ಕಿಕ್ಕೇರಿ,ಮಾ.22-ಜನತಾ ಕಫ್ರ್ಯೂವಿನ ಪರಿಣಾಮ ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಿಕೊಂಡು ನಡೆಯಬೇಕಿದ್ದ ಮದುವೆ ಸರಳವಾಗಿ ನಡೆಯಿತು. ಹೋಬಳಿಯ ಕಾಳೇನಹಳ್ಳಿ ಗ್ರಾಮದ ಜಗನ್ನಾಥ್ ಮಿಲ್ಟ್ರಿ ಹೋಟೆಲ್ ಜಗದೀಶ್ ಅವರು ತಮ್ಮ ಮಗಳು(ರೇವತಿ) ಮದುವೆಯನ್ನು ಪಟ್ಟ ಣದ ಮಂದಗೆರೆ ರಸ್ತೆಯಲ್ಲಿರುವ ರಂಗಮ್ಮ ತಮ್ಮಯ್ಯ ಸಮುದಾಯಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದರು.
ಮದುವೆ 10.30ಕ್ಕೆ ನಡೆಯಬೇಕಿತ್ತು. ಕೊರೊನಾ ನಿಯಂತ್ರಣ ಹಾಗೂ ವಿರುದ್ಧ ಹೋರಾಟಕ್ಕಾಗಿ ದಿಢೀರನೇ ಜನತಾ ಕಫ್ರ್ಯೂ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಘೋಷಣೆಯಾಗಿದ್ದ ಕಾರಣ ವಧು-ವರರ ಮನೆಯವರಿಬ್ಬರೂ ಸೇರಿ ವಿವಾಹದ ಎಲ್ಲ ಶಾಸ್ತ್ರಗಳನ್ನು ಮುಂಜಾನೆ 7ರೊಳಗೆ ಮುಗಿಸಲು ತಯಾರಿ ನಡೆಸಿದರು.
ಮುಂಜಾನೆ 7ರೊಳಗೆ ಮಂತ್ರ ಮಾಂಗಲ್ಯಧಾರಣೆ ನಡೆಸಿ ವಧುವರರನ್ನು ಆಶೀರ್ವದಿಸಿದರು. ಲಕ್ಷಾಂತರ ರೂ.ಗಳ ವೆಚ್ಚವನ್ನು ತಗ್ಗಿಸಿ ಸರಳವಾಗಿ ಊಟೋ ಪಚಾರ ನಡೆಸಿದರು.
ನೂತನ ವಧುವರರಾದ ರೇವತಿ, ಮಹ ದೇವಸ್ವಾಮಿ ಮಾಸ್ಕ್ ಧರಿಸಿಕೊಂಡು ಸತಿಪತಿಗಳಾದರು. ನಂತರ ಮದುವೆ ಮಂಟಪ ದಿಂದ ಹೊರಬಂದು ಜನತಾ ಕಫ್ರ್ಯೂಗೆ ತಮ್ಮ ಸಹಕಾರವಿದೆ. ಜನದಟ್ಟಣೆ ಬೇಡ. ವೈರಾಣು ಹರಡುವುದು ಬೇಡ ಎಂದು ಜನತಾ ಕಫ್ರ್ಯೂವಿಗೆ ಜೈಕಾರ ಹಾಕಿದರು.
ಕೆ.ಆರ್.ಪೇಟೆವರದಿ:ರಾಜ್ಯ ಗೃಹರಕ್ಷ ದಳದ ಇಲಾಖೆಯ ನೌಕರ ನಾರ್ಗೋನ ಹಳ್ಳಿಯ ಸಾಯಿಕುಮಾರ್ ಮತ್ತು ನಿಸರ್ಗ ಅವರು ತಾಲೂಕಿನ ಹೊಸಹೊಳಲು ಸಿಂಗಮ್ಮ ದೇವಸ್ಥಾನದ ಬಳಿಯ ಸಮು ದಾಯ ಭವನದಲ್ಲಿ ನಿಗದಿ ಪಡಿಸಿದ್ದ ಅದ್ದೂರಿ ವಿವಾಹವನ್ನು ಕೈಬಿಟ್ಟು ಕೆಲವೇ ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಮಾಸ್ಕ್ ಧರಿಸಿ ವಿವಾಹವಾಗಿ ಮನೆಗೆ ತೆರಳಿದರು.