2019ರ ದಸರಾ ಯುವ ಸಂಭ್ರಮಕ್ಕೆ ಸಂಭ್ರಮದ ತೆರೆ
ಮೈಸೂರು

2019ರ ದಸರಾ ಯುವ ಸಂಭ್ರಮಕ್ಕೆ ಸಂಭ್ರಮದ ತೆರೆ

September 27, 2019

ಮೈಸೂರು, ಸೆ.26(ಎಸ್‍ಬಿಡಿ)- ದಸರಾ ಮಹೋತ್ಸವದ ಅಂಗವಾಗಿ ನಡೆದ `ಯುವ ಸಂಭ್ರಮ’ಕ್ಕೆ ಗುರುವಾರ ಅದ್ಧೂರಿ ತೆರೆಬಿದ್ದಿತು.ಯುವ ದಸರಾದ ಕಡೇ ದಿನವಾದ ಇಂದು ಮಾನಸಗಂಗೋತ್ರಿ ಬಯಲು ರಂಗಮಂದಿರ ದಲ್ಲಿ ಯುವ ಸಮೂಹ ಕಿಕ್ಕಿರಿದಿತ್ತು. ಇಡೀ ರಂಗಮಂದಿರ ಜನರಿಂದ ತುಂಬಿ ಹೋಗಿತ್ತು. ಪ್ರೇಕ್ಷಕರೆಲ್ಲರೂ ಕೇಕೆ, ಶಿಳ್ಳೆ, ಚಪ್ಪಾಳೆ, ಕುಣಿ ತದ ಸಂಭ್ರಮದಲ್ಲಿ ಕಳೆದು ಹೋಗಿದ್ದರು. ಕಡೇ ಕ್ಷಣದವರೆಗೂ ಕಾರ್ಯಕ್ರಮ ಸವಿದು, ಕಲಾವಿದರನ್ನು ಪ್ರೋತ್ಸಾಹಿಸಿದರು. ಇದ ರೊಂದಿಗೆ ಈ ಬಾರಿಯ `ಯುವ ಸಂಭ್ರಮ’ಕ್ಕೆ ಯಶಸ್ವಿ ತೆರೆ ಎಳೆದರು.

ಕಡೆಯ ದಿನದಲ್ಲೂ ವಿಭಿನ್ನ ಕಾರ್ಯ ಕ್ರಮ ಪ್ರಸ್ತುತಗೊಂಡವು. ಧಾರವಾಡದ ಜೈ ಕರ್ನಾಟಕ ಮಲ್ಲಗಂಬ ಅಕಾಡೆಮಿಯ ಸಾಹಸಿ ಕಲಾವಿದರು ಯುವ ಸಂಭ್ರಮಕ್ಕೆ ವಿಶೇಷತೆ ನೀಡಿದರು. ವೇದಿಕೆಯ ಒಂದು ಭಾಗದಲ್ಲಿ ಇಡಲಾಗಿದ್ದ 2 ಮಲ್ಲಗಂಬಗಳಲ್ಲಿ ಸದೃಢ ಯುವಕರು ಸಾಹಸ ಪ್ರದರ್ಶಿಸಿ ದರು. ಓಡಿ ಬಂದು ಹಿಂದು ಮುಂದಾಗಿ ಕಂಬವನ್ನೇರುವುದು, ಇದ್ದಕ್ಕಿದ್ದಂತೆ ಜಿಗಿದು ಕಾಲುಗಳಲ್ಲಿ ಕಂಬ ತಬ್ಬುವುದು, ತುತ್ತ ತುದಿ ಯಲ್ಲಿ ಒಂದು ಪಾದದಲ್ಲಿ ನಿಲ್ಲುವುದು ಹೀಗೆ ವಿಭಿನ್ನ ಕಸರತ್ತುಗಳ ಮೂಲಕ ನೋಡು ಗರ ನಿಬ್ಬೆರಗಾಗಿಸಿದರು. ಇನ್ನು ಮತ್ತೊಂದು ಭಾಗದಲ್ಲಿ ಜೋತು ಬಿಟ್ಟಿದ್ದ ಹಗ್ಗದಲ್ಲಿ ಯುವತಿಯರು ಸಾಹಸ ಪ್ರದರ್ಶಿಸಿದರು. ಕಾಲಿನ ಉಗುರುಗಳ ಸಂದುಗಳಲ್ಲಿ ಹಗ್ಗ ವನ್ನು ಭದ್ರವಾಗಿ ಹಿಡಿದು, ಉಲ್ಟಾ ಜೋತಾ ಡುವುದು, ಯೋಗಾಸನ ವಿವಿಧ ಆಸನ ಗಳನ್ನು ಲೀಲಾಜಾಲವಾಗಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಚಕಿತಗೊಳಿಸಿದರು.

