‘ಉರಿಯ ಉಯ್ಯಾಲೆ’ ನಾಟಕ ಪ್ರದರ್ಶನ
ಮೈಸೂರು

‘ಉರಿಯ ಉಯ್ಯಾಲೆ’ ನಾಟಕ ಪ್ರದರ್ಶನ

September 17, 2019

ಮೈಸೂರು,ಸೆ.16(ಎಂಟಿವೈ)- ಗೃಹಿಣಿ, ಶಿಕ್ಷಕಿ ಹಾಗೂ ವೈದ್ಯರಿರುವ ಎಂಟು ಮಹಿಳೆಯರ ಒಳಗೊಂಡ ತಂಡ ಎಂಟು ದ್ರೌಪದಿಯ ಪಾತ್ರವನ್ನೊಳಗೊಂಡ `ಉರಿಯ ಉಯ್ಯಾಲೆ’ ನಾಟಕವನ್ನು ಸೆ.19ರಂದು ಸಂಜೆ 7ಕ್ಕೆ ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ಪ್ರದರ್ಶಿಸಲಿದ್ದಾರೆ.

ಮೈಸೂರಿನ ರಂಗಯಾನ ಟ್ರಸ್ಟ್ ವತಿ ಯಿಂದ ಆಯೋಜಿಸಿರುವ ಈ ನಾಟಕ ಪ್ರದರ್ಶನದಲ್ಲಿ ಡಾ.ಹೆಚ್.ಎಸ್. ವೆಂಕ ಟೇಶಮೂರ್ತಿ ರಚಿಸಿರುವ `ಉರಿಯ ಉಯ್ಯಾಲೆ’ ನಾಟಕವನ್ನು ಎಂಟು ಮಹಿಳೆ ಯರು ಪ್ರತ್ಯೇಕ, ದ್ರೌಪದಿ ಪಾತ್ರ ಅಭಿನ ಯಿಸಲಿದ್ದಾರೆ ಎಂದು ರಂಗಯಾನ ಟ್ರಸ್ಟ್ ಅಧ್ಯಕ್ಷ ವಿಕಾಸ್‍ಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಂಗಾಯಣ ಕಲಾವಿದೆ, ಹಿರಿಯ ರಂಗ ನಿರ್ದೇಶಕಿ ಬಿ.ಎನ್.ಶಶಿಕಲಾ ನಾಟಕ ನಿರ್ದೇಶಿಸಿದ್ದು, ಶಿಕ್ಷಕಿ, ವೈದ್ಯೆ, ಗೃಹಿಣಿ ಯರು ನಾಟಕದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ. ಆ ಮೂಲಕ ಸಾಂಸಾರಿಕ ಜವಾಬ್ದಾರಿ ಮಾತ್ರ ವಲ್ಲದೆ, ಸಾಂಸ್ಕøತಿಕ ಚಟುವಟಿಕೆಗಳಲ್ಲೂ ಗೃಹಿಣಿಯರು ಮೇಲುಗೈ ಸಾಧಿಸಬಹುದು ಎಂದು ಸೆ.19ರಂದು ಸಾಬೀತು ಮಾಡಲು ಟೊಂಕಕಟ್ಟಿ ನಿಂತಿದ್ದಾರೆ.

ನಾಟಕ ಕುರಿತಂತೆ ನಿರ್ದೇಶಕಿ ಬಿ.ಎನ್. ಶಶಿಕಲಾ ಮಾತನಾಡಿ, ಅಧ್ಯಾಪಕರು, ವೈದ್ಯರು, ಗೃಹಿಣಿಯರು ಸೇರಿದಂತೆ ಸುಮಾರು ಎಂಟು ಮಂದಿ ಮಹಿಳೆಯ ರಿಗೆ ವಿಶೇಷ ತರಬೇತಿ ನೀಡುವ ಮೂಲಕ ಪಾತ್ರಕ್ಕೆ ಜೀವ ತುಂಬಲು ಸಜ್ಜಾಗಿದ್ದು, ಹವ್ಯಾಸಿ ರಂಗಭೂಮಿಯಲ್ಲಿ ಇದೊಂದು ವಿಶೇಷ ಪ್ರಯೋಗವಾಗಿದೆ. ಈ ಎಲ್ಲ ಪಾತ್ರಧಾರಿಗಳಿಗೆ ಇದು ಮೊದಲ ನಾಟಕ ವಾಗಿದೆ. ಅಭಿನಯದ ಬಗ್ಗೆ ಮಾಹಿತಿಯೇ ಇಲ್ಲದ ಈ ತಂಡದ ಮಹಿಳೆಯರನ್ನು ಸಜ್ಜು ಗೊಳಿಸುವುದು ಸವಾಲಿನ ಸಂಗತಿ ಯಾಗಿತ್ತು. ಆದರೂ 30 ದಿನಗಳ ತರಬೇತಿ ಪರಿಪೂರ್ಣ ರಂಗಭೂಮಿ ಕಲಾ ವಿದರಾಗಿ ಹೊರ ಹೊಮ್ಮಿದ್ದಾರೆ. ಸೆ.19ರ ನಂತರ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದರ್ಶನ ನೀಡುವ ಉದ್ದೇಶವಿದೆ ಎಂದರು.

ವೈದ್ಯೆ ಡಾ.ಕಾತ್ಯಾಯಿನಿ ಮಾತನಾಡಿ, ಸಮಾನ ಮನಸ್ಕ ಎಂಟು ಗೃಹಿಣಿಯರು ಸೇರಿ ನಾಟಕ ಪ್ರದರ್ಶನಕ್ಕೆ ಮುಂದಾದೆವು. ಕೇವಲ ನಾಲ್ಕು ಗೋಡೆ ನಡುವೆ ಜೀವನ ಸಾಗಿಸದೆ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಶಶಿಕಲಾ ಅವರ ನಿರ್ದೇಶನದಲ್ಲಿ `ಉರಿಯ ಉಯ್ಯಾಲೆ’ ನಾಟಕದಲ್ಲಿ ಅಭಿನಯಿಸುತ್ತಿ ದ್ದೇವೆ. ಇದಕ್ಕೆ ಕುಟುಂಬದ ಸದಸ್ಯರ ಸಹ ಕಾರವೂ ಎಲ್ಲರಿಗೂ ಸಿಕ್ಕಿದೆ. ಮೊದಲ ಅವಕಾಶ ಸದುಪಯೋಗಪಡಿಸಿ ಕೊಂಡಿದ್ದೇವೆ. ಇನ್ನಷ್ಟು ನಾಟಕ ಪ್ರದರ್ಶನ ನೀಡಲು ಉತ್ಸುಕರಾಗಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಾತ್ರಧಾರಿಗಳಾದ ಶಿಕ್ಷಕಿ ಹಾಗೂ ಗೃಹಿಣಿಯರಾದ ಶೃತಿ, ಅರ್ಚನಾ, ಶ್ರೀಮತಿ, ಸರಳ ನಟರಾಜ್, ಸುಮಾ ಪ್ರಶಾಂತ್, ಜಯಶ್ರೀ ಇದ್ದರು.

Translate »