ಅಕ್ಟೋಬರ್ 2ನೇ ವಾರ ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿ!
ಮೈಸೂರು

ಅಕ್ಟೋಬರ್ 2ನೇ ವಾರ ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿ!

July 5, 2018

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಕ್ಟೋಬರ್ 2ನೇ ವಾರ ಮತ್ತೇ ಸಿಎಂ ಭಾಗ್ಯ ಒಲಿಯಲಿದೆ ಎಂದು ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಇಂದು ತುಮಕೂರು ಜಿಲ್ಲೆ ನೊಣವಿನ ಕೆರೆ ಕಾಡಸಿದ್ಧೇಶ್ವರ ಮಠದಲ್ಲಿ ಏರ್ಪಡಿಸ ಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಯಡಿ ಯೂರಪ್ಪ ಜಾತಕ ಕುಂಡಲಿಯಲ್ಲಿ ಮಹಾಯೋಗವಿದೆ. ಅವರ ದಿಟ್ಟತನ ಎಲ್ಲರಿಗೂ ಮಾದರಿಯಾಗಿದೆ. ಕಷ್ಟವನ್ನು ಸಹಿಸಿಕೊಂಡು ಮುಂದೆ ಹೋಗುತ್ತಿದ್ದಾರೆ. ಅವರಿಗೆ ಮುಂದೆ ಶುಭವಿದೆ ಎಂದು ಹೇಳಿದರು. ಅವರ ಜಾತಕದ ಪ್ರಕಾರ ಅಕ್ಟೋಬರ್ 2ನೇ ವಾರ ಅವರು ಮತ್ತೇ ಮುಖ್ಯಮಂತ್ರಿ ಆಗುವ ಭಾಗ್ಯವಿದೆ. ಇದನ್ನು ಕಾದುನೋಡಿ ಎಂದು ರಂಭಾ ಪುರಿ ಶ್ರೀಗಳು ಹೇಳುವುದರೊಂದಿಗೆ ತೀವ್ರ ಕುತೂಹಲಕ್ಕೆ ನಾಂದಿ ಹಾಡಿದ್ದಾರೆ.

 

Translate »