ಯೋಗಪಟುಗಳಿಂದ ಸೂರ್ಯ ನಮಸ್ಕಾರ
ಮೈಸೂರು

ಯೋಗಪಟುಗಳಿಂದ ಸೂರ್ಯ ನಮಸ್ಕಾರ

February 9, 2022

ಮೈಸೂರು,ಫೆ.8(ಎಂಟಿವೈ)- ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಬೆಳಗ್ಗೆ ರಥಸಪ್ತಮಿ ಹಿನ್ನೆಲೆಯಲ್ಲಿ 400ಕ್ಕೂ ಹೆಚ್ಚು ಮಂದಿ ಯೋಗಪಟುಗಳು 108 ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಿ ಗಮನ ಸೆಳೆದರು.

ಮೈಸೂರು ಯೋಗ ಫೆಡರೇಷನ್ ಟ್ರಸ್ಟ್, ಅರಮನೆ ಮಂಡಳಿ, ಜಿಎಸ್‍ಎಸ್ ಯೋಗ ಸಂಸ್ಥೆ, ಎಸ್‍ಪಿವೈಎಸ್‍ಎಸ್, ಪತಂಜಲಿ ಯೋಗ ಸಂಸ್ಥೆಯ ಸಹಯೋಗ ದಲ್ಲಿ ನಡೆದ ರಥಸಪ್ತಮಿ ಹಾಗೂ ಸಂಕಲ್ಪ ದಿವಸ ಕಾರ್ಯಕ್ರಮದಲ್ಲಿ ವಿವಿಧ ವಯೋ ಮಾನದ ಯೋಗಪಟುಗಳು ಪಾಲ್ಗೊಂಡು ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡರು. ಅರಮನೆ ಮುಂಭಾಗದ ವೇದಿಕೆ ಮೇಲಿದ್ದ ಯೋಗ ಶಿಕ್ಷಕರು ಹಾಗೂ ಹಿರಿಯ ಯೋಗಪಟುಗಳು ನೀಡಿದ ಸಂದೇಶದ ಮೇರೆಗೆ ಸಾಮೂ ಹಿಕ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂ ಡಿದ್ದ ಯೋಗಪಟುಗಳು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.

ಸೂರ್ಯ ನಮಸ್ಕಾರ ಪ್ರೋಟೋಕಾಲ್ ನಂತೆ ಮೊದಲು ನಮಸ್ಕಾರ ಸ್ಥಿತಿ ಪ್ರದ ರ್ಶಿಸಲಾಯಿತು. ಬಳಿಕ ಊದ್ರ್ವಾಸನ, ಉತಾನಾಸನ, ಏಕಪಾದ, ಚದುರಂಗ, ಅಷ್ಟಾಂಗ, ಭುಜಾಂಗ, ಅಧೋಮುಖ, ಹಸ್ತಪಾದ ಪ್ರದರ್ಶಿಸಲಾಯಿತು. ನಂತರ ಮತ್ತೆ ಏಕಪಾದ, ಊದ್ರ್ವಾಸನ, ನಮ ಸ್ಕಾರ ಸ್ಥಿತಿ ಪ್ರದರ್ಶಿಸಿ 108 ಸೂರ್ಯ ನಮಸ್ಕಾರ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಭಾಷ್ಯಂ ಸ್ವಾಮೀಜಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್. ಸೀತಾಲಕ್ಷ್ಮೀ, ಯೋಗಗುರು ಶಿವ ಪ್ರಕಾಶ್, ಜಿಎಸ್‍ಎಸ್ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ ಸೇರಿದಂತೆ ಇನ್ನಿ ತರರು ಉಪಸ್ಥಿತರಿದ್ದರು.

Translate »