ಹುತ್ತಕ್ಕೆ ಕೋಳಿ ರಕ್ತ, ಮೊಟ್ಟೆ ನೈವೇದ್ಯ, ಎಲ್ಲೆಡೆ ನಾಗರಾಧನೆ, ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ಚಾಮರಾಜನಗರ: ಜಿಲ್ಲಾದ್ಯಂತ ಗುರುವಾರ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ಧೆ, ಭಕ್ತಿಯಿಂದ ಆಚ ರಿಸಲಾಯಿತು. ಷಷ್ಠಿ ಹಬ್ಬ (ತನಿಹಬ್ಬ)ದಂದು ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡುವುದು ಸಾಮಾನ್ಯ. ಆದರೆ, ಜಿಲ್ಲೆಯ ವಿವಿಧೆಡೆ ಹುತ್ತಕ್ಕೆ ಕೋಳಿ ಬಲಿಕೊಟ್ಟು, ಕೋಳಿ ರಕ್ತ ಹಾಗೂ ಕೋಳಿ ಮೊಟ್ಟೆ ಹಾಕಿ ನಾಗ ರಾಧನೆ ಮಾಡಿದ್ದು ವಿಶೇಷವಾಗಿತ್ತು. ಚಾಮರಾಜನಗರ ತಾಲೂಕಿನ ಮಲ್ಲ ಯ್ಯನಪುರ, ಉತ್ತುವಳ್ಳಿ, ಚಂದಕವಾಡಿ, ದಡದಹಳ್ಳಿ, ಅಯ್ಯನಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ…
ಹಸುಗಳ ಕಳವು ಮಾಡುತ್ತಿದ್ದ ಆರೋಪಿ ಬಂಧನ 4 ಲಕ್ಷ ಮೌಲ್ಯದ 11 ಹಸು, 3 ಕರು ವಶ
December 14, 2018ಚಾಮರಾಜನಗರ: ಹಸುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ರಾಮಸಮುದ್ರ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿ ಯಿಂದ 4 ಲಕ್ಷ ಮೌಲ್ಯದ 11 ಹಸು ಹಾಗೂ 3 ಕರುಗಳನ್ನು ವಶ ಪಡಿಸಿಕೊಂಡಿದ್ದಾರೆ. ನಗರದ ಶಫಿಉಲ್ಲಾ ಶರೀಫ್ ಬಂಧಿತ ಆರೋಪಿ. ಚಾಮರಾಜನಗರ, ಸೋಮವಾರಪೇಟೆ, ಮಲ್ಲಯ್ಯನಪುರ, ಮೂಡ್ಲುಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಸುಗಳ ಕಳ್ಳತನ ವಾಗುತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…
ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ದಾಸ್ತಾನು: ಆರೋಪಿ ಬಂಧನ
December 14, 2018ಹನೂರು: ಅನ್ನ ಭಾಗ್ಯ ಅಕ್ಕಿಯನ್ನು ಅಕ್ರ ಮವಾಗಿ ದಾಸ್ತಾನು ಮಾಡಿದ್ದ ಚಿಲ್ಲರೆ ಅಂಗ ಡಿಯ ಮೇಲೆ ಅಧಿ ಕಾರಿಗಳು ದಾಳಿ ನಡೆಸಿ, ಅಕ್ಕಿಯನ್ನು ವಶಪ ಡಿಸಿಕೊಂಡ ಘಟನೆ ಸಮೀಪದ ಲೊಕ್ಕನ ಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಗೋಪಿ ಎಂಬುವರ ಚಿಲ್ಲರೆ ಅಂಗಡಿಯಲ್ಲಿ ಅನ್ನಭಾಗ್ಯದ ಅಕ್ಕಿ ಶೇಖರಿಸಿರುವ ಬಗ್ಗೆ ಬಂದ ಖಚಿತ ಮಾಹಿತಿಯೊಂದಿಗೆ ಆಹಾರ ನಿರೀಕ್ಷಕ ನಾಗರಾಜು ದಾಳಿ ನಡೆಸಿ, 24 ಚೀಲ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಂಗಡಿ ಮಾಲೀಕ ಗೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ…
ಕಡವೆ ಬೇಟೆ, ಸಾಕ್ಷ್ಯ ನಾಶ, ಮರಗಳ ಅಕ್ರಮ ಹನನ ಆರೋಪ ಆರ್‍ಎಫ್‍ಓ ರಾಘವೇಂದ್ರ ಎಂ.ಅಗಸೆ ಅಮಾನತು
December 14, 2018ಚಾಮರಾಜನಗರ: ಕರ್ತವ್ರ್ಯ ಲೋಪ ಎಸಗಿದ ಆರೋಪದ ಮೇಲೆ ಬಿಳಿಗಿರಿ ರಂಗನಾಥಬೆಟ್ಟ ಹುಲಿ ಸಂರ ಕ್ಷಿತ ಅರಣ್ಯ ಪ್ರದೇಶದ ವಲಯ ಅರಣ್ಯಾ ಧಿಕಾರಿಯೊಬ್ಬರನ್ನು (ಆರ್‍ಎಫ್‍ಓ) ಅಮಾ ನತುಗೊಳಿಸಲಾಗಿದೆ. ಪುಣಜನೂರು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಂ.ಅಗಸೆ ಸೇವೆಯಿಂದ ಅಮಾನತುಗೊಂಡವರು. ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣ ಜನೂರು ವನ್ಯಜೀವಿ ವಲಯದಲ್ಲಿ ಕಡವೆ ಬೇಟೆಯಾಡಿದ ದುಷ್ಕರ್ಮಿಗಳ ವಿರುದ್ಧ ಪ್ರಕ ರಣ ದಾಖಲಿಸದೇ, ಕಡವೆ ಮಾಂಸವನ್ನು ಸುಟ್ಟು ಸಾಕ್ಷ್ಯ ನಾಶ ಮಾಡಿದ ಆರೋಪದ ಮೇರೆಗೆ ರಾಘವೇಂದ್ರ ಎಂ.ಅಗಸೆ ಅವ ರನ್ನು ಅಮಾನತುಗೊಳಿಸಿ ರಾಜ್ಯ…
ಕುಡಿದ ಮತ್ತಿನಲ್ಲಿ ಟವರ್ ಏರಿದ ಭೂಪ!
December 14, 2018ಉಮ್ಮತ್ತೂರು: ಕುಡಿದ ಮತ್ತಿನಲ್ಲಿ ಟವರ್ ಏರಿದ್ದ ವ್ಯಕ್ತಿಯೊಬ್ಬನನ್ನು ಕೆಳ ಗಿಳಿಸಲು ಗ್ರಾಮಸ್ಥರು, ಕುದೇರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾ ಹಸ ನಡೆಸಿದ ಘಟನೆ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಗುರು ವಾರ ಸಾಯಂಕಾಲ ನಡೆದಿದೆ. ಗ್ರಾಮದ ನಿವಾಸಿ ಶಿವರಾಮೇಗೌಡ (50) ಟವರ್ ಏರಿ ಕುಳಿತವನು. ಈತ ಕಂಠಪೂರ್ತಿ ಕುಡಿದು ಮುಖ್ಯ ರಸ್ತೆಯ ಬದಿಯಲ್ಲಿರುವ ರಿಲಾ ಯನ್ಸ್ ಕಂಪನಿಗೆ ಸೇರಿದ ಸುಮಾರು 100 ಅಡಿ ಎತ್ತರದ ಟವರ್ ಏರಿ ತುದಿಯಲ್ಲಿ ಕುಳಿತು ದಾರಿಹೋಕರನ್ನು ಕೂಗುತ್ತಿದ್ದ ಎನ್ನಲಾಗಿದೆ….
