ರೈಲ್ವೆ `ಸ್ವಚ್ಛತಾ ಪಾಕ್ಷಿಕ’ಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‍ಕುಮಾರ್ ಸಿಂಗ್ ಚಾಲನೆ
ಮೈಸೂರು

ರೈಲ್ವೆ `ಸ್ವಚ್ಛತಾ ಪಾಕ್ಷಿಕ’ಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‍ಕುಮಾರ್ ಸಿಂಗ್ ಚಾಲನೆ

September 17, 2019

 ಮೈಸೂರು ರೈಲ್ವೆ ವಿಭಾಗದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ
 ಪ್ಲಾಸ್ಟಿಕ್ ಪೂರ್ಣ ವಿಲೇವಾರಿ ಯಂತ್ರ ಅಳವಡಿಕೆ
 ಬಟ್ಟೆ ಒಗೆಯುವ ಯಾಂತ್ರಿಕ ಕೇಂದ್ರ ಸ್ಥಾಪನೆ
ಮೈಸೂರು,ಸೆ.16(ಆರ್‍ಕೆಬಿ)-ದೇಶದ 64 ರೈಲ್ವೆ ವಿಭಾಗಗಳ ಪೈಕಿ ಮೈಸೂರು ರೈಲ್ವೆ ವಿಭಾಗ ಸ್ವಚ್ಛತೆಯಲ್ಲಿ 4ನೇ ಸ್ಥಾನ ಪಡೆದಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‍ಕುಮಾರ್ ಸಿಂಗ್ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ರೈಲ್ವೆ ನಿಲ್ದಾಣದ ಆವರಣ ದಲ್ಲಿ `ಸ್ವಚ್ಛತಾ ಪಾಕ್ಷಿಕ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿ ಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಪರಿಕಲ್ಪನೆಯಡಿ ರೈಲ್ವೆ ನಿಲ್ದಾಣಗಳು, ರೈಲು ಬೋಗಿಗಳೂ ಹಾಗೂ ನಿಲ್ದಾಣದ ಸುತ್ತಲಿನ ಪ್ರದೇಶದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ನೈರುತ್ಯ ರೈಲ್ವೆಯ ವ್ಯಾಪ್ತಿ ಯಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ಹೀಗೆ ಮೂರು ವಿಭಾಗಗಳಿದ್ದು, ಈ ಪೈಕಿ ಮೈಸೂರು ಸ್ವಚ್ಛತೆಗೆ ಹೆಸರು ಪಡೆದಿರುವುದು ಹೆಮ್ಮೆಯ ವಿಚಾರ ಎಂದರು.

ಸ್ವಚ್ಛತಾ ಪಾಕ್ಷಿಕದಲ್ಲಿ ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇ ಧದ ಬಗ್ಗೆ ಪ್ರಚಾರಪಡಿಸಲಾಗುತ್ತಿದೆ. ಸ್ವಚ್ಛತಾ ಪಾಕ್ಷಿಕದಲ್ಲಿ ಸ್ವಚ್ಛ ರೈಲು ಸ್ವಚ್ಛ ಭಾರತ್ ಅಭಿಯಾನದ ಮೂಲಕ ರೈಲ್ವೆ ನಿಲ್ದಾಣ, ಪ್ರದೇಶ ಮತ್ತು ರೈಲು ಬೋಗಿಗಳ ಸ್ವಚ್ಛತೆ ಬಗ್ಗೆ ಪ್ರಯಾಣಿಕರಲ್ಲಿ ಅರಿವು ಮೂಡಿಸಲಾ ಗುವುದು. ಪ್ರಯಾಣಿಕರಿಂದ ಸಲಹೆ, ಸೂಚನೆ ಗಳನ್ನು ಪಡೆಯಲಾಗುವುದು ಎಂದರು.

ರೈಲ್ವೆ ನಿಲ್ದಾಣಗಳಲ್ಲಿ ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ವಿರುದ್ಧ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಹೀಗಾಗಿ ರೈಲ್ವೆ ನಿಲ್ದಾಣಗಳಲ್ಲಿ ಅಂತಹ ಸಿಂಗಲ್ ಯೂಸ್ ಪ್ಲಾಸ್ಟಿಕ್‍ಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿದರು.

