Tag: BS Yeddyurappa

ವಿಶ್ರಾಂತಿಗಾಗಿ ಯಡಿಯೂರಪ್ಪ ಜಿಂದಾಲ್‍ಗೆ ದಾಖಲು
ಮೈಸೂರು

ವಿಶ್ರಾಂತಿಗಾಗಿ ಯಡಿಯೂರಪ್ಪ ಜಿಂದಾಲ್‍ಗೆ ದಾಖಲು

July 27, 2018

ಬೆಂಗಳೂರು: ಐದು ದಿನಗಳ ವಿಶ್ರಾಂತಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ಇಂದು ದಾಖಲಾಗಿದ್ದಾರೆ. ವಿಧಾನ ಸಭೆ ಚುನಾವಣೆ ಹಾಗೂ ರಾಜ್ಯ ಪ್ರವಾಸದಿಂದ ದಣಿದಿರುವ ಅವರು ವಿಶ್ರಾಂತಿ ಪಡೆಯಲು ಬೆಂಗಳೂರಿನ ಹೊರವಲಯದಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಪ್ರತಿ ವರ್ಷ ಜಿಂದಾಲ್ ಆಸ್ಪತ್ರೆಗೆ ದಾಖಲಾಗಿ ಪ್ರಕೃತಿ ಚಿಕಿತ್ಸೆ ಪಡೆಯುವಂತೆ ಈ ವರ್ಷವೂ ವಿವಿಧ ಚಿಕಿತ್ಸೆಗಳನ್ನು ಯಡಿಯೂರಪ್ಪ ಪಡೆದುಕೊಳ್ಳಲಿದ್ದಾರೆ.

ಬಿ.ಎಸ್.ಯಡಿಯೂರಪ್ಪ ನಮ್ಮ ಗಾಡ್ ಫಾದರ್: ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್
ಮೈಸೂರು

ಬಿ.ಎಸ್.ಯಡಿಯೂರಪ್ಪ ನಮ್ಮ ಗಾಡ್ ಫಾದರ್: ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್

July 23, 2018

ಮೈಸೂರು:  ಬಿ.ಎಸ್.ಯಡಿಯೂರಪ್ಪ ಮತ್ತು ನಮ್ಮ ನಡುವೆ ಇದ್ದ ಬಿನ್ನಾಭಿಪ್ರಾಯ ಬಗೆಹರಿದಿದ್ದು, ಈಗ ಅವರೇ ನಮ್ಮ ಗಾಡ್ ಫಾದರ್ ಎಂದು ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮ ನಾಭ ಪ್ರಸನ್ನಕುಮಾರ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಪಪಡಿಸಿದ ಅವರು, ಈ ಹಿಂದೆ ನಮ್ಮಿಬ್ಬರ ನಡುವೆ ಕೆಲವು ವಿಚಾರಗಳಲ್ಲಿ ಇದ್ದ ಭಿನ್ನಾಭಿಪ್ರಾಯ ಶಮನಗೊಂಡಿದ್ದು, ಈಗ ಅವರು ನಮ್ಮ ಗಾಡ್‍ಫಾದರ್ ಎಂದು ಪ್ರತಿಕ್ರಿಯಿಸಿದರು. ಇಂದು ಕೆಜಿಪಿ ಕಚೇರಿ ಉದ್ಘಾಟನೆ: ಕರ್ನಾಟಕ ಜನತಾ ಪಕ್ಷದ (ಕೆಜೆಪಿ)…

ರಾಜ್ಯದಲ್ಲಿ 22ರಿಂದ 23 ಲೋಕಸಭಾ  ಸ್ಥಾನ ಗೆಲ್ಲುವುದು ಅಮಿತ್ ಷಾ ಗುರಿ
ಮೈಸೂರು

ರಾಜ್ಯದಲ್ಲಿ 22ರಿಂದ 23 ಲೋಕಸಭಾ  ಸ್ಥಾನ ಗೆಲ್ಲುವುದು ಅಮಿತ್ ಷಾ ಗುರಿ

July 18, 2018

ಬೆಂಗಳೂರು:  ಕೇಂದ್ರ ದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿ ಯಲು ಮುಂದಾಗಿರುವ ಬಿಜೆಪಿ ಕರ್ನಾ ಟಕದಿಂದ ಹೆಚ್ಚು ಸ್ಥಾನಗಳನ್ನು ಗಳಿಸಲು ಈಗಿನಿಂದಲೇ ತಂತ್ರಗಾರಿಕೆ ಆರಂಭಿಸಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 22ರಿಂದ 23 ಸ್ಥಾನಗಳಲ್ಲಿ ಜಯಗಳಿಸಲೇಬೇಕೆಂಬ ಗುರಿಯೊಂದಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತೆ ಕರ್ನಾಟಕ ಪ್ರವಾಸ ಆರಂಭಿಸುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಇಲ್ಲೇ ಬಿಡಾರ ಹೂಡಿದ್ದ ಷಾ, ಇದೀಗ ಲೋಕಸಭಾ ಚುನಾವಣೆ ಕಡೆ ಗಮನಹರಿಸಿದ್ದಾರೆ. ಇದೇ…

