ಸಿಎಂ ಕುಮಾರಸ್ವಾಮಿಯವರಿಗೆ ಬ್ರಾಹ್ಮಣ ಸಮುದಾಯ ಅಭಿನಂದನೆ
ಮೈಸೂರು

ಸಿಎಂ ಕುಮಾರಸ್ವಾಮಿಯವರಿಗೆ ಬ್ರಾಹ್ಮಣ ಸಮುದಾಯ ಅಭಿನಂದನೆ

July 23, 2018

ಮೈಸೂರು: ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮತ್ತು ಶಂಕರ ಜಯಂತಿ ಆಚರಣೆಯನ್ನು ಸರ್ಕಾರದಿಂದ ಜಾರಿಗೆ ತಂದಿರುವುದಕ್ಕೆ ಮೈಸೂರು ಬ್ರಾಹ್ಮಣ ಯುವ ವೇದಿಕೆ ಮತ್ತು ವಿಪ್ರ ಮುಖಂಡರು ಮುಖ್ಯಮಂತ್ರಿ ಕುಮಾರಸ್ವಾಮಿ ಮೈಸೂರಿಗೆ ಆಗಮಿಸಿದ್ದ ವೇಳೆ ಮಂಡಕಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಪುರೋಹಿತರ ಬಳಗದ ವೇದಘೋಷ ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಸರ್ ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನು ನೀಡಿ ಅಭಿನಂದನೆ ಸಲ್ಲಿಸಿದರು, ಇದೇ ಸಂಧರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಕುಮಾರಪರ್ವ ನಡೆಸಿದ ಸಂದರ್ಭದಲ್ಲಿ ಮೈಸೂರಿನಲ್ಲಿ ಬ್ರಾಹ್ಮಣ ಯುವ ವೇದಿಕೆ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಸಹಾಯ ಮಾಡಬೇಕು ಮತ್ತು ಶಂಕರ ಜಯಂತಿ ಸರ್ಕಾರದಿಂದ ಆಚರಿಸಬೇಕೆಂದು ಮನವಿ ಸಲ್ಲಿಸಿದರು.

ನಾನು ಮುಖ್ಯಮಂತ್ರಿಯಾಗಿ ಅದನ್ನು ಕಾರ್ಯರೂಪಕ್ಕೆ ತಂದಿದ್ದೇನೆ, ಮುಂದಿನ ದಿನದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಸಮಿತಿ ಸದಸ್ಯರನ್ನು ನೇಮಕ ಮಾಡಿ ಶಿಕ್ಷಣ, ಆರೋಗ್ಯ, ಉದ್ಯೋಗದ ಸಮಸ್ಯೆ ಎದುರಿಸುತ್ತಿರುವ ಬ್ರಾಹ್ಮಣ ಕುಟುಂಬಗಳಿಗೆ ನೆರವು ನೀಡಲಾಗುವುದು ಎಂದರು,ನಾಡಿನಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ರೈತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ ಎಂದರೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಎಂದು ಸಂತಸ ವ್ಯಕ್ತಪಡಿಸಿದರು. ನಂತರ ಬ್ರಾಹ್ಮಣ ಹಿರಿಯ ಮುಖಂಡ ಕೆ.ರಘುರಾಂ ವಾಜಪೇಯಿ ಮಾತನಾಡಿ, ಬ್ರಾಹ್ಮಣ ಸಮುದಾಯದ ಶ್ರೇಯೋಭಿವೃದ್ದಿಗಾಗಿ ಸರ್ಕಾರಿ ಮಾನ್ಯತೆಗಳ ಸೌಲಭ್ಯಗಳ ಅವಶ್ಯಕತೆಯಿತ್ತು.

ಕಳೆದ ಹತ್ತು ವರ್ಷಗಳಿಂದ ತೆಲಂಗಾಣದ ಮಾದರಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರಿ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಾ ಬಂದಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಆದರೆ ಕುಮಾರಸ್ವಾಮಿರವರು ವಿಪ್ರಸಂಘಟಿತರ ಮನವಿಯನ್ನು ಸ್ವೀಕರಿಸಿದ ಕೇವಲ 40 ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆ ಮತ್ತು ಶಂಕರ ಜಯಂತಿ ಆಚರಣೆ ಬಗ್ಗೆ ಬಜೆಟ್‍ನಲ್ಲಿ ಮಂಡಿಸಿ ಜಾರಿಗೊಳಿಸಿರುವುದು ಶ್ಲಾಘನೀಯ, ನಮ್ಮ ಬ್ರಾಹ್ಮಣ ಸಮುದಾಯದ ಯುವ ಪೀಳಿಗೆ ಹೆಚ್.ಡಿ ಕುಮಾರಸ್ವಾಮಿಯವರ ಆಡಳಿತ ಕೊಡುಗೆಯಿಂದ ಮುಂದಿನ ದಿನಗಳಲ್ಲಿ ಮುಖ್ಯವಾಹಿನಿಗೆ ಬರಲಿದ್ದಾರೆ ಎಂದರು.

ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ ಮಾತನಾಡಿ, ಕುಮಾರಸ್ವಾಮಿಯವರ ಆಡಳಿತ ಕೊಡುಗೆ ಬ್ರಾಹ್ಮಣ ಸಮುದಾಯಕ್ಕೆ ಸಹಕಾರಿಯಾಗಿದ್ದು, ಮುಂದಿನ ದಿನದಲ್ಲಿ ರಾಜ್ಯದೆಲ್ಲೆಡೆ ವಿಪ್ರ ಸಂಪರ್ಕ ಅಭಿಯಾನವನ್ನು ಆಯೋಜಿಸಿ ಸರ್ಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಮತ್ತು ವಿಪ್ರ ಯುವಕರು ರಾಜಕೀಯವಾಗಿ ಬೆಳೆಯಲು ನಗರ ಪಾಲಿಕೆ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.

ವಿವಿಧ ದೇವಸ್ಥಾನಗಳ ಪುರೋಹಿತರ ಬಳಗದ ವತಿಯಿಂದ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ವರ್ಗಕ್ಕೆ ವೇದಮಂತ್ರ ಘೋಷದೊಂದಿಗೆ 5 ವರ್ಷಗಳು ಸಂಪೂರ್ಣ ಆಡಳಿತ ನಡೆಸುವಂತೆ ಆಶೀರ್ವದಿಸಿದರು,ಬ್ರಾಹ್ಮಣ ಹಿರಿಯ ಮುಖಂಡ ಕೆ.ರಘುರಾಂ ವಾಜಪೇಯಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ ನಂ.ಶ್ರೀಕಂಠಕುಮಾರ್, ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ, ಮುಳ್ಳೂರು ಗುರುಪ್ರಸಾದ್, ಅಪೂರ್ವ ಸುರೇಶ್, ಡಿ.ಸಿ.ಮಂಜು, ನಗರಪಾಲಿಕೆ ಸದಸ್ಯ ಮಾವಿ ರಾಂಪ್ರಸಾದ್, ಯುವ ಮುಖಂಡರಾದ, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ವಿನಯ್ ಕಣಗಾಲ್, ಶ್ರೀಕಾಂತ್ ಕಶ್ಯಪ್, ಪ್ರಶಾಂತ್ ಪಚ್ಚು, ಜಯಸಿಂಹ, ರಂಗನಾಥ್, ಬಾಲಕೃಷ್ಣ, ಅರುಣ್, ಕಡಕೊಳ ಜಗದೀಶ್, ರಾ.ಕಿರಣ್, ಸುಕೃತ್, ಮಂಜುನಾಥ್, ಚಂದ್ರು, ಮುರಳಿ, ಪುರೋಹಿತರಾದ ಫಣೀಶ್, ವಿಶ್ವನಾಥ್ ಶಾಸ್ತ್ರಿ, ವಿನಿತ್ ಶರ್ಮ, ವಿಶ್ವಾಸ್, ಸುಮಂತ್ ಶಾಸ್ತ್ರಿ, ಗಣೇಶ್, ತೇಜಸ್ ಶಂಕರ್, ಡಿ.ಕೆ.ನಾಗಭೂಷಣ್ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು..

Translate »