ಸಾಹಸಮಯ ಮಲ್ಲಕಂಬ ಪ್ರದರ್ಶನ ದಿಂದ ಬೆಕ್ಕಸಬೆರಗಾದ ಪ್ರೇಕ್ಷಕರು ಎದ್ದು ನಿಂತು, ತಮ್ಮ ಮೊಬೈಲ್ ಟಾರ್ಚ್ ಲೈಟ್ ಹೊತ್ತಿಸಿ, ಮೆಚ್ಚುಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಅಕಾಡೆಮಿಯ ತರಬೇತು ದಾರ ಸಿದ್ಧಾರೂಢ ಮಾತನಾಡಿ, ಸಿಯಾ ಚಿನ್‍ನಲ್ಲಿ ಹಿಮಸಮಾಧಿಯಾದ ವೀರ ಯೋಧ ಹನುಮಂತಪ್ಪ ನಮ್ಮ ಸಂಸ್ಥೆ ವಿದ್ಯಾರ್ಥಿ. ಅವರ ಧರಿಸಿದ್ದ ಜಾಕೆಟ್ ಅನ್ನು ಇಂದು ನಾನು ಧರಿಸಿ ನಿಮ್ಮ ಮುಂದೆ ನಿಂತಿ ದ್ದೇನೆ. ಹನುಮಂತಪ್ಪ ಅವರಂತೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈನ್ಯ ಸೇರಿದ್ದಾರೆ ಎಂದು ಭಾವುಕರಾಗಿ ನುಡಿದರು.

ಎಲ್ಲರ ಕುಣಿಸಿದ ಜಾನಪದ: ಮಂಡ್ಯ ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು, ಜಾನಪದ ಸಂಸ್ಕøತಿ ಯನ್ನು ಬಿಂಬಿಸಿದರು. ದೇಸಿ ತಮಟೆ ಸದ್ದಿಗೆ ಪೂರ್ಣಕುಂಭ, ಪೂಜಾ ಕುಣಿತ, ನಂದಿ ಕಂಬ, ಕಹಳೆ, ವೀರಗಾಸೆ, ಪಟಕುಣಿತದ ಮೂಲಕ ಜಾನಪದ ವೈಭವ ಸಾರಿದರು. ಪ್ರೇಕ್ಷಕರೂ ಸಹ ತಮಟೆ ಸದ್ದಿಗೆ ಸಕ್ಕತ್ ಸ್ಟೆಪ್ ಹಾಕಿ, ಸಂತಸಪಟ್ಟರು. ಮೈಸೂರಿನ ಮಾತೃಮಂಡಳಿ ಶಿಶು ವಿಕಾಸ ಕೇಂದ್ರದ ವಿಶೇಷ ಮಕ್ಕಳು, `ಏಳು ಮಲೆ ಮೇಲೇರಿ ಕುಂತ ನಮ್ಮ ಮಾದೇವ…’ ಹಾಡಿಗೆ ಸಾಮಾನ್ಯ ರನ್ನು ಮೀರಿಸುವಂತೆ ಜಾನಪದ ಸೊಬಗು ಚೆಲ್ಲುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

ವೀರ ಯೋಧರಿಗೆ ನಮನ: ಮೈಸೂರಿನ ಅರುಣೋದಯ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಯೋಧರ ಉಡುಪು ತೊಟ್ಟು, `ದೇಶ ಕಾಯೋನು ನೀನಲ್ಲವ, ನಮ್ಮ ಉಳಿ ಸೋನು ನೀನಲ್ಲವ…’ ಎಂದು ತ್ರಿವರ್ಣ ಧ್ವಜ ಪ್ರದರ್ಶಿಸಿ, ಸೈನಿಕರ ಸ್ಮರಿಸಿಕೊಂಡರು. ಹುಣಸೂರಿನ e್ಞÁನಾಧಾರ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು, ಉರಿ ದಾಳಿಗೆ ಪ್ರತೀಕಾರವಾಗಿ ಉಗ್ರರ ಹುಟ್ಟಡಗಿ ಸಿದ ಭಾರತದ ವೀರ ಯೋಧರಿಗೆ ನಮಿಸಿ ದರು. ಪಾಂಡವಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ತಂಡ, ಪೋಷಕರ ಮನವೊಲಿಸಿ ಸೈನ್ಯ ಸೇರುವ ಯುವತಿಯ ಕತೆ ಮೂಲಕ ಸೈನಿಕರ ತ್ಯಾಗ ಮನೋಭಾವ ಸಾರಿದರು. ಹಾಸನದ ಸರ್ಕಾರಿ ಕಲಾ ವಾಣಿಜ್ಯ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಭಾರತದ ಸ್ವಾತಂತ್ರ್ಯ ಚಳವಳಿ ಸನ್ನಿವೇಶ ವನ್ನು ವೀರ ಸಾವರ್ಕರ್ ಜೀವನಗಾಥೆ ತಿಳಿಸುವ ಮೂಲಕ ಕಣ್ಣಿಗೆ ಕಟ್ಟಿದರು.