ವಿಧಾನಸಭೆಯಲ್ಲಿ ಬಜೆಟ್ ಅಂಗೀಕಾರ
ಮೈಸೂರು

ವಿಧಾನಸಭೆಯಲ್ಲಿ ಬಜೆಟ್ ಅಂಗೀಕಾರ

July 13, 2018

ರೈತರ ಲಕ್ಷದವರೆಗಿನ ಚಾಲ್ತಿ ಬೆಳೆ ಸಾಲವೂ ಮನ್ನಾ 10,700 ಕೋಟಿ ರೂ. ಹೆಚ್ಚುವರಿ ಹೊರೆ ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಜುಲೈ 5ರಂದು ಮಂಡಿಸಿದ್ದ 2018-19ನೇ ಸಾಲಿನ ಧನವಿನಿಯೋಗ ವಿಧೇಯಕ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಸಾಲ ಮನ್ನಾ ನಮ್ಮ ಸರ್ಕಾರದ ಬದ್ಧತೆಯಾಗಿತ್ತು. ಅದನ್ನು ಈಡೇರಿಸ ಲಿದ್ದೇವೆ ಎಂದರು. ಇದೇ ವೇಳೆ ರೈತರ ಚಾಲ್ತಿ ಸಾಲ ವನ್ನೂ ಮನ್ನಾ ಮಾಡುವುದಾಗಿ ಘೋಷಿಸಿದ ಸಿಎಂ, ಒಂದು…

ಲೋಕಸಭಾ ಚುನಾವಣೆಗೆ ಬಿಜೆಪಿ ರೆಡಿ
ಮೈಸೂರು

ಲೋಕಸಭಾ ಚುನಾವಣೆಗೆ ಬಿಜೆಪಿ ರೆಡಿ

July 13, 2018

ಬೆಂಗಳೂರು: ಮುಂಬ ರುವ ಲೋಕಸಭೆ ಚುನಾವಣೆಗೆ ಬೇರು ಮಟ್ಟದಿಂದ ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈ ತಿಂಗಳ 28ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ವಿಧಾನಸಭಾ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿರುವ ಷಾ, ಲೋಕಸಭಾ ಚುನಾವಣೆಗೂ ಹೊಸ ತಂತ್ರಗಳನ್ನು ರೂಪಿಸುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ವೈಫಲ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ…

ಅಕ್ಟೋಬರ್ 2ನೇ ವಾರ ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿ!
ಮೈಸೂರು

ಅಕ್ಟೋಬರ್ 2ನೇ ವಾರ ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿ!

July 5, 2018

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಕ್ಟೋಬರ್ 2ನೇ ವಾರ ಮತ್ತೇ ಸಿಎಂ ಭಾಗ್ಯ ಒಲಿಯಲಿದೆ ಎಂದು ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇಂದು ತುಮಕೂರು ಜಿಲ್ಲೆ ನೊಣವಿನ ಕೆರೆ ಕಾಡಸಿದ್ಧೇಶ್ವರ ಮಠದಲ್ಲಿ ಏರ್ಪಡಿಸ ಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಯಡಿ ಯೂರಪ್ಪ ಜಾತಕ ಕುಂಡಲಿಯಲ್ಲಿ ಮಹಾಯೋಗವಿದೆ. ಅವರ ದಿಟ್ಟತನ ಎಲ್ಲರಿಗೂ ಮಾದರಿಯಾಗಿದೆ. ಕಷ್ಟವನ್ನು ಸಹಿಸಿಕೊಂಡು ಮುಂದೆ ಹೋಗುತ್ತಿದ್ದಾರೆ. ಅವರಿಗೆ ಮುಂದೆ ಶುಭವಿದೆ ಎಂದು ಹೇಳಿದರು. ಅವರ ಜಾತಕದ ಪ್ರಕಾರ…

ಖಾಸಗಿ ಸಾಲ ಮನ್ನಾ ಸಂಬಂಧ ಹಾಲಿ, ಮಾಜಿ ಸಿಎಂಗಳ ಜಟಾಪಟಿ
ಮೈಸೂರು

ಖಾಸಗಿ ಸಾಲ ಮನ್ನಾ ಸಂಬಂಧ ಹಾಲಿ, ಮಾಜಿ ಸಿಎಂಗಳ ಜಟಾಪಟಿ

July 4, 2018

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜು.5ರಂದು ಮಂಡಿಸಲಿರುವ ಬಜೆಟ್‍ನಲ್ಲಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆ ಬೆನ್ನಲ್ಲೇ ರೈತರ ಖಾಸಗಿ ಸಾಲ ಮನ್ನಾ ಬಗ್ಗೆ ವಿಧಾನಸಭೆಯಲ್ಲಿ ಇಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಕಾವೇರಿದ ಚರ್ಚೆ ನಡೆಯಿತು. ಮುಖ್ಯಮಂತ್ರಿಗಳು ಚುನಾವಣೆಗೂ ಮುನ್ನ ರೈತರು ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಧ್ಯ…

ಸೀರಿಯಸ್ ಚರ್ಚೆ ವೇಳೆ ಸಿಲ್ಲಿ ಥಿಂಗ್ಸ್…!
ಮೈಸೂರು

ಸೀರಿಯಸ್ ಚರ್ಚೆ ವೇಳೆ ಸಿಲ್ಲಿ ಥಿಂಗ್ಸ್…!

