Tag: Bettadapura

ಗೂಡ್ಸ್ ವಾಹನದಲ್ಲಿ ಜಾನುವಾರು ಸಾಗಾಣಿಕೆ: ಇಬ್ಬರ ಬಂಧನ
ಮೈಸೂರು

ಗೂಡ್ಸ್ ವಾಹನದಲ್ಲಿ ಜಾನುವಾರು ಸಾಗಾಣಿಕೆ: ಇಬ್ಬರ ಬಂಧನ

July 28, 2018

ಬೆಟ್ಟದಪುರ:  ಕಸಾಯಿ ಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದ ವಾಹನವನ್ನು ಜಪ್ತಿ ಮಾಡಿರುವ ಬೆಟ್ಟದಪುರ ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಗೂಡ್ಸ್ ವಾಹನ (ಕೆಎ12, ಬಿ.5894) ವೊಂದರಲ್ಲಿ ಒಂದು ಹಸು, ಒಂದು ಕರು ಹಾಗೂ ಒಂದು ಎಮ್ಮೆಯನ್ನು ರವಿ ಹಾಗೂ ಸಾದ್ದಿಕ್ ಖಾನ್ ಎಂಬುವರು ಗುರುವಾರ ಮಧ್ಯಾಹ್ನ 2 ಗಂಟೆಯಲ್ಲಿ ಕಣಗಾಲು ಬಳಿ ಸಾಗಿಸುತ್ತಿದ್ದಾಗ, ಖಚಿತ ಮಾಹಿತಿ ಮೇಲೆ ಪಿಎಸ್‍ಐಗಳಾದ ಚಿಕ್ಕಸ್ವಾಮಿ, ಜಗದೀಶ್ ಹಾಗೂ ಸಿಬ್ಬಂದಿಗಳಾದ ಮಧು ಕುಮಾರ್, ಭಾಸ್ಕರ್, ಮಂಜು ಮತ್ತು ಸ್ವಾಮಿ ಅವರು ಕಾರ್ಯಾಚರಣೆ…

ನೀರಿನ ತೊಟ್ಟಿಗೆ ಬಿದ್ದು ಮಗು ಸಾವು
ಮೈಸೂರು

ನೀರಿನ ತೊಟ್ಟಿಗೆ ಬಿದ್ದು ಮಗು ಸಾವು

July 6, 2018

ಬೆಟ್ಟದಪುರ: ಮನೆಯವರ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿರುವ ಘಟನೆ ಪಿರಿಯಾ ಪಟ್ಟಣ ತಾಲೂಕಿನ ಬೆಟ್ಟದತುಂಗದ ಕೆಳಗಿನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಗದೀಶ ಮತ್ತು ಲಕ್ಷ್ಮೀ ದಂಪತಿಯ 2 ವರ್ಷದ ಯಶಸ್ ಮೃತಪಟ್ಟ ಮಗು. ಘಟನೆ ವಿವರ: ತಂದೆ ತಾಯಿ ಮನೆಯ ಹಿಂಭಾಗದಲ್ಲಿ ಇರುವ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಗು ಸಹ ಅಲ್ಲೇ ಆಟವಾಡುತ್ತಿತ್ತೆನ್ನಲಾಗಿದೆ. ತಾಯಿ ಲಕ್ಷ್ಮಿ ಮನೆಗೆ ಹೋಗಿದ್ದನ್ನು ನೋಡಿ ಮಗು ಹಿಂಬಾಲಿಸಿದೆ. ತಾಯಿ ಮನೆಯೊಳಗೆ ಕಾಫಿ ಮಾಡಲು ನಿರತಳಾದಾಗ ಮಗು ಹಿಂದಯೇ ಓಡಿ ಬಂದು…

