Tag: BSY

ಬಿಜೆಪಿ, ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಅನುದಾನ
ಮೈಸೂರು

ಬಿಜೆಪಿ, ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಅನುದಾನ

September 27, 2019

ಬೆಂಗಳೂರು, ಸೆ.26(ಕೆಎಂಶಿ)-ಬಿಜೆಪಿ ಮತ್ತು ಅನರ್ಹ ಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಕಾರ್ಯ ಕೈಗೊ ಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಲಾ 25 ಕೋಟಿ ರೂ. ಬಿಡುಗಡೆ ಮಾಡಿ, ಬಂಪರ್ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಆಯ್ಕೆಗೊಂಡಿರುವ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಕೆಲ ದಿನಗಳ ಹಿಂದೆ ಯಷ್ಟೇ ಹಿಂತೆಗೆದುಕೊಂ ಡಿದ್ದ ಮುಖ್ಯಮಂತ್ರಿಯವರು ಇದೀಗ ಸುಮಾರು 3500 ಕೋಟಿ ರೂ.ಗಳಷ್ಟು ಹಣವನ್ನು ತಮ್ಮ ಪಕ್ಷದ ಶಾಸಕರಿಗೆ ನೀಡಿದ್ದಾರೆ. ಆಡಳಿತ ಪಕ್ಷದ ಸದಸ್ಯರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ 300ರಿಂದ 400 ಕೋಟಿ…

ಅಮಿತ್ ಶಾ ಭೇಟಿ ಮಾಡಿದ ಸಿಎಂ ಯಡಿಯೂರಪ್ಪ
ಮೈಸೂರು

ಅಮಿತ್ ಶಾ ಭೇಟಿ ಮಾಡಿದ ಸಿಎಂ ಯಡಿಯೂರಪ್ಪ

September 23, 2019

ನವದೆಹಲಿ, ಸೆ.22- ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರ ಪುನರ್ವಸತಿ ಪರಿ ಹಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪರಿಹಾರ ಕಾರ್ಯ ಆರಂಭಿಸಲು ಹಣ ಬಿಡುಗಡೆ ಮಾಡು ವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿಯ ನಾಯಕರು ಮನವಿ ಮಾಡಿದ್ದಾರೆ. ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿ ರುವ ಅಮಿತ್ ಶಾ ನಿವಾಸದಲ್ಲಿ ಭೇಟಿ ಮಾಡಿ ಸುಮಾರು ಅರ್ಧ ಗಂಟೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಭೇಟಿ ಬಳಿಕ ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡಿದರು. ಪ್ರವಾಹ ಪೀಡಿತರ…

ಸಿಎಂ ಬಿಎಸ್‍ವೈ ಭೇಟಿಗೆ ಅವಕಾಶ ನೀಡದ ಅಮಿತ್ ಷಾ
ಮೈಸೂರು

ಸಿಎಂ ಬಿಎಸ್‍ವೈ ಭೇಟಿಗೆ ಅವಕಾಶ ನೀಡದ ಅಮಿತ್ ಷಾ

September 17, 2019

ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಬೆಳವಣಿಗೆ ಸಿಎಂ, ಸಚಿವರ ಕುಟುಂಬಗಳ ಹಸ್ತಕ್ಷೇಪದ ಮಾಹಿತಿ ಸಂಗ್ರಹ ಬೆಂಗಳೂರು,ಸೆ. 16(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮಯಾವಕಾಶ ನೀಡದ ಕೇಂದ್ರ ಗೃಹ ಸಚಿವ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರನ್ನು ದೆಹಲಿಗೆ ಕರೆಸಿ ಕೊಂಡು, ಸಮಾಲೋಚನೆ ನಡೆಸಿರುವುದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಶುಕ್ರವಾರ ಮತ್ತು ಶನಿ ವಾರ ನೆರೆ ಪೀಡಿತ ಪ್ರದೇಶಗಳ ಪಕ್ಷದ ಶಾಸಕರ ಸಭೆ ಕರೆದಿದ್ದ ಸಂದರ್ಭದಲ್ಲಿ ಬೆಳಗಾವಿಯನ್ನು…

ಜೆಡಿಎಸ್‍ನ ಪ್ರಭಾವಿ ಶಾಸಕರ ಬಿಜೆಪಿಗೆ ಸೆಳೆಯಲು ಸಿಎಂ ಯಡಿಯೂರಪ್ಪ ತಂತ್ರ
ಮೈಸೂರು

ಜೆಡಿಎಸ್‍ನ ಪ್ರಭಾವಿ ಶಾಸಕರ ಬಿಜೆಪಿಗೆ ಸೆಳೆಯಲು ಸಿಎಂ ಯಡಿಯೂರಪ್ಪ ತಂತ್ರ

September 10, 2019

ಬೆಂಗಳೂರು, ಸೆ.9(ಕೆಎಂಶಿ)- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷವನ್ನು ಮುಗಿಸಲು ಆ ಪಕ್ಷದ ಪ್ರಭಾವಿ ಹಾಗೂ ವರ್ಚಸ್ವಿ ನಾಯಕರನ್ನು ಸೆಳೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆ. ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಯಡಿಯೂರಪ್ಪ ಅವರು ಎರಡನೇ ಹಂತದ ಆಪರೇಷನ್ ಕಮಲ ಕಾರ್ಯಾಚರಣೆ ಆರಂಭಿಸಿದ್ದರೆ, ಅದೇ ಕಾಲಕ್ಕೆ ತಮ್ಮ ಪುತ್ರನ ಹಿತ ಕಾಯಲು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಮೇಲಿನ ಹಿಡಿತ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಕೆಲ ಪ್ರಭಾವಿ ಮತ್ತು ವರ್ಚಸ್ಸುಳ್ಳ ನಾಯಕ ರನ್ನು…