ರೈಲ್ವೆ ನಿಲ್ದಾಣದಲ್ಲಿ ಲಾಂಡ್ರಿ ಹಾಗೂ ನರ್ಸರಿಗೂ ಚಾಲನೆ ನೀಡಲಾಗಿದೆ. ರೈಲ್ವೆ ಸಚಿವ ಪಿಯೂಶ್ ಗೋಯಲ್ ಮತ್ತು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ನಿರ್ದೇಶನದಂತೆ ಪರಿಸರ ಜನ ಜಾಗೃತಿ ಗಾಗಿ ಮುಂದಾಗಿದ್ದು ರೈಲ್ವೆ ಕಂಬಿಗಳ ಪಕ್ಕದಲ್ಲಿ ಸಸಿಗಳನ್ನು ನೆಡಲಾಗುವುದು ಎಂದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಮಾತ ನಾಡಿ, ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ರೈಲ್ವೆ ನಿಲ್ದಾಣಗಳ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಸೂಚಿಸಲಾಗಿದೆ. ಪ್ರಯಾಣಿಕರು ಪೇಪರ್ ಅಥವಾ ಬಟ್ಟೆ ಬ್ಯಾಗ್‍ಗಳನ್ನೇ ಬಳಸುವಂತೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲದೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನು ಪುಡಿ ಮಾಡುವ ಮೂಲಕ ಪೂರ್ಣ ವಿಲೇವಾರಿ ಮಾಡುವ ಯಂತ್ರಗಳನ್ನು ಅಳವ ಡಿಸಲಾಗಿದೆ. ಹಾಸನದಲ್ಲಿಯೂ ಇಂತಹ ಯಂತ್ರ ಅಳವಡಿಸಲಾಗುವುದು ಎಂದರು.

ಬಟ್ಟೆ ಹೊಗೆಯುವ ಯಂತ್ರ (ಲಾಂಡ್ರಿ): ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬಟ್ಟೆ ಹೊಗೆಯಲು ಯಾಂತ್ರಿಕ ಕೇಂದ್ರ ತೆರೆಯ ಲಾಗಿದ್ದು, ಇದುವರೆಗೂ 1.5 ಟನ್‍ನಷ್ಟು ಬಟ್ಟೆಗಳನ್ನು ಹೊರಗಡೆ ಹೊಗೆಯಲು ನೀಡಲಾಗುತ್ತಿತ್ತು. ಆದರೆ ಸ್ವಚ್ಛತೆಯ ಗುಣ ಮಟ್ಟ ಸರಿಯಿಲ್ಲದ ಕಾರಣ ನಿಲ್ದಾಣದಲ್ಲಿಯೇ 2.7 ಟನ್ sಸಾಮಥ್ರ್ಯದ ಬಟ್ಟೆ ಹೊಗೆ ಯುವ ಎರಡು ಯಂತ್ರ ಹಾಗೂ ನಾಲ್ಕು ಬಟ್ಟೆ ಒಣಗಿಸುವ ಯಂತ್ರಗಳನ್ನು ಅಳವ ಡಿಸಲಾಗಿದೆ. ಇಲ್ಲಿ ಪ್ರತಿದಿನ ಪಾಳಿ ಆಧಾರ ದಲ್ಲಿ 30 ಮಂದಿಯನ್ನು ಬಟ್ಟೆ ಒಗೆಯಲು ಬಳಸಿಕೊಳ್ಳಲಾಗುತ್ತದೆ. ಇದರಿಂದ 2 ವರ್ಷದ ಗುತ್ತಿಗೆ ಅವಧಿಗೆ ಹೊರಗಡೆ ಬಟ್ಟೆ ಒಗೆಯಲು ನೀಡಲಾಗುತ್ತಿದ್ದ 1.2 ಕೋಟಿ ರೂ. ರೈಲ್ವೆ ಇಲಾಖೆಗೆ ಉಳಿ ದಂತಾಗುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಗೆ ಮುನ್ನ ಪ್ರಧಾನ ವ್ಯವಸ್ಥಾಪಕ ಅಜಯ್‍ಕುಮಾರ್ ಸಿಂಗ್ ಮೈಸೂರಿನ ಒಂಟಿಕೊಪ್ಪಲ್ ರೈಲ್ವೆ ಕಾಲೋ ನಿಯಿಂದ ರೈಲ್ವೆ ನಿಲ್ದಾಣದವರೆಗೆ ಏರ್ಪಡಿ ಸಿದ್ದ ಪ್ಲಾಸ್ಟಿಕ್ ಅರಿವು ಜಾಥಾಗೆ ಚಾಲನೆ ನೀಡುವ ಮೂಲಕ `ಸ್ವಚ್ಛತಾ ಪಾಕ್ಷಿಕ’ಕ್ಕೆ ಚಾಲನೆ ನೀಡಲಾಯಿತು. ಬಳಿಕ ರೈಲ್ವೆ ನಿಲ್ದಾಣದ ಆವರಣದಲ್ಲಿ ನಿಲ್ದಾಣದ ಎಲ್ಲಾ ಅಧಿಕಾರಿ, ಸಿಬ್ಬಂದಿ ರೈಲ್ವೆ ಸ್ವಚ್ಛತೆ ಕುರಿತಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಶಾಲಾ ಮಕ್ಕಳು, ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಪರಿಸರ ಅರಿವು ಕುರಿತ ಬೀದಿ ನಾಟಕ ಗಮನ ಸೆಳೆಯಿತು. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಭಾಗ ವಹಿಸಿ, ಪ್ರಮಾಣ ವಚನ ಸ್ವೀಕರಿಸಿದರು.

Translate »