ಅಕ್ರಮ ಮಾಂಸದ ಅಂಗಡಿಗೆ ಬೀಗ
ಮೈಸೂರು

ಅಕ್ರಮ ಮಾಂಸದ ಅಂಗಡಿಗೆ ಬೀಗ

July 6, 2018

ಬೆಟ್ಟದಪುರ: ಅಕ್ರಮವಾಗಿ ನಡೆಸುತ್ತಿದ್ದ ಮಾಂಸದ ಅಂಗಡಿಗಳನ್ನು ಪಿಡಿಓ ನೇತೃತ್ವದಲ್ಲಿ ಬಾಗಿಲು ಮುಚ್ಚಿಸಿದ ಘಟನೆ ನಡೆದಿದೆ. ಬೆಟ್ಟದಪುರ ಗ್ರಾಮದಲ್ಲಿ ಗ್ರಾಮಪಂಚಾಯಿತಿ ವತಿಯಿಂದ ಮಾಂಸದ ಅಂಗಡಿಗಳನ್ನು ನಡೆಸಲು ಹರಾಜು ಮಾಡಲಾಗಿತ್ತು. ಹರಾಜಿನ ಸಮಯ ಮುಗಿದಿದ್ದು ನವೀಕರಣ ಮಾಡಿಕೊಂಡು ಹಣ ಪಾವತಿ ಮಾಡದೆ ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿ ಗಳ ಮೇಲೆ ದಾಳಿ ಮಾಡಿದ ಪಿಡಿಓ ಚಿದಾನಂದ್ ಮತ್ತು ಸಿಬ್ಬಂದಿ ಅಂಗಡಿಗಳಿಗೆ ಬೀಗ ಜಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಓ ಚಿದಾ ನಂದ್. ಪಂಚಾಯಿತಿ ಒಪ್ಪಂದದಂತೆ ಪ್ರತಿವರ್ಷವೂ ಹಣ ಪಾವತಿ…

ನಾಳೆ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ ಗಣಾರಾಧನ ಮಹೋತ್ಸವ
ಮೈಸೂರು

ನಾಳೆ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ ಗಣಾರಾಧನ ಮಹೋತ್ಸವ

June 28, 2018

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತಮಠದಲ್ಲಿ ಜೂ.29ರಂದು ಗಣಾರಾಧನಾ ಮಹೋತ್ಸವ ಹಾಗೂ ಶಾಖಾ ಮಠವಾದ ಕನ್ನಡ ಮಠದ 209ನೇ ವರ್ಷಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಠದ ಶ್ರೀ ಚಿಕ್ಕವೀರದೇಶಿಕೇಂದ್ರ ಸ್ವಾಮೀಜಿ ಅವರ 90ನೇ ಹಾಗೂ ಶ್ರೀ ಚೆನ್ನವೀರದೇಶಿಕೇಂದ್ರ ಸ್ವಾಮೀಜಿ ಅವರ 37ನೇ ವರ್ಷದ ಗಣಾರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಜೊತೆಗೆ…

ಬೈಕ್‍ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ: ಸವಾರ ಸಾವು
ಮೈಸೂರು

ಬೈಕ್‍ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ: ಸವಾರ ಸಾವು

June 23, 2018

ಬೆಟ್ಟದಪುರ:  ಬೈಕ್‍ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಪಿರಿಯಾ ಪಟ್ಟಣ ತಾಲೂಕು ರಾಗಿಆಲದಮರ ಗ್ರಾಮದಲ್ಲಿ ನಡೆದಿದೆ. ಕೋಳಿಮನೆ ಗ್ರಾಮದ ರಮೇಶ್ ಅವರ ಮಗ ಸಂತೋಷ್ (25) ಅಪಘಾತದಲ್ಲಿ ಸಾವನ್ನಪ್ಪಿದವನಾಗಿದ್ದು, ಈತ ಬೆಟ್ಟದಪುರದಿಂದ ಕುಶಾಲನಗರ ರಸ್ತೆಯಲ್ಲಿರುವ ತನ್ನ ಮನೆ ಕೋಳಿಮನೆ ಗ್ರಾಮಕ್ಕೆ ಹೋಗುವ ವೇಳೆ ಪಿರಿಯಾಪಟ್ಟಣದಿಂದ ಮಂಟಿಬಿಳಗುಲಿ ಗ್ರಾಮದ ಮಾರ್ಗವಾಗಿ ಬರುತ್ತಿದ್ದ ಬಸ್ಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸಂತೋಷ್ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಆಂಬುಲೆನ್ಸ್‍ನಲ್ಲಿ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ…