ಇಂದು ಕೆಆರ್‍ಎಸ್‍ನಲ್ಲಿ ಕಾವೇರಿಗೆ ಯಡಿಯೂರಪ್ಪ ಬಾಗಿನ ಅರ್ಪಣೆ
ಮೈಸೂರು

ಇಂದು ಕೆಆರ್‍ಎಸ್‍ನಲ್ಲಿ ಕಾವೇರಿಗೆ ಯಡಿಯೂರಪ್ಪ ಬಾಗಿನ ಅರ್ಪಣೆ

August 29, 2019

ಮೈಸೂರು, ಆ.28- ತುಂಬಿ ತುಳುಕುತ್ತಿರುವ ಕೃಷ್ಣರಾಜಸಾಗರ ಜಲಾಶಯದಲ್ಲಿ ನಾಳೆ (ಗುರುವಾರ) ಮಧ್ಯಾಹ್ನ 12.30 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾವೇರಿ ಮಾತೆಯ ಪೂಜೆ ಹಾಗೂ ಬಾಗಿನ ಸಮರ್ಪಣೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಗೋವಿಂದ ಮಕ್ತಪ್ಪ ಕಾರಜೋಳ, ಡಾ|| ಸಿ.ಎಸ್. ಅಶ್ವತ್ಥ ನಾರಾಯಣ, ಲಕ್ಷ್ಮಣ ಸಂಗಪ್ಪ ಸವದಿ ಹಾಗೂ ವಸತಿ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಭಾಗವಹಿಸುವರು. ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸುವರು. ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಎಸ್. ನಾಗರತ್ನಸ್ವಾಮಿ, ಮೈಸೂರು…

ರಾಜ್ಯದಲ್ಲಿ ಭಾರೀ ನೆರೆ ನಷ್ಟ: ತಕ್ಷಣ 3 ಸಾವಿರ ಕೋಟಿ ನೆರವಿಗೆ ಕೇಂದ್ರಕ್ಕೆ ಮನವಿ
ಮೈಸೂರು

ರಾಜ್ಯದಲ್ಲಿ ಭಾರೀ ನೆರೆ ನಷ್ಟ: ತಕ್ಷಣ 3 ಸಾವಿರ ಕೋಟಿ ನೆರವಿಗೆ ಕೇಂದ್ರಕ್ಕೆ ಮನವಿ

August 11, 2019

ಬೆಂಗಳೂರು, ಆ.10(ಕೆಎಂಶಿ)- ರಾಜ್ಯ ದಲ್ಲಿ ತಲೆದೋರಿರುವ ಮಳೆ ಮತ್ತು ನೆರೆ ಪರಿಹಾರಕ್ಕಾಗಿ ತಕ್ಷಣ ಮೂರು ಸಾವಿರ ಕೋಟಿ ರೂ. ನೆರವು ಕೋರಿ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ. ನೆರೆಯಿಂದ ಸಾವಿರಾರು ಕೋಟಿ ರೂ. ಆಸ್ತಿಪಾಸ್ತಿ ನಷ್ಟವುಂಟಾಗಿದೆ. ಪ್ರಾಥಮಿಕ ಅಂದಾಜಿನಲ್ಲಿ ಆರು ಸಾವಿರ ಕೋಟಿ ರೂ. ಎಂದು ಪರಿಗಣಿಸಿ, ಈ ಪ್ರಮಾಣದ ಹಣ ವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರುತ್ತೇನೆ. ಕಳೆದ ಮೂರು ದಿನಗಳಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಿಡಾರ ಹೂಡಿದ್ದ ಮುಖ್ಯಮಂತ್ರಿಯವರು…

ಆ.9ಕ್ಕೆ ಸಚಿವ ಸಂಪುಟ ವಿಸ್ತರಣೆ
ಮೈಸೂರು

ಆ.9ಕ್ಕೆ ಸಚಿವ ಸಂಪುಟ ವಿಸ್ತರಣೆ

August 7, 2019

ಬೆಂಗಳೂರು, ಆ.6(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಮಂತ್ರಿಮಂಡಲವನ್ನು ಆಗಸ್ಟ್ 9ರ ಶುಕ್ರವಾರದಂದು ವಿಸ್ತರಣೆ ಮಾಡಲಿದ್ದಾರೆ. ಮೊದಲ ಹಂತದಲ್ಲಿ 15 ಮಂದಿಯನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿ ಮತ್ತು ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವವರು ಯಡಿಯೂರಪ್ಪನವರ ಮಂತ್ರಿಮಂಡಲದಲ್ಲಿ ಸಚಿವ ರಾಗಿ ಕಾರ್ಯನಿರ್ವಹಿಸಬೇಕಾಗಿದೆ. ದೆಹಲಿಯಲ್ಲಿ ವರಿಷ್ಠರು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದ್ದಂತೆ ರಾಜ್ಯದ ಮೇಲಿನ ಹಿಡಿತವನ್ನು ಪೂರ್ಣವಾಗಿ ತೆಗೆದುಕೊಂಡಿ ದ್ದಾರೆ. ಹೀಗಾಗಿ ಅಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ದಕ್ಷಿಣ ಭಾರತದಲ್ಲಿ ಬಿಜೆಪಿ…

ಕಾವೇರಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆಗೆ ಮುಖ್ಯಮಂತ್ರಿ ಆದೇಶ
ಮೈಸೂರು

ಕಾವೇರಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆಗೆ ಮುಖ್ಯಮಂತ್ರಿ ಆದೇಶ

August 4, 2019

ಬೆಂಗಳೂರು, ಆ. 3(ಕೆಎಂಶಿ)- ರಾಜ್ಯದ ಕಾವೇರಿ ಜಲಾನಯನ ಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ವಾಡಿಕೆ ಗಿಂತ ಕಡಿಮೆ ಪ್ರಮಾಣದ ಮಳೆಯಾಗಿರುವುದರಿಂದ ಇಂದಿನಿಂದಲೇ ಮೋಡ ಬಿತ್ತನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಮುಂಬೈ ಹಾಗೂ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗಿದೆ, ಅಲ್ಲದೆ ಅಲ್ಲಿನ ನದಿಗಳೂ ತುಂಬಿ ಹರಿಯುತ್ತಿವೆ. ಆದರೆ ಕಾವೇರಿ ಜಲಾನಯನ, ಮಲೆನಾಡು ಮತ್ತು ಒಳನಾಡು ಪ್ರದೇಶದಲ್ಲಿ ಮಳೆ ಇಲ್ಲದೆ ಜನ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಪ್ರದೇಶದಲ್ಲಿ ಬೆಳೆ ಉಳಿಸುವುದು ಮತ್ತು…

ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದಿದ್ದರೆ ಗ್ರಹಚಾರ ಬಿಡಿಸಬೇಕಾಗುತ್ತೆ…
ಮೈಸೂರು

ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದಿದ್ದರೆ ಗ್ರಹಚಾರ ಬಿಡಿಸಬೇಕಾಗುತ್ತೆ…

August 3, 2019

ಬೆಂಗಳೂರು, ಆ. 2 (ಕೆಎಂಶಿ)- ಸಾರ್ವಜನಿಕ ಸಮಸ್ಯೆಗಳ ಕಡತಗಳನ್ನು ಇಟ್ಟುಕೊಂಡು ಧೂಳಿಡಿಸುವ ಅಧಿಕಾರಿಗಳಿಗೆ ಗ್ರಹಚಾರ ಬಿಡಿಸಬೇಕಾಗು ತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಮಸ್ಯೆ ಪರಿಹಾರ ಮಾಡುವುದು ನಮ್ಮ ಸರ್ಕಾ ರದ ಮೊದಲ ಆದ್ಯತೆ. ಯಾವುದೇ ಕಡತ ನಿಮ್ಮ ಬಳಿ ಬಂದರೆ ಮೂರು ದಿನದಲ್ಲಿ ಅದಕ್ಕೆ ಪರಿಹಾರ ಕಂಡು ಹಿಡಿಯಲೇಬೇಕೆಂದು ಜಿಲ್ಲಾಡಳಿತಕ್ಕೆ ಕಟ್ಟಾ ದೇಶ ಮಾಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ನಡೆದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯ ದರ್ಶಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ…

ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ
ಮೈಸೂರು

ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ

July 30, 2019

ಬೆಂಗಳೂರು, ಜು.29(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ನೇತೃತ್ವದ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದೆ. ಅಲ್ಲದೇ ಮಹತ್ವದ ಧನವಿನಿಯೋಗ ವಿಧೇಯಕ ಮಸೂದೆ ಕೂಡ ಅಂಗೀಕಾರಗೊಂಡಿದೆ. ಸದನ ಆರಂಭವಾಗುತ್ತಿದ್ದಂತೆಯೇ ಯಡಿಯೂರಪ್ಪ ವಿಶ್ವಾಸ ಮತ ಯಾಚಿಸಿದರು. ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರೂ, ಮತಕ್ಕೆ ಒತ್ತಾಯ ಮಾಡಲಿಲ್ಲ. ಧ್ವನಿಮತದ ಮೂಲಕ ಯಡಿಯೂರಪ್ಪ ವಿಶ್ವಾಸಮತ ಗಳಿಸುತ್ತಿ ದ್ದಂತೆ ಮುಂದಿನ ಆರು ತಿಂಗಳು ಬಿಜೆಪಿ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ. ಆಡಳಿತ ಪಕ್ಷದ ಜತೆ 106 ಮಂದಿ…

1 2 3 4
Translate »