ಬಿ.ಎಸ್.ಯಡಿಯೂರಪ್ಪ ನಮ್ಮ ಗಾಡ್ ಫಾದರ್: ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್
ಮೈಸೂರು

ಬಿ.ಎಸ್.ಯಡಿಯೂರಪ್ಪ ನಮ್ಮ ಗಾಡ್ ಫಾದರ್: ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್

July 23, 2018

ಮೈಸೂರು:  ಬಿ.ಎಸ್.ಯಡಿಯೂರಪ್ಪ ಮತ್ತು ನಮ್ಮ ನಡುವೆ ಇದ್ದ ಬಿನ್ನಾಭಿಪ್ರಾಯ ಬಗೆಹರಿದಿದ್ದು, ಈಗ ಅವರೇ ನಮ್ಮ ಗಾಡ್ ಫಾದರ್ ಎಂದು ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮ ನಾಭ ಪ್ರಸನ್ನಕುಮಾರ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಪಪಡಿಸಿದ ಅವರು, ಈ ಹಿಂದೆ ನಮ್ಮಿಬ್ಬರ ನಡುವೆ ಕೆಲವು ವಿಚಾರಗಳಲ್ಲಿ ಇದ್ದ ಭಿನ್ನಾಭಿಪ್ರಾಯ ಶಮನಗೊಂಡಿದ್ದು, ಈಗ ಅವರು ನಮ್ಮ ಗಾಡ್‍ಫಾದರ್ ಎಂದು ಪ್ರತಿಕ್ರಿಯಿಸಿದರು.

ಇಂದು ಕೆಜಿಪಿ ಕಚೇರಿ ಉದ್ಘಾಟನೆ: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ನೂತನ ಕಚೇರಿಯನ್ನು ಮೈಸೂರಿನ ಶಂಕರಮಠ ರಸ್ತೆ ಜಪದಕಟ್ಟೆ ಮಠದ ಬಳಿ ಜು.23ರಂದು ಬೆಳಿಗ್ಗೆ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಉದ್ಘಾಟಿಸಲಿ ದ್ದಾರೆ. ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರವಿಂದ ಶರ್ಮ, ಬೆಂಗಳೂರಿನ ಪಾರಿಜಾತ ಸೋಷಿಯಲ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷೆ ಉಷಾ ಭಾಗವಹಿಸಲಿದ್ದಾರೆ ಎಂದರು.

ಈ ಹಿಂದೆ ರಾಜ್ಯದಲ್ಲಿದ್ದ ಕೆಜೆಪಿಯ ಎಲ್ಲಾ ಸಮಿತಿಗಳನ್ನೂ ಸಂಪೂರ್ಣ ವಿಸರ್ಜಿಸಲಾಗಿದ್ದು, ಈಗ ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಯುವಕರು ಮತ್ತು ಮಹಿಳೆಯ ರಿಗೆ ಆದ್ಯತೆ ನೀಡಿ ಪಕ್ಷವನ್ನು ಸಂಘಟಿಲಾಗುತ್ತಿದೆ. ಅಹಿಂದ ವರ್ಗ, ದಲಿತರು, ಹಿಂದುಳಿದವರು, ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು ಹೀಗೆ ಎಲ್ಲಾ ವರ್ಗದವರಿಗೂ ಪಕ್ಷದಲ್ಲಿ ಮನ್ನಣೆ ನೀಡಲಾಗಿದೆ ಎಂದು ಹೇಳಿದರು.

ಮುಂಬರುವ ಮೈಸೂರು ನಗರಪಾಲಿಕೆ ಚುನಾವಣೆಯಲ್ಲಿ ಎಲ್ಲಾ 65 ವಾರ್ಡ್ ಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಮುಂದಿನ ಲೋಕಸಭಾ ಚುನಾ ವಣೆಯಲ್ಲೂ ನಮ್ಮ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸಿ ಸ್ಪರ್ಧೆ ನೀಡಲಿದ್ದೇವೆ ಎಂದ ಅವರು, ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ಪ್ರಕಾಶ್‍ಬಾಬು, ಕೆಜೆಪಿ ಮೈಸೂರು ಜಿಲ್ಲಾ ಉಸ್ತುವಾರಿ ಎನ್.ಶ್ರೀನಿವಾಸ್, ನಗರ ಉಪಾಧ್ಯಕ್ಷ ರಾಚಪ್ಪ, ವಿಶ್ವನಾಥ್ ಇದ್ದರು.

Translate »