ಕೋಣಸೂರು ಗ್ರಾಮದಲ್ಲಿ ಚಿಕ್ಕಮ್ಮ, ದೊಡ್ಡಮ್ಮ ರಥೋತ್ಸವ
ಮೈಸೂರು

ಕೋಣಸೂರು ಗ್ರಾಮದಲ್ಲಿ ಚಿಕ್ಕಮ್ಮ, ದೊಡ್ಡಮ್ಮ ರಥೋತ್ಸವ

June 11, 2018

ಬೆಟ್ಟದಪುರ:  ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ಕೋಣಸೂರು ಗ್ರಾಮದಲ್ಲಿ ಚಿಕ್ಕಮ್ಮ ಮತ್ತು ದೊಡ್ಡಮ್ಮ ದೇವರ 101ನೇ ವರ್ಷದ ರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ರಥವನ್ನು ಶೃಂಗರಿಸಿ ಗ್ರಾಮದ ಮಹಿಳೆ ಯರು ತಮ್ಮ ತಮ್ಮ ಮನೆಯನ್ನು ಶೃಂಗಾರ ಮಾಡಿದ್ದರು. ಮದುವೆಯಾಗಿ ಹೋಗಿದ್ದ ಹೆಣ್ಣು ಮಕ್ಕಳು ಮತ್ತು ಬಂಧು-ಬಳಗ ಊರಿಗೆ ಬಂದು ದೇವರನ್ನು ಸ್ಮರಿಸುವ ಒಂದು ವಿಶೇಷ ವಾಡಿಕೆಯಾಗಿದೆ. ಇಲ್ಲಿ ದೊಡ್ಡಮ್ಮತಾಯಿ ದೇವರು ಗ್ರಾಮದ ವೀರಶೈವ ಲಿಂಗಾಯಿತರ ಪೂಜಿತ ದೇವರಾದರೆ, ಚಿಕ್ಕಮ್ಮ ದೇವರು ದಲಿತರ ಪೂಜಿತ ದೇವರಾಗಿದ್ದು,…

ಪರಿಸರ ರಕ್ಷಣೆ ಎಲ್ಲರ ಹೊಣೆ
ಮೈಸೂರು

ಪರಿಸರ ರಕ್ಷಣೆ ಎಲ್ಲರ ಹೊಣೆ

June 8, 2018

ಬೆಟ್ಟದಪುರ:  ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಪೊಲೀಸ್ ಉಪನಿರೀಕ್ಷಕ ಜಯಸ್ವಾಮಿ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದ ಶಿಡಿಲುಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ತಪ್ಪಲಿನ ದೈವಿವನದ ಹೊರಾಂಗಣ ದಲ್ಲಿ ತಾಲೂಕು ಪತ್ರಕರ್ತರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಮಾನವನು ಉತ್ತಮವಾದ ಜೀವನ ವನ್ನು ನಡೆಸಬೇಕಾದರೆ ಪ್ರಕೃತಿದತ್ತವಾದ ಸಂಪನ್ಮೂಲಗಳು ಮೂಲಕಾರಣವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದಿನನಿತ್ಯದ…

ಮುತ್ತಿನಮುಳಸೋಗೆ ಗ್ರಾಮದಲ್ಲಿ ಮೊಸಳೆ ಮೊಟ್ಟೆಗಳು ಪತ್ತೆ
ಮೈಸೂರು

ಮುತ್ತಿನಮುಳಸೋಗೆ ಗ್ರಾಮದಲ್ಲಿ ಮೊಸಳೆ ಮೊಟ್ಟೆಗಳು ಪತ್ತೆ

May 28, 2018

ಬೆಟ್ಟದಪುರ:  ಮುತ್ತಿನಮುಳಸೋಗೆ ಗ್ರಾಮದಲ್ಲಿ ಮೊಸಳೆಯ ಮೊಟ್ಟೆಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೆರೆಯ ದಡದಲ್ಲಿಯೇ 21 ಮೊಸಳೆಯ ಮೊಟ್ಟೆ ಗಳು ಪತ್ತೆಯಾಗಿರುವುದರಿಂದ ಮೊಸಳೆಯ ಕುರುಹು ಪತ್ತೆ ಹಚ್ಚಿ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕು ಆವರ್ತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಮುತ್ತಿನಮುಳ್ಳು ಸೋಗೆ ಗ್ರಾಮಕ್ಕೆ ಸೇರಿದ ಚೌಡಿಕಟ್ಟೆ ಕೆರೆಯ ದಡದಲ್ಲಿ ಮೊಸಳೆ ಇಟ್ಟ 5 ಮೊಟ್ಟೆಯಿಂದ ಹೊರಬಂದ ಮೊಸಳೆ ಮರಿಗಳು ಕಾಣ ಸಿ ಕೊಂಡಿವೆ ಎಂದು ಸಾರ್ವಜನಿಕರ ಮಾಹಿತಿ ಮೇರೆಗೆ ಕೊಪ್ಪ ಉಪವಲಯ ಅರಣ್ಯಾಧಿ ಕಾರಿ ಕೆ.ಟಿ.ರವೀಂದ್ರ…

