ಸಮೃದ್ಧ ಜೀವನಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ
ಮೈಸೂರು

ಸಮೃದ್ಧ ಜೀವನಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ

February 14, 2023

ಮೈಸೂರು, ಫೆ.13(ಎಸ್‍ಬಿಡಿ)- ಸಮೃದ್ಧ ಜೀವನಕ್ಕಾಗಿ ಮುಂದಿನ ಚುನಾ ವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬ ಲಿಸುವಂತೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮೈಸೂರಿನ ರಾಮಕೃಷ್ಣನಗರ 58ನೇ ವಾರ್ಡ್‍ನಲ್ಲಿ ನಡೆದ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾ ಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ. ನಂತರ ಬಡವರಿಗೆ ತಲಾ 10 ಕೆಜಿ ಅಕ್ಕಿ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಮುಖ್ಯಸ್ಥೆಗೆ 2 ಸಾವಿರ ನೆರವು ಸೇರಿದಂತೆ ಹತ್ತಾರು ಜನಪರ ಕಾರ್ಯಗಳ ಅನುಷ್ಠಾನ ವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಎಲ್ಲಾ ವರ್ಗ ಹಾಗೂ ಧರ್ಮ ದವರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ಏಕೈಕ ಪಕ್ಷ ಕಾಂಗ್ರೆಸ್. ಕೇಂದ್ರ ದಲ್ಲಿ ಬಿಜೆಪಿ ಕಳೆದ 8 ವರ್ಷಗಳಲ್ಲಿ ದೇಶವನ್ನೇ ಲೂಟಿ ಮಾಡಿದೆ. ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಏರಿಸಿ ಸಾಮಾ ನ್ಯರ ಬದುಕನ್ನು ದುಸ್ತರ ಮಾಡಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕಾಮಗಾರಿ ಗುತ್ತಿಗೆಯಲ್ಲಿ 40 ಪರ್ಸೆಂಟ್ ಕಮಿಷನ್, ಪಿಎಸ್‍ಐ ಹಗರಣ, ಕೊರೊನಾ ನಿರ್ವಹಣೆಯಲ್ಲಿನ ಹಗರಣ ಮೂಲಕ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಆರೋಪಿಸಿದರು. ಬೂತ್ ಮಟ್ಟದ ಕಾರ್ಯ ಕರ್ತರು ಬಿಜೆಪಿ ಸರ್ಕಾರದ ಹಗರಣ ಹಾಗೂ ವೈಫಲ್ಯಗಳನ್ನು ಜನರಿಗೆ ತಿಳಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕು. ಸಮೃದ್ಧ ಜೀವನಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬ ಲಿಸುವಂತೆ ಮನವಿ ಮಾಡಬೇಕು. ಸಿದ್ದ ರಾಮಯ್ಯನವರು ಮುಖ್ಯಮಂತ್ರಿಯಾ ಗಿದ್ದಾಗ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ 1,500 ಕೋಟಿ ನೀಡಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ, ಮೈತ್ರಿ, ಮನಸ್ವಿನಿ, ಕೃಷಿಭಾಗ್ಯ, ರೈತರ ಸಾಲಮನ್ನಾ, ಪರಿಶಿಷ್ಟ ಜಾತಿ, ಪಂಗಡದವರ ಸಾಲಮನ್ನಾ, ಬಡ್ತಿ ಮೀಸಲಾತಿ ಹೀಗೆ ಹತ್ತಾರು ಜನಪರ ಕಾರ್ಯಕ್ರಮಗಳ ಮೂಲಕ ನುಡಿದಂತೆ ನಡೆದಿದ್ದಾರೆ. ಈ ಎಲ್ಲಾ ವಿಷಯಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಸಂಕಲ್ಪದೊಂದಿಗೆ ಶ್ರಮಿಸುತ್ತಿ ದ್ದಾರೆ. ಹಾಗೆಯೇ ಮುಂಬರುವ ಚುನಾ ವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯೊಂದಿಗೆ ಅರ್ಜಿ ಸಲ್ಲಿಸಿರುವ 6 ಮಂದಿಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಇದೇ ವೇಳೆ ತಿಳಿ ಸಿದರು. ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ರಾದ ಬೀರಿಹುಂಡಿ ಬಸವಣ್ಣ, ಮಾದೇ ಗೌಡ, ಮುಖಂಡರಾದ ಕೃಷ್ಣಕುಮಾರ್ ಸಾಗರ್, ಮೆಲ್ಲಹಳ್ಳಿ ಮಹದೇವಸ್ವಾಮಿ, ಜೆ.ಜೆ.ಆನಂದ, ಮಾರ್ಬಳ್ಳಿ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಗುರುಸ್ವಾಮಿ, ಸತೀಶ್‍ಕುಮಾರ್, ಜಗದೀಶ್, ಚಂದ್ರು, ರಾಜೇಶ್, ಬಿಎಸ್‍ಎನ್‍ಎಲ್ ಮಾದೇಗೌಡ, ಆರೀಫ್ ಹುಸೇನ್, ಸೋಮಣ್ಣ, ರವಿ, ಶಿವ ಕುಮಾರ್, ರಾಜೇಂದ್ರ, ಶಿವರಾಜ್ ಶೆಟ್ಟಿಹಳ್ಳಿ, ಚೂಡಾಮಣಿ, ಮಲ್ಲಿಕಾ, ಮಲ್ಲೇಶ್, ಸಂದೀಪ್ ಸಿದ್ದೇಗೌಡ, ಶಂಕರ, ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Translate »