ಪಿಎಸ್‍ಎಸ್‍ಕೆ ಗುತ್ತಿಗೆ ನೌಕರರ ಆತ್ಮಹತ್ಯೆ ಯತ್ನ
ಮಂಡ್ಯ

ಪಿಎಸ್‍ಎಸ್‍ಕೆ ಗುತ್ತಿಗೆ ನೌಕರರ ಆತ್ಮಹತ್ಯೆ ಯತ್ನ

July 20, 2021

ಪಾಂಡವಪುರ, ಜು.19- ತಾಲೂಕಿನ ಪಿಎಸ್‍ಎಸ್‍ಕೆ ಕಾರ್ಖಾನೆಯ ಗುತ್ತಿಗೆ ನೌಕರ ರಾಗಿ ಕೆಲಸ ಮಾಡಿದ 21 ಮಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಕೊಳ್ಳದ ಹಿನ್ನೆಲೆಯಲ್ಲಿ ಇಬ್ಬರು ನೌಕರರು ಕಾರ್ಖಾನೆ ಬಾಯ್ಲರ್ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕಾರ್ಖಾನೆಯ ಆವರಣದಲ್ಲಿ ಜಮಾ ಯಿಸಿದ ಗುತ್ತಿಗೆ ಕಾರ್ಮಿಕರು ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು, ಕಾರ್ಖಾನೆಯ ಅಧಿಕಾರಿ ಗಳು ನೌಕರರ ಮನವಿಗೆ ಸ್ಪಂದಿಸದ ಹಿನ್ನೆಲೆ ಯಲ್ಲಿ ಸೋಮವಾರ ಬೆಳಗ್ಗೆ ಗುತ್ತಿಗೆ ಕಾರ್ಮಿಕ ರಾದ ಮನು ಮತ್ತು ರಾಮಕೃಷ್ಣ ಎಂಬು ವರು ಕಾರ್ಖಾನೆಯ ಆವರಣ ದಲ್ಲಿರುವ ಬಾಯ್ಲರ್ ಮೇಲೇರಿ ಆತ್ಮಹತ್ಯೆಗೆ ಮುಂದಾ ದರು. ವಿಷಯ ತಿಳಿದ ಪೊಲೀಸರು ಮತ್ತು ಅಧಿಕಾರಿಗಳು ತಕ್ಷಣ ಸ್ಥಳಕ್ಕಾಗಮಿಸಿ ಕಾರ್ಮಿಕ ರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ, ಅದಕ್ಕೆ ಒಪ್ಪದ ಕಾರ್ಮಿ ಕರು ಮನಗೆ ನೇಮಕದ ಆದೇಶ ಪತ್ರ ನೀಡುವವರೆಗೂ ಕೆಳಗೆ ಇಳಿಯುವುದಿಲ್ಲ ಎಂಬುದಾಗಿ ಪುಟ್ಟುಹಿಡಿದರು. ಬಳಿಕ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಸ್ಥಳ ಕ್ಕಾಗಮಿಸಿ ಕಾರ್ಖಾನೆಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಅವರನ್ನು ಕಾರ್ಖಾ ನೆಯ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ತಿಳಿಸಿದ ಬಳಿಕ ಕಾರ್ಖಾನೆಯ ಅಧಿಕಾರಿಗಳು 21 ಮಂದಿ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡು ಆದೇಶ ಪತ್ರ ನೀಡಿದರು. ಆದೇಶ ಪತ್ರ ಕೈಸೇರಿದ ಬಳಿಕ ಬಾಯ್ಲರ್ ಮೇಲೇರಿದ್ದ ಇಬ್ಬರು ಕೆಳಗಿಳಿದು ಪ್ರತಿಭ ಟನೆ ಅಂತ್ಯಗೊಳಿಸಿದರು. ಮಧ್ಯಾಹ್ನ 21 ಮಂದಿ ನೌಕರರು ಕೆಲಸಕ್ಕೆ ಹಾಜರಾದರು.

ಪ್ರತಿಭಟನೆ ಹಿನ್ನೆಲೆ: ಕಳೆದ ಹತ್ತಾರು ವರ್ಷಗಳಿಂದ ಪಿಎಸ್‍ಎಸ್‍ಕೆ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡಿದ 21 ಮಂದಿ ನೌಕರರನ್ನು ಈಗ ಗುತ್ತಿಗೆ ಪಡೆದಿ ರುವ ನಿರಾಣಿ ಶುಗರ್ಸ್ ಸಂಸ್ಥೆಯ ಅಧಿಕಾರಿಗಳು ಬಿಡುಗಡೆಗೊಳಿಸಿದ್ದರು. ಆದರೆ, ನೌಕರರು ಕೋರ್ಟ್ ಮೆಟ್ಟಿಲೇರಿ, ಇವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕೋರ್ಟ್ ಸಹ ಆದೇಶಿಸಿತ್ತು. ಆದರೆ, ನಿರಾಣಿ ಶುಗರ್ಸ್ ಕಂಪನಿಯವರು ಇವ ರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾ ಕರಿಸಿತ್ತು. ಇದರಿಂದಾಗಿ ಕಾರ್ಖಾನೆಯ 21 ಮಂದಿ ಗುತ್ತಿಗೆ ಕಾರ್ಮಿಕರು ಕೆಳೆದ ಹಲವು ದಿನಗಳಿಂದ ಕಾರ್ಖಾನೆ ಎದುರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಇಂದು ಬೆಳಗ್ಗೆ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಇಬ್ಬರು ಕಾರ್ಮಿಕರು ಕಾರ್ಖಾನೆಯ ಬಾಯ್ಲರ್ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ನಂತರ ಪ್ರಕರಣ ಸುಖಾಂತ್ಯ ಕಂಡಿತು.

Translate »