ಧಾರಾಕಾರ ಮಳೆ: ಅಪಾಯದ ಅಂಚಿನಲ್ಲಿ ತಂಬಾಕು ಬೆಳೆ
ಮೈಸೂರು

ಧಾರಾಕಾರ ಮಳೆ: ಅಪಾಯದ ಅಂಚಿನಲ್ಲಿ ತಂಬಾಕು ಬೆಳೆ

May 28, 2018

ಬೆಟ್ಟದಪುರ: ಬೆಟ್ಟದಪುರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತಂಬಾಕು ಹೊಲಗಳು ಗದ್ದೆಗಳಾಗಿ ಮಾರ್ಪಾಡಾಗಿದ್ದು, ರೈತರು ಆತಂಕ ಕ್ಕೊಳಗಾಗಿದ್ದಾರೆ. ಈಗಾಗಲೇ ರೈತರು ತಂಬಾಕು ಮಂಡಳಿಯಿಂದ ಲಕ್ಷಕ್ಕೂ ಅಧಿಕ ಬೆಲೆ ಬಾಳುವ ರಸ ಗೊಬ್ಬರ ವನ್ನು ಸಾಲದಲ್ಲಿ ತಂದು ತಂಬಾಕು ಬೆಳೆಗೆ ಹಾಕಿದ್ದು, ಇದೀಗ ಒಂದು ವಾರದಿಂದಲೂ ಬಿಡುವಿಲ್ಲದೆ ಸುರಿಯು ತ್ತಿರುವ ಮಳೆ ರೈತರ ನಿದ್ದೆÉಗೆಡಿಸಿದೆ. ಮುಂಗಾರು ಮಳೆ ಬೀಳುವ ಸಂದರ್ಭ ಇದಾಗಿದ್ದು, ಇದೇ ರೀತಿ ಮಳೆ ಮುಂದುವರೆದರೆ ಬೆಳೆ ನೆಲಕಚ್ಚುವ ಸಾಧ್ಯತೆ ಹೆಚ್ಚಾಗಿದ್ದು ರೈತರು ಕಂಗಾಲಾಗಿದ್ದಾರೆ. ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ…

ಮದುವೆ ಮನೆಯಲ್ಲಿ ಚಿನ್ನಾಭರಣ, ನಗದು ಕಳವು
ಮೈಸೂರು

ಮದುವೆ ಮನೆಯಲ್ಲಿ ಚಿನ್ನಾಭರಣ, ನಗದು ಕಳವು

May 4, 2018

ಬೆಟ್ಟದಪುರ:  ಮದುವೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಿನ್ನ, ಬೆಳ್ಳಿ ಹಾಗೂ ನಗದು ಕಳವಾಗಿರುವ ಘಟನೆ ಇಲ್ಲಿಗೆ ಸಮೀಪದ ಮೇಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಸನ್ನ ಹಾಗೂ ಮಹದೇವ್ ಎಂಬುವರ ಮನೆಯಲ್ಲಿ 1 ಕೆ.ಜಿ. ಬೆಳ್ಳಿ, 60 ಗ್ರಾಂ ಚಿನ್ನ ಹಾಗೂ 25 ಸಾವಿರ ರೂ. ನಗದು ಕಳ್ಳತನ ನಡೆದಿದೆ. ಮದುವೆ ಕಾರ್ಯ ನಿರ್ಮಿತ್ತ ಮನೆಯಲ್ಲಿ ಚಿನ್ನ, ಬೆಳ್ಳಿ ಹಾಗೂ ನಗದು ಇಡಲಾಗಿತ್ತು. ಈ ಸಂದರ್ಭದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಖದೀಮರು ಕಳವು ಮಾಡಿದ್ದಾರೆ. ಈ ಸಂಬಂಧ…

1 2
Translate »