ದಸರಾ ಫಲ-ಪುಷ್ಪ ಪ್ರದರ್ಶನ ಮತ್ತಷ್ಟು ಆಕರ್ಷಣೀಯಗೊಳಿಸಲು ಭಾರೀ ಸಿದ್ಧತೆ
ಮೈಸೂರು

ದಸರಾ ಫಲ-ಪುಷ್ಪ ಪ್ರದರ್ಶನ ಮತ್ತಷ್ಟು ಆಕರ್ಷಣೀಯಗೊಳಿಸಲು ಭಾರೀ ಸಿದ್ಧತೆ

September 17, 2019

ಮೈಸೂರು,ಸೆ.16(ಎಸ್‍ಬಿಡಿ)- ಮೈಸೂರು ದಸರಾ ಮಹೋತ್ಸವದ ಅಂಗ ವಾಗಿ ಏರ್ಪಡಿಸಲಾಗುವ `ದಸರಾ ಫಲ- ಪುಷ್ಪ ಪ್ರದರ್ಶನ’ವನ್ನು ಈ ಬಾರಿ ಮತ್ತಷ್ಟು ಆಕರ್ಷಣೀಯವಾಗಿಸುವ ಪ್ರಯತ್ನ ನಡೆದಿದೆ.

ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ಸರ್ಕಲ್)ದ ಸಮೀಪ ವಿರುವ ಕುಪ್ಪಣ್ಣ ಪಾರ್ಕ್‍ನಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ವ್ಯಾಪ್ತಿಯ 6 ನರ್ಸರಿಗಳಲ್ಲಿ ವಿವಿಧ ಜಾತಿ, ಬಣ್ಣದ 60 ಸಾವಿರಕ್ಕೂ ಹೆಚ್ಚು ಹೂವು ಹಾಗೂ ಅಲಂಕಾರಿಕಾ ಗಿಡಗಳನ್ನು ಕುಂಡದಲ್ಲಿ ಬೆಳೆಸಿ, ಪೋಷಿಸಲಾಗಿದೆ.

ನಗರದ ಇಟ್ಟಿಗೆಗೂಡಿನಲ್ಲಿರುವ ಉದ್ಯಾನಗಳು ಹಾಗೂ ತೋಟಗಳು ವಿಭಾಗದ ಸಹಾಯಕ ನಿರ್ದೇಶಕರ ಕಚೇರಿ ಆವರಣದ ಕೇಂದ್ರ ಸಸ್ಯಾಗಾರ, ಜಿಲ್ಲಾಧಿಕಾರಿಗಳ ಕಚೇರಿ(ಹಳೆಯ) ಬಳಿ ಯಿರುವ ಗೋಲ್ಡನ್ ಪಾರ್ಕ್, ಸರ್ಕಾರಿ ಭವನ ತೋಟಗಾರಿಕಾ ವಿಭಾಗದ ಸಸ್ಯ ಕೇಂದ್ರ, ಜಲದರ್ಶಿನಿ ಅತಿಥಿ ಗೃಹದ ಸಮೀಪವಿರುವ ಸಸ್ಯ ಕೇಂದ್ರ ಹಾಗೂ ದಸರಾ ವಸ್ತು ಪ್ರದರ್ಶನ ಆವರಣ ದಲ್ಲಿರುವ ತೋಟಗಾರಿಕಾ ವಿಭಾಗದ ಆವರಣ ಸೇರಿದಂತೆ 6 ನರ್ಸರಿಗಳಲ್ಲಿ 40ಕ್ಕೂ ಹೆಚ್ಚು ವಿವಿಧ ಜಾತಿ ಹಾಗೂ ಬಣ್ಣದ ಹೂ ಹಾಗೂ ಅಲಂಕಾರಿಕ ಸಸ್ಯ ಗಳನ್ನು ಬೆಳೆಸಿದ್ದು, ವೀಕ್ಷಕರ ಕಣ್ಮನ ತಣಿಸಲು ಸಜ್ಜಾಗಿ ನಿಂತಂತಿವೆ.

ದಸರಾ ಫಲ-ಪುಷ್ಪ ಪ್ರದರ್ಶನ ನಡೆ ಯುವ ಕುಪ್ಪಣ್ಣ ಪಾರ್ಕ್‍ನಲ್ಲೂ 40 ಸಾವಿ ರಕ್ಕೂ ಹೆಚ್ಚು ಹೂ ಹಾಗೂ ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ದಸರಾ ಆರಂ ಭದ ವೇಳೆಗೆ ಹೂ ಅರಳಲಿವೆ. ಜೊತೆಗೆ 6 ಸಸ್ಯ ಕೇಂದ್ರಗಳಲ್ಲಿ ಕುಂಡಗಳಲ್ಲಿ ಬೆಳೆಸಿ ರುವ ಗಿಡಗಳನ್ನೂ ಅಲ್ಲಿಗೆ ಸ್ಥಳಾಂತರಿಸಿ, ಗಾಜಿನ ಮನೆ ಸುತ್ತ ಹಾಗೂ ಪಾರ್ಕ್ ಆವರಣದಲ್ಲಿ ಆಕರ್ಷಕ ರೀತಿಯಲ್ಲಿ ಜೋಡಿಸಲಾಗುವುದು. ಆಕರ್ಷಕ ಜನರ ಕಣ್ಮನ ಸೆಳೆಯುವಂತೆ ಪ್ರದರ್ಶನ ನಡೆ ಸಲು ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗ ದರ್ಶನ, ಸಹಕಾರದೊಂದಿಗೆ ಸಿದ್ಧತೆ ನಡೆಸ ಲಾಗುತ್ತಿದೆ ಎಂದು ತೋಟಗಾರಿಕಾ ಸಹಾಯಕ ಜವರೇಗೌಡ `ಮೈಸೂರು ಮಿತ್ರ’ಕ್ಕೆ ತಿಳಿಸಿದರು.

ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಈ ಬಾರಿ ದಸರಾ ಫಲ-ಪುಷ್ಪ ಪ್ರದರ್ಶನ ದಲ್ಲಿ ವಿಶೇಷವಾಗಿ ವಿವಿಧ ಅಲಂಕಾರಿಕ ಹೂವು ಗಳಿಂದ 6 ಅಡಿ ಎತ್ತರದ ಒಡೆಯರ್ ಪ್ರತಿಮೆ ನಿರ್ಮಿಸಲು ಚಿಂತನೆ ನಡೆದಿದೆ.

ಮೈಸೂರು ವಿವಿ: ದಸರಾ ಮಹೋತ್ಸವ ಕ್ಕಾಗಿ ಮೈಸೂರು ವಿಶ್ವ ವಿದ್ಯಾನಿಲಯ ಕಾರ್ಯಸೌಧ(ಕ್ರಾಫರ್ಡ್ ಹಾಲ್)ದ ಆವರಣ ದಲ್ಲಿ ಸಾವಿರಾರು ಹೂ ಹಾಗೂ ಅಲಂಕಾರಿಕ ಗಿಡಗಳನ್ನು ಬೆಳೆಸಲಾಗಿದೆ. ದಸರಾ ವೇಳೆ ಕುಕ್ಕರಹಳ್ಳಿ ಕೆರೆ ಆವರಣ, ಕ್ರಾಫರ್ಡ್ ಭವನದ ಆವರಣದಲ್ಲಿ ಜೋಡಿಸಿ, ಪ್ರದರ್ಶಿಸಲು ಹಾಗೂ ಕುಪ್ಪಣ್ಣ ಪಾರ್ಕ್ ಪ್ರದರ್ಶನದಲ್ಲಿ ಭಾಗವಹಿಸಲು ವಿಶಿಷ್ಟ ರೀತಿಯ ಗಿಡಗಳನ್ನು ಬೆಳೆಸಲಾಗಿದೆ.

ಅರಮನೆ ಆವರಣ: ದಸರಾ ಮಹೋ ತ್ಸವದ ಅಂಗವಾಗಿ ಕುಪ್ಪಣ್ಣ ಪಾರ್ಕ್ ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ದಲ್ಲಿ ಭಾಗವಹಿಸಲು ಅರಮನೆ ಮಂಡಳಿ ತೋಟಗಾರಿಕಾ ವಿಭಾಗ, ಸಲ್ವಿಯಾ ಪರ್ಪಲ್, ಸ್ಕಾರ್ಲೆಟ್, ಸನ್‍ಫ್ಲವರ್ ಸೇರಿದಂತೆ 35ಕ್ಕೂ ಹೆಚ್ಚು ಜಾತಿಯ ಸುಮಾರು 5 ಸಾವಿರ ಅಲಂಕಾರಿಕ ಗಿಡ ಗಳನ್ನು ಪಾಟ್‍ಗಳಲ್ಲಿ ಬೆಳೆಸಿ, ಪೋಷಿಸ ಲಾಗುತ್ತಿದೆ. ಅಲ್ಲದೆ ಅರಮನೆ ಆವರಣ ದಲ್ಲಿ ನಿರ್ಮಿಸುವ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರಧಾನ ವೇದಿಕೆ ಹಾಗೂ ಸುತ್ತ-ಮುತ್ತ ಜೋಡಿಸುವ ಸಲುವಾಗಿ ಸಾವಿರಾರು ಹೂ ಹಾಗೂ ಅಲಂಕಾರಿಕ ಗಿಡಗಳನ್ನು ಬೆಳೆಸಲಾಗಿದೆ.

ಒಟ್ಟಾರೆ ವಿಜಯ ದಶಮಿಯಲ್ಲಿ ನಗರ ಪ್ರದಕ್ಷಿಣೆ ನಡೆಸಿ, ಆಕರ್ಷಕ ವಿದ್ಯುತ್ ದೀಪಾಲಂಕಾರ, ವಿವಿಧ ವೇದಿಕೆಯಲ್ಲಿ ನಡೆ ಯುವ ವಿಭಿನ್ನ ಸಾಂಸ್ಕøತಿಕ ಕಾರ್ಯಕ್ರಮ ಗಳ ಕಣ್ತುಂಬಿಕೊಂಡು, ಆಹಾರ ಮೇಳದಲ್ಲಿ ಸ್ವಾದಿಷ್ಟ, ರುಚಿಕರ ಖಾದ್ಯಗಳ ಸವಿದು, ಪುಸ್ತಕ ಮೇಳ, ಕ್ರೀಡಾಕೂಟಗಳಲ್ಲಿ ಭಾಗಿ ಯಾಗುವುದರ ಜೊತೆಗೆ ಫಲ-ಪುಷ್ಪ ಪ್ರದರ್ಶನದಲ್ಲಿ ವಿಹರಿಸಿ, ಬಣ್ಣ ಬಣ್ಣದ ಹೂಗಳ ಸೊಬಗು ಕಾಣಬಹುದು.

Translate »