ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಸಾಧಕರಿಗೆ `ವಿವೇಕ ರತ್ನ’ ಪ್ರಶಸ್ತಿ ಪ್ರದಾನ, ಗಣ್ಯರಿಗೆ ಸನ್ಮಾನ
ಮೈಸೂರು

ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಸಾಧಕರಿಗೆ `ವಿವೇಕ ರತ್ನ’ ಪ್ರಶಸ್ತಿ ಪ್ರದಾನ, ಗಣ್ಯರಿಗೆ ಸನ್ಮಾನ

January 13, 2021

ಮೈಸೂರು,ಜ.12(ಪಿಎಂ)-ವಿಶ್ವ ಹಿಂದೂ ಧರ್ಮ ಸಂರಕ್ಷಣಾ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜಯಂ ತ್ಯುತ್ಸವ ಹಾಗೂ ರಾಷ್ಟ್ರೀಯ ಯುವ ದಿನವನ್ನು ಮಂಗಳವಾರ ಆಚರಿಸಲಾಯಿತು. ಮೈಸೂರಿನ ಕೆಆರ್‍ಎಸ್ ರಸ್ತೆಯ ಚೆಲು ವಾಂಬ ಉದ್ಯಾನವನದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಇದೇ ವೇಳೆ ಸಾಧಕರನ್ನು ಸನ್ಮಾನಿಸಿ `ವಿವೇಕ ರತ್ನ’ ಶೀರ್ಷಿಕೆಯಡಿ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ ಅವರಿಗೆ `ವಿವೇಕ ಧರ್ಮ ರತ್ನ’ ಪ್ರಶಸ್ತಿ, ಪತ್ರಕರ್ತ ಹಾಗೂ ಲೇಖಕ ಎಸ್.ಪ್ರಕಾಶ್‍ಬಾಬು ಅವರಿಗೆ `ವಿವೇಕ ಸಾಹಿತ್ಯ ರತ್ನ ಪ್ರಶಸ್ತಿ’, ಆಧ್ಯಾತ್ಮ ಚಿಂತಕ ಡಾ.ಶೆಲ್ವಪಿಳ್ಳೈ ಐಯ್ಯಂಗಾರ್ ಅವರಿಗೆ `ವಿವೇಕ ವಿದ್ಯಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಲ್ಲದೆ, ಬಿಜೆಪಿ ಮುಖಂಡ ಹಾಗೂ ಸಿನಿಮಾ ನಾಯಕ ನಟ ಜೆಪಿ (ಜಯಪ್ರಕಾಶ್), ನಗರಪಾಲಿಕೆ ಮಾಜಿ ಸದಸ್ಯ ನಂದೀಶ್ ಪ್ರೀತಂ, ನಗರಪಾಲಿಕೆ ಸದಸ್ಯರಾದ ರಮೇಶ್, ಬಿ.ವಿ. ರವೀಂದ್ರ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಜಿಲ್ಲಾಧ್ಯಕ್ಷ ಸ್ವಾಮಿಗೌಡ, ಭೂಮಿಗಿರಿ ಪ್ರಕಾಶನದ ಪ್ರಕಾಶಕ ಬೆಟ್ಟೇಗೌಡ, ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯ ಅರವಿಂದ್ ಶರ್ಮ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *