೂಡ ಬಂದ್ ಆಗಿದ್ದವು. ಅಲ್ಲಲ್ಲಿ ವರ್ತ ಕರು ಮುಚ್ಚಿದ್ದ ಅಂಗಡಿಗಳಲ್ಲಿ, ಮಾರುಕಟ್ಟೆ ಯಲ್ಲಿ ಕೊರೊನಾ ತಡೆಗಾಗಿ ಬಂದ್ ಮಾಡಿ ರುವ ಸೂಚನಾ ಫಲಕವನ್ನು ಹಾಕಿದ್ದುದು ಕಂಡು ಬಂತು. ಪೆಟ್ರೋಲ್ ಬಂಕ್‍ಗಳು ತೆರೆದಿದ್ದರೂ ಸಹ ಬೆರಳೆಣಿಕೆಯಷ್ಟು ಜನರು ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿ ಸುತ್ತಿದ್ದುದು ಗೋಚರಿಸಿತು. ಅಲ್ಲೊಂದಿ ಲ್ಲೊಂದು ಬೈಕ್‍ಗಳು, ಲಾರಿಗಳು, ಆಟೋಗಳು, ಎಮರ್ಜೆನ್ಸಿ ಆಂಬುಲೆನ್ಸ್, ಗಸ್ತು ತಿರುಗೋ ಪೆÇಲೀಸ್ ವಾಹನ ಗಳನ್ನು ಬಿಟ್ಟರೆ ಸಂಪೂರ್ಣವಾಗಿ ವಾಹನ ಸಂಚಾರ ಬಂದ್ ಆಗಿತ್ತು, ಬೆಂಗ ಳೂರು-ಮೈಸೂರು ಹೈವೆ ಬಿಕೋ ಎನ್ನುತ್ತಿತ್ತು, ಹಳ್ಳಿಗಳ ಕಡೆಯಿಂದಲೂ ಸಹ ನಗರದತ್ತ ಯಾವುದೇ ವಾಹನಗಳ ಸಂಚಾರವಿರಲಿಲ್ಲ.
ಹೆದ್ದಾರಿ ಡಾಬಾಗಳು ಬಂದ್: ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಹೆದ್ದಾರಿಯ ಡಾಬಾ, ಹೋಟೆಲ್‍ಗಳನ್ನು ಬಂದ್ ಮಾಡುವಂತೆ ಆದೇಶಹೊರಡಿ ಸಿದ್ದು ಅದರಂತೆ ಇಂದು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಿಲ್ಲೆಯ ಆರಂಭದ ಗಡಿಭಾಗ ಮದ್ದೂರು ತಾಲೂಕಿನ ನಿಡಘಟ್ಟದಿಂದ-ಕೊನೆಭಾಗ ಶ್ರೀರಂಗಪಟ್ಟಣದ ನಗುವಿನಹಳ್ಳಿಯ ವರೆಗಿನ ಎಲ್ಲಾ ತರಹದ ಹೋಟೆಲ್, ಡಾಬಾ ಸೇರಿದಂತೆ ಇತರೆ ಎಲ್ಲಾ ರೀತಿಯ ಮುಂಗಟ್ಟುಗಳು ಮುಚ್ಚಿದ್ದುದು ಕಂಡುಬಂತು.
ದೇವಾಲಯಗಳು ಬಂದ್: ಕೊರೊನಾ ತಡೆಗೆ ಭಕ್ತರಿಗೆ ನಿಷೇಧವೇರಿ ಹೊರಡಿ ಸಿದ್ದ ಆದೇಶದಂತೆಯೇ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ಗಂಜಾಂ ನಿಮಿಷಾಂಬಾ, ಮೇಲುಕೋಟೆಯ ಚಲುವನಾರಾಯಣ ಸ್ವಾಮಿ, ಆದಿಚುಂಚನಗಿರಿಯ ಕಾಲ ಭೈರವೇಶ್ವರ, ನಾಗಮಂಗಲದ ಸೌಮ್ಯ ಕೇಶವ ದೇವಾಲಯ ಸೇರಿದಂತೆ ಜಿಲ್ಲೆ ಯಾದ್ಯಂತ ಎಲ್ಲಾ ಪ್ರಮುಖ ದೇವಸ್ಥಾನ ಗಳು ಭಕ್ತರಿಗೆ ಬಾಗಿಲು ತೆರೆದಿರಲಿಲ್ಲ.
ಪ್ರವಾಸಿತಾಣಗಳು ಬಂದ್: ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮಳ ವಳ್ಳಿ ಬಳಿಯ ಗಗನಚುಕ್ಕಿ,ಭರಚುಕ್ಕಿ ಶಿವನ ಸಮುದ್ರ, ಮುತ್ತತ್ತಿ, ಶ್ರಿರಂಗಪಟ್ಟಣ ಬಳಿಯ ಟಿಪ್ಪುಕೋಟೆ, ದರಿಯಾದೌಲತ್, ಗುಂಬಜ್, ಸಂಗಮ್, ರಂಗನತಿಟ್ಟು ಪಕ್ಷಿಧಾಮ, ಕರೀ ಘಟ್ಟ, ಮೇಲುಕೋಟೆ, ಪಾಂಡವಪುರದ ಕುಂತಿ ಬೆಟ್ಟಕೆರೆ ತೊಣ್ಣೂರು ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರವಾಸಿತಾಣಗಳು ಸಹ ಬಂದ್ ಆಗಿದ್ದವು.
ಒಟ್ಟಾರೆ ಇಂದಿನ ಜನರಿಂದ ಜನರಿ ಗೋಸ್ಕರ ನಡೆದ ಜನತಾ ಕಫ್ರ್ಯೂಗೆ ಜಿಲ್ಲೆಯ ಜನ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ, ನಗರ ಪ್ರದೇಶ ಸೇರಿ ದಂತೆ ಗ್ರಾಮಾಂತರ ಪ್ರದೇಶದಲ್ಲಿ ಕೂಡ ಜನರು ಪ್ರಧಾನಿ ಮನವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.