ಬಿಜೆಪಿ, ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಅನುದಾನ
ಮೈಸೂರು

ಬಿಜೆಪಿ, ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಅನುದಾನ

September 27, 2019

ಬೆಂಗಳೂರು, ಸೆ.26(ಕೆಎಂಶಿ)-ಬಿಜೆಪಿ ಮತ್ತು ಅನರ್ಹ ಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಕಾರ್ಯ ಕೈಗೊ ಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಲಾ 25 ಕೋಟಿ ರೂ. ಬಿಡುಗಡೆ ಮಾಡಿ, ಬಂಪರ್ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಆಯ್ಕೆಗೊಂಡಿರುವ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಕೆಲ ದಿನಗಳ ಹಿಂದೆ ಯಷ್ಟೇ ಹಿಂತೆಗೆದುಕೊಂ ಡಿದ್ದ ಮುಖ್ಯಮಂತ್ರಿಯವರು ಇದೀಗ ಸುಮಾರು 3500 ಕೋಟಿ ರೂ.ಗಳಷ್ಟು ಹಣವನ್ನು ತಮ್ಮ ಪಕ್ಷದ ಶಾಸಕರಿಗೆ ನೀಡಿದ್ದಾರೆ. ಆಡಳಿತ ಪಕ್ಷದ ಸದಸ್ಯರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ 300ರಿಂದ 400 ಕೋಟಿ ರೂ. ಬಿಡುಗಡೆ ಮಾಡುವಂತೆ ಮೇಲಿಂದ ಮೇಲೆ ಒತ್ತಡ ತರುತ್ತಿದ್ದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್‍ರಾಜ್ ಇಲಾಖೆಯಲ್ಲಿರುವ ಹಣವನ್ನು ಮೊದಲ ಹಂತದಲ್ಲಿ ಮುಖ್ಯಮಂತ್ರಿಯವರು ಬಿಡುಗಡೆ ಮಾಡಿದ್ದಾರೆ.

ಮೊದಲು ಈ ಹಣವನ್ನು ಕ್ಷೇತ್ರದಲ್ಲಿ ತುರ್ತು ಕಾಮಗಾರಿ ಗಳಿಗೆ ಬಳಸಿಕೊಳ್ಳಿ. ಈಗ ಆರ್ಥಿಕ ಸಮಸ್ಯೆ, ಇನ್ನೂ ಎರಡು 3 ತಿಂಗಳು ಸಮಯಾವಕಾಶ ನೀಡಿ, ನಂತರ ಎರಡನೇ ಕಂತಿನ ಹಣವನ್ನು ನೀಡುತ್ತೇನೆ. ಕೇಂದ್ರದಿಂದ ನಮಗೆ ಯಾವುದೇ ರೀತಿಯ ಅನುದಾನಗಳು ಇನ್ನೂ ಲಭ್ಯವಾಗಿಲ್ಲ. ಇರುವ ಹಣದಲ್ಲೇ ನೆರೆ ಮತ್ತು ಬರದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಇದಕ್ಕಾಗಿ ಬಹಳಷ್ಟು ಹಣ ವಿನಿಯೋಗಿಸಿದ್ದೇನೆ. ಖಜಾನೆಯಲ್ಲೂ ಸಂಪ ನ್ಮೂಲದ ಕೊರತೆ ಇದೆ. ಎಲ್ಲವನ್ನೂ ಸರಿದೂಗಿ ಸಲು ನನಗೆ ಸಮಯ ಬೇಕು. ನಂತರ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಬಿಡುಗಡೆ ಮಾಡುವುದಾಗಿ ತಮ್ಮ ಶಾಸಕರನ್ನು ಸಮಾಧಾನಪಡಿಸಿ, ಮೊದಲ ಕಂತಿನಲ್ಲಿ ಈ ಬಂಪರ್ ಕೊಡುಗೆ ನೀಡಿದ್ದಾರೆ. ಕಳೆದ ಆರೂವರೆ ವರ್ಷಗಳ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರದಲ್ಲಿ ನಮ್ಮ ಕ್ಷೇತ್ರ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಈಗ ಪಕ್ಷ ಅಧಿಕಾರಕ್ಕೆ ಬಂದಿದೆ. ನಮಗೆ ಹೆಚ್ಚಿನ ನೆರವು ನೀಡಬೇಕು. ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡರೆ, ಪಕ್ಷ, ಸರ್ಕಾರ ಮತ್ತು ನಿಮಗೆ ಒಳ್ಳೆಯ ಹೆಸರು ಬರುತ್ತದೆ. ಹೆಚ್ಚು ಅನುದಾನ ನೀಡಿ ಎಂದು ಮುಖ್ಯಮಂತ್ರಿ ಯವರ ಮೇಲೆ ಸ್ವಪಕ್ಷೀಯ ಶಾಸಕರು ದುಂಬಾಲು ಬಿದ್ದಿದ್ದರು.

Translate »