ಕನ್ನಡ ಸಂಸ್ಕøತಿ ವೈಭವ: ದುರ್ಗೆಯರ ಸ್ಮರಣೆಯೊಂದಿಗೆ ನೃತ್ಯ ಆರಂಭಿಸಿದ ಹಾಸನದ ಎವಿಕೆ ಮಹಿಳಾ ಕಾಲೇಜು ವಿದ್ಯಾರ್ಥಿ ನಿಯರು, ಕೊಡವ ನೃತ್ಯ, ಯಕ್ಷಗಾನ, ಕಂಸಾಳೆ, ಕೋಲಾಟದೊಂದಿಗೆ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕೆಂದು’ ಸಾರಿದರು. ಹುಣಸೂರು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ನೃತ್ಯದ ಮೂಲಕ `ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಸಂದೇಶ ಸಾರಿದರು. ಗುಂಡ್ಲುಪೇಟೆ ಊಟಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ನಾಡು ಕುರಿತ ಹಲವು ಗೀತೆಗಳ ತುಣುಕಿಗೆ ನರ್ತಿಸಿ, `ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ’ ಎಂದು ಗರ್ವ ದಿಂದ ತಿಳಿಸಿದರು. ಹೆಚ್.ಡಿ.ಕೋಟೆ ತಾಲೂಕು ಹೊಮ್ಮರಗಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಶಾಲ ನಗರದ ಅನುಗ್ರಹ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಒಟ್ಟು 28 ಕಾಲೇಜು ಗಳ ತಂಡ ಪ್ರದರ್ಶನ ನೀಡಿದವು.

ಪೌರಕಾರ್ಮಿಕರಿಗೆ ಸನ್ಮಾನ: ಕಾರ್ಯ ಕ್ರಮದ ನಡುವೆ ಯುವ ಸಂಭ್ರಮ ಉಪ ಸಮಿತಿ ವತಿಯಿಂದ ಪೌರ ಕಾರ್ಮಿಕ ರನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿ ಕರು ಹಾಗೂ ಅವರ ಕುಟುಂಬ ಸದಸ್ಯ ರಿಗೆ ಕಾರ್ಯಕ್ರಮ ವೀಕ್ಷಣೆಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ 10 ದಿನ ಗಳಿಂದ ನಾಡು-ನುಡಿ, ರಾಷ್ಟ್ರೀಯತೆ, ಜಾನ ಪದ, ಯೋಧರು, ರೈತ, ಮಹಿಳಾ ಸಬಲೀ ಕರಣ, ಪೌರಾಣಿಕ, ಐತಿಹಾಸಿಕ, ಸಾಮಾ ಜಿಕ ಸಂಗತಿಗಳ ಬಗ್ಗೆ ಅರಿವು ಮೂಡಿಸುವು ದರ ಜೊತೆಗೆ ಯುವ ಸಮುದಾಯಕ್ಕೆ ಮನೋರಂಜನೆ ನೀಡಿದ `ಯುವ ಸಂಭ್ರಮ’ ಯಶಸ್ವಿಯಾಗಿ ಮುಕ್ತಾಯವಾಯಿತು. 280 ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭೆ ಅನಾ ವರಣಕ್ಕೂ ವೇದಿಕೆಯಾಗಿತ್ತು. ಇನ್ನು ಅ.1ರಿಂದ ಮಹಾರಾಜ ಕಾಲೇಜು ಮೈದಾನದಲ್ಲಿ `ಯುವ ದಸರಾ’ ಆರಂಭವಾಗಲಿದೆ.

Translate »