ಯುವ ಸಂಭ್ರಮ: ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ವೇಳಾಪಟ್ಟಿ
ಮೈಸೂರು

ಯುವ ಸಂಭ್ರಮ: ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ವೇಳಾಪಟ್ಟಿ

September 17, 2019

ಮೈಸೂರು,ಸೆ.16-ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2019ರ ಅಂಗವಾಗಿ ಸೆ. 17 ರಿಂದ 26 ರವರೆಗೆ ಯುವ ಸಂಭ್ರಮ ಪ್ರತಿದಿನ ಸಂಜೆ 5-30 ಗಂಟೆಗೆ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ವಿವಿಧ ಕಾಲೇಜುಗಳ ತಂಡದ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಸೆ.17 ರಂದು ಸಂಜೆ 5.30 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ಲಲಿತಾ ಕಲಾ ಕಾಲೇಜು ತಂಡದಿಂದ ಸ್ವಾಗತ ನೃತ್ಯ ಕಾರ್ಯಕ್ರಮ, ಸಂಜೆ 7 ಗಂಟೆಗೆ ಮೈಸೂರಿನ ಯರಗನಹಳ್ಳಿಯ ನಿತ್ಯ ನಿರಂತರ ಟ್ರಸ್ಟ್ ತಂಡದಿಂದ ಡಾ. ಶಿವಕುಮಾರ ಸ್ವಾಮೀಜಿಯವರ ಜೀವನ ಕುರಿತ ನೃತ್ಯ ಕಾರ್ಯ ಕ್ರಮ, ಸಂಜೆ 7.10ಕ್ಕೆ ಹಾಸನದ ಮೊಸಳೆ ಹೊಸ ಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ದಿಂದ ಜಾನಪದ ನೃತ್ಯ, ಸಂಜೆ 7.20ಕ್ಕೆ ಚಾಮ ರಾಜನಗರದ ಶಂಕರಪುರದ ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜು ತಂಡದಿಂದ ಕರುನಾಡ ದಸರಾ ಕಾರ್ಯಕ್ರಮ, ಸಂಜೆ 7.30ಕ್ಕೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಭಾರತಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡದಿಂದ ಪರಿಸರ ಸಂರಕ್ಷಣೆ ಕಾರ್ಯ ಕ್ರಮ, ಸಂಜೆ 7.40ಕ್ಕೆ ಹಾಸನ ಜಿಲ್ಲೆ ಹೊಳೆನರಸಿ ಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ತಂಡದಿಂದ ಕನ್ನಡ ಮತ್ತು ಸಂಸ್ಕøತಿ ಕಾರ್ಯಕ್ರಮ, ಸಂಜೆ 7.50ಕ್ಕೆ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ತಂಡದಿಂದ ಅರಣ್ಯ ಸಂರಕ್ಷಣೆ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8 ಗಂಟೆಗೆ ಹುಣಸೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದಿಂದ ಪರಿಸರ ಸಂರಕ್ಷಣೆ ಮತ್ತು ಮಾನವ ನಿರ್ಮಿತ ಆಪತ್ತುಗಳು ಕಾರ್ಯಕ್ರಮ, ರಾತ್ರಿ 8.10ಕ್ಕೆ ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆಯ ವಿಶ್ವಭಾರತಿ ಪ್ರಥಮ ದರ್ಜೆ ಕಾಲೇಜು ತಂಡದಿಂದ ಪೌರಾಣಿಕ ಕಾರ್ಯಕ್ರಮ, ರಾತ್ರಿ 8.20 ಕ್ಕೆ ಮೈಸೂರು ಜಿಲ್ಲೆಯ ಕೃಷ್ಣರಾಜನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ತಂಡದಿಂದ ನಮ್ಮ ನಾಡು ನಮ್ಮ ಹೆಮ್ಮೆ ಕಾರ್ಯಕ್ರಮ, ರಾತ್ರಿ 8.30ಕ್ಕೆ ಮೈಸೂರಿನ ರಾಘವೇಂದ್ರ ನಗರದ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ತಂಡದಿಂದ ದೇಶ ಕಂಡ ವೀರವನಿತೆಯರು ಕಾರ್ಯಕ್ರಮ, ರಾತ್ರಿ 8.40ಕ್ಕೆ ಪಿರಿಯಾಪಟ್ಟಣದ ಸಿದ್ದಣ್ಣಶೆಟ್ಟರ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದಿಂದ ಮಹಿಳಾ ಸಬಲೀ ಕರಣ ಮತ್ತು ಸಮಾನತೆ ಕಾರ್ಯಕ್ರಮ, ರಾತ್ರಿ 8.50ಕ್ಕೆ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ತಂಡದಿಂದ ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 9 ಗಂಟೆಗೆ ಮೈಸೂರಿನ ರೂಪಾನಗರದ ದೀಪಾ ಸಂಯುಕ್ತ ಪದವಿ ಪೂರ್ವ ಕಾಲೇಜು ತಂಡ ದಿಂದ ರಾಷ್ಟ್ರೀಯ ಭಾವೈಕ್ಯತೆ ಮತ್ತು ಪಾರಂಪರಿಕ ಆಸ್ತಿಗಳ ಸಂರಕ್ಷಣೆ ಕಾರ್ಯಕ್ರಮ, ರಾತ್ರಿ 9.10ಕ್ಕೆ ಮೈಸೂರು ಸಿಟಿ ಮೈನಾರಿಟಿ ಪ್ರಥಮ ದರ್ಜೆ ಕಾಲೇಜು ತಂಡದಿಂದ ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮ, ರಾತ್ರಿ 9.20ಕ್ಕೆ ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್. ಪದವಿ ಪೂರ್ವ ಕಾಲೇಜು ತಂಡ ದಿಂದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಕಾರ್ಯಕ್ರಮ, ರಾತ್ರಿ 9.30ಕ್ಕೆ ಮೈಸೂರಿನ ಆಲನಹಳ್ಳಿ ಶ್ರೀ ನಿರ್ವಾಣಸ್ವಾಮಿ ಪ್ರೌಢಶಾಲೆ ಮತ್ತು ಕಾನ್ವೆಂಟ್, ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜು ತಂಡ ದಿಂದ ಕನ್ನಡ ಮತ್ತು ಸಂಸ್ಕøತಿ ಜಾನಪದ ಕಲೆ ಕಾರ್ಯಕ್ರಮ, ರಾತ್ರಿ 9.40ಕ್ಕೆ ವಿಶ್ವೇಶ್ವರ ನಗರದ ಶ್ರೀ ಜಯಚಾಮರಾಜೇಂದ್ರ ಪದವಿ ಪೂರ್ವ ಕಾಲೇಜು ತಂಡದಿಂದ ವಿವಿಧತೆಯಲ್ಲಿ ಏಕತೆ ಕಾರ್ಯಕ್ರಮ, ರಾತ್ರಿ 9.50ಕ್ಕೆ ಮೈಸೂರಿನ ಅರವಿಂದ ನಗರದ ಬೋಧಿಸತ್ವ ಪದವಿ ಪೂರ್ವ ಕಾಲೇಜು ತಂಡದಿಂದ ಮಹಿಳಾ ಸಬಲೀಕರಣ ಮತ್ತು ಸಮಾನತೆ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಮೇಟಗಳ್ಳಿಯ ಪೂಜಾ ಭಾಗವತ್ ಮೆಮೊರಿಯಲ್ ಮಹಾಜನ ಸ್ನಾತಕೋತ್ತರ ಕಾಲೇಜು ತಂಡದಿಂದ ಸಮಾನತೆ ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮ ನಡೆಯಲಿದೆ.

Translate »