ಬಹುಮಹಡಿ ವಾಹನ ಪಾರ್ಕಿಂಗ್, ವಾಣಿಜ್ಯ ಸಮುಚ್ಛಯ ಕಟ್ಟಡಗಳು ಉದ್ಘಾಟನೆಗೆ ಸಿದ್ಧ
ಮೈಸೂರು

ಬಹುಮಹಡಿ ವಾಹನ ಪಾರ್ಕಿಂಗ್, ವಾಣಿಜ್ಯ ಸಮುಚ್ಛಯ ಕಟ್ಟಡಗಳು ಉದ್ಘಾಟನೆಗೆ ಸಿದ್ಧ

September 27, 2019

ಮೈಸೂರು,ಸೆ.26(ಆರ್‍ಕೆಬಿ)- ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯ ಕ್ರಮ ಸೆ.29ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಕೈಗೊಳ್ಳ ಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಗಳು ಅಂತಿಮ ಹಂತಕ್ಕೆ ಬಂದಿವೆ.

ಚಾಮುಂಡಿಬೆಟ್ಟದಲ್ಲಿ ಬಸ್ ನಿಲ್ದಾಣದ ಹಿಂಭಾಗ 600 ಕಾರು, 1000 ಬೈಕ್‍ಗಳನ್ನು ನಿಲ್ಲಿಸಬಹುದಾದ ಬಹುಮಹಡಿ ವಾಹನ ಪಾರ್ಕಿಂಗ್ ಕಟ್ಟಡ ಬಹುತೇಕ ಪೂರ್ಣ ಗೊಂಡಿದೆ. ಅಲ್ಲದೆ 7.04 ಕೋಟಿ ಅಂದಾಜು ವೆಚ್ಚದಲ್ಲಿ 116 ಮಳಿಗೆ ಗಳಿರುವ ವಾಣಿಜ್ಯ ಸಮುಚ್ಛಯ ಕಟ್ಟಡವೂ ಈಗಾಗಲೇ ಸಿದ್ಧ ಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ಬಹುಮಹಡಿ ವಾಹನ ನಿಲುಗಡೆ ಸ್ಥಳ ದಿಂದ ದೇವಸ್ಥಾನದವರೆಗೆ ಅರ್ಧ ಕಿ.ಮೀ. ಉದ್ದದ ಸರತಿ ಸಾಲಿನ ಶೆಲ್ಟರ್ ನಿರ್ಮಾಣ ಕಾರ್ಯ ಮುಗಿದಿದ್ದು, ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದ ಜಾಗದಲ್ಲಿ ಅದಕ್ಕೆ ಸಂಪರ್ಕ ಕಲ್ಪಿಸಿ, ಭಕ್ತರು ದೇವಸ್ಥಾನ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೆ ಅಂಗಡಿ ಗಳನ್ನು ತೆರವುಗೊಳಿಸಲಾದ ಸ್ಥಳದಿಂದ ಮಹಿಷಾಸುರನ ಪ್ರತಿಮೆವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ವಾಣಿಜ್ಯ ಸಮುಚ್ಛಯದ ಎದುರು ಕಾಂಪೌಂಡ್ ಗೋಡೆ ನಿರ್ಮಾಣವೂ ನಡೆಯುತ್ತಿದೆ. ಹೆಚ್ಚುವರಿ ಅಂದಾಜು ಸೇರಿದಂತೆ ಒಟ್ಟಾರೆ 90 ಕೋಟಿ ರೂ. ಅಂದಾಜಿನಲ್ಲಿ ಈ ಕಾಮ ಗಾರಿಗಳನ್ನು ಕೈಗೊಳ್ಳಲಾಗಿದೆ. ಇದಲ್ಲದೆ ಲೋಕೋಪಯೋಗಿ ಇಲಾಖೆಯ 9.30 ಕೋಟಿ ಅಂದಾಜು ವೆಚ್ಚದಲ್ಲಿ ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿಬೆಟ್ಟದವರೆಗೆ 8 ಕಿ.ಮೀ. ಉದ್ದದ ಡಾಂಬರೀಕರಣ ಕಾಮ ಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 2 ಕೋಟಿ ರೂ. ವೆಚ್ಚದಲ್ಲಿ 2.4 ಕಿ.ಮೀ ಉದ್ದದ ಹಳೆ ನಂದಿ ರಸ್ತೆಯ ಡಾಂಬರೀಕರಣ, ಚರಂಡಿ, ತಡೆಗೋಡೆ ಕಾಮಗಾರಿಯನ್ನು ಕೈಗೊಳ್ಳ ಲಾಗುತ್ತದೆ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಇದಿಷ್ಟೇ ಅಲ್ಲದೆ ಚಾಮುಂಡಿಬೆಟ್ಟ ದಿಂದ ಹೊಸಹುಂಡಿ ಗೇಟ್‍ವರೆಗೆ 4.8 ಕಿ.ಮೀ. ಉದ್ದದ ಉತ್ತನಹಳ್ಳಿ ರಸ್ತೆಯನ್ನು 3 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳ ಲಾಗುತ್ತಿದೆ. ಒಟ್ಟಾರೆ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಪೂರ್ಣಗೊಂ ಡಿದ್ದು, ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಪೂರ್ಣಗೊಳಿಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯದ ಎದುರು ಕಲ್ಲು ಹಾಸು ನಿರ್ಮಿಸುವ ಕೆಲಸವೂ ತ್ವರಿತವಾಗಿ ನಡೆದಿದೆ. ಚಾಮುಂಡೇಶ್ವರಿ ದೇವಸ್ಥಾನದ ಗೋಪು ರಕ್ಕೆ ಬಣ್ಣ ಬಳಿಯುವ ಕಾಮಗಾರಿಯೂ ನಡೆದಿದೆ. ಒಟ್ಟಾರೆ ಎಲ್ಲಾ ಕಾಮಗಾರಿಗಳು ಶುಕ್ರವಾರದೊಳಗೆ ಪೂರ್ಣಗೊಳಿಸಲಾಗು ವುದು ಎಂದಿದ್ದಾರೆ.

Translate »