July 4, 2018

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಸಾಲ ಮನ್ನಾ ವಿಚಾರವಾಗಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಜಟಾಪಟಿ ನಡೆಯುತ್ತಿದ್ದ ವೇಳೆ ಅದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಶಾಸಕರು ಮೊಬೈಲ್ ವೀಕ್ಷಣೆ ತಲ್ಲೀನರಾಗಿದ್ದುದು ಕಂಡುಬಂತು. ರೈತರ ಸಾಲ ಮನ್ನಾ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ನೀಡುತ್ತಿದ್ದರು. ಹೆಚ್.ಡಿ. ರೇವಣ್ಣ ಮಧ್ಯೆ ಎದ್ದು ನಿಂತರಾದರೂ, ಏನೂ ಮಾತನಾಡದೇ ಹಾಗೇ ಕುಳಿತುಕೊಂಡರು. ಮೊದಲ ಬಾರಿಗೆ ಶಾಸಕರಾಗಿರುವ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರು ತಾವು ಭಾಗವಹಿಸಿರುವ ಚೊಚ್ಚಲ ಅಧಿವೇಶನದ…

ಮೈತ್ರಿ ಸರ್ಕಾರಕ್ಕೆ ಸದನದಲ್ಲಿ ಸೆಡ್ಡು ಹೊಡೆಯಲು ಬಿಜೆಪಿ ನಿರ್ಧಾರ
ಮೈಸೂರು

ಮೈತ್ರಿ ಸರ್ಕಾರಕ್ಕೆ ಸದನದಲ್ಲಿ ಸೆಡ್ಡು ಹೊಡೆಯಲು ಬಿಜೆಪಿ ನಿರ್ಧಾರ

July 3, 2018

ಬಿಜೆಪಿ ಶಾಸಕರ ಸಂಪರ್ಕದಲ್ಲಿರುವ ಕಾಂಗ್ರೆಸ್ ಎಚ್ಚರದಿಂದಿರಲು ತಮ್ಮವರಿಗೆ ಬಿಎಸ್‍ವೈ ಸೂಚನೆ ಬೆಂಗಳೂರು: ಅಧಿವೇಶನ ಆರಂಭಗೊಂಡ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪನವರು ಸಮ್ಮಿಶ್ರ ಸರ್ಕಾರದ ವಿರುದ್ಧ ಪಕ್ಷದ ಹೋರಾಟ ಯಾವ ರೀತಿ ಇರಬೇಕು ಎನ್ನುವುದನ್ನು ಶಾಸಕರಿಗೆ ಹೇಳಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಬಹುತೇಕ ಶಾಸಕರು ಭಾಗಿಯಾಗಿದ್ದರು. ಮಂಗಳವಾರ ದಿಂದ ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಹಿನ್ನೆಲೆ ಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬೇಕೆಂಬ ಮಹತ್ವದ ಚರ್ಚೆ ನಡೆಸಲಾಯಿತು ಅಲ್ಲದೇ ನೂತನ ಶಾಸಕರಿಗೆ…

ಸರ್ಕಾರ ನೀಡಿದ ವಸತಿ ಬೇಡ, ಮನೆಯಿಂದಲೇ ಕೆಲಸ ಮಾಡುವೆ ಎಂದ ಬಿಎಸ್‍ವೈ
ಮೈಸೂರು

ಸರ್ಕಾರ ನೀಡಿದ ವಸತಿ ಬೇಡ, ಮನೆಯಿಂದಲೇ ಕೆಲಸ ಮಾಡುವೆ ಎಂದ ಬಿಎಸ್‍ವೈ

July 3, 2018

ಬೆಂಗಳೂರು: ತಮ್ಮ ಪಾಲಿನ ಅದೃಷ್ಟದ ನಿವಾಸ ನೀಡುವ ಬದಲು ರಾಜ್ಯ ಸರ್ಕಾರವು ಬೇರೆ ನಿವಾಸ ನೀಡಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದು, ಹಂಚಿಕೆ ಮಾಡಿರುವ ಸರ್ಕಾರಿ ವಸತಿ ಯನ್ನು ತಿರಸ್ಕರಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ರೇಸ್ ವ್ಯೂ ಕಾಟೇಜ್ ನಂ.2 ನಿವಾಸದಲ್ಲಿ ತಂಗಿದ್ದರು. ಇದು ಅವರ ಅದೃಷ್ಟದ ಮನೆ ಎಂದೇ ಭಾವಿಸಲಾಗಿತ್ತು. ಹೀಗಾಗಿ ಮತ್ತೊಮ್ಮೆ ಅದೇ ನಿವಾಸ ನೀಡುವಂತೆ ಕೋರಿ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಮನವಿ…

1 2 3 4 5 6
Translate »