ಮಧುವನಹಳ್ಳಿ ಶಾಲಾ ದುರಸ್ತಿಗೆ ಸಿಎಂ ಕ್ರಮ
December 14, 2018ಬೆಳಗಾವಿ: ಕೊಳ್ಳೇಗಾಲ ತಾಲೂಕು, ಹನೂರು ಕ್ಷೇತ್ರದ, ಮಧುವನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವು ದುಸ್ಥಿತಿಯಲ್ಲಿದ್ದು, ಈ ಶಾಲೆಯ ಕೊಠಡಿಗಳ ದುರಸ್ತಿಗಾಗಿ 2018-19ನೇ ಸಾಲಿನಲ್ಲಿ 5ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಧಾನ ಪರಿಷತ್ತಿಗೆ ತಿಳಿಸಿದರು. ಸಂದೇಶ್ ನಾಗರಾಜ್ ಅವರು ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮುಖ್ಯಮಂತ್ರಿಯವರು, ಈ ಶಾಲೆಯಲ್ಲಿ ವಿಶೇಷ ಪ್ಯಾಕೇಜ್ ಮೂಲಕ ಒಂದು ಹೆಚ್ಚುವರಿ ಕೊಠಡಿಯನ್ನು ನಿರ್ಮಿಸಲು 10.50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಈಗಾಗಲೇ ಶೇಕಡಾ 50…
ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವಕ್ಕೆ ಚಾಲನೆ
December 13, 2018ಪ್ರತಿಭಾ ಕಾರಂಜಿ ಸದ್ಬಳಕೆಗೆ ಜಿಪಂ ಉಪಾಧ್ಯಕ್ಷರ ಸಲಹೆ ಚಾಮರಾಜನಗರ: ವಿದ್ಯಾರ್ಥಿಗ ಳಲ್ಲಿ ಹುದುಗಿರುವ ವಿಭಿನ್ನ ಪ್ರತಿಭೆ ಅನಾ ವರಣಕ್ಕೆ ಅವಕಾಶ ಮಾಡಿಕೊಡುವ ಪ್ರತಿಭಾ ಕಾರಂಜಿಯಂತಹ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ಉಪಾ ಧ್ಯಕ್ಷ ಜೆ.ಯೋಗೀಶ್ ಸಲಹೆ ನೀಡಿದರು. ನಗರದ ರಾಮಸಮುದ್ರದ ಸಿ.ಆರ್.ಬಾಲ ರಪಟ್ಟಣ ಶಾಲಾ ಆವರಣದಲ್ಲಿ ಬುಧ ವಾರ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವ ಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿ ಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿರುವ…
ಭತ್ತ ಖರೀದಿ ಕೇಂದ್ರದ ಸದ್ಬಳಕೆಗೆ ಜಿಲ್ಲಾಧಿಕಾರಿ ಮನವಿ
December 13, 2018ಚಾಮರಾಜನಗರ: ಕನಿಷ್ಠ ಬೆಂಬಲಬೆಲೆ ಯೋಜನೆಯಡಿ 2018-19ನೇ ಖಾರೀಫ್ ಮುಂಗಾರಿನಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿಸಲು ಡಿಸೆಂಬರ್ 15ರವರೆಗೆ ಜಿಲ್ಲೆಯಲ್ಲಿ ನೋಂದಣಿ ಮಾಡಲಾಗುತ್ತಿದ್ದು, ನೋಂದಣಿಯಾದ ರೈತರಿಂದ ಡಿಸೆಂಬರ್ 16ರಿಂದ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಜಿಲ್ಲೆಯ ರೈತರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ ಮಾಡಿದ್ದಾರೆ. ಎ ದರ್ಜೆ ಭತ್ತವನ್ನು ಪ್ರತಿ ಕ್ವಿಂಟಾಲ್‍ಗೆ 1770 ರೂ. ಮತ್ತು ಸಾಮಾನ್ಯ ಭತ್ತ ವನ್ನು 1750 ರೂ. ದರವನ್ನು ಸರ್ಕಾರ ನಿಗದಿ ಪಡಿಸಿದೆ. ಸಣ್ಣ ಮತ್ತು ಅತಿ…
ಅರಣ್ಯ ಸಿಬ್ಬಂದಿಗೆ ದರ್ಶನ್ 12 ಲಕ್ಷ ಧನ ಸಹಾಯ
December 13, 2018ಹನೂರು: ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಅರಣ್ಯ ರಕ್ಷಣೆಗೆ ಕರ್ತವ್ಯ ನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೂ ಕಾಳಜಿ ವಹಿಸಬೇಕಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು. ಸಮೀಪದ ಮಲೆ ಮಹದೇಶ್ವರ ವನ್ಯ ಜೀವಿಧಾಮಕ್ಕೆ ಬುಧವಾರ ಭೇಟಿ ನೀಡಿದ ಅವರು, ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂ ದಿಗೆ 12 ಲಕ್ಷ ಧನಸಹಾಯ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕುಟುಂಬದವರನ್ನು ಹಾಗೂ ಜೀವದ ಹಂಗು ತೊರೆದು ಅರಣ್ಯ ಮತ್ತು ವನ್ಯ ಜೀವಿ ಸಂರಕ್ಷಣೆಯಲ್ಲಿ ತೊಡಗಿರುವ ಇಲ್ಲಿನ ಸಿಬ್ಬಂದಿಯ ಸೇವೆ…
ಧರ್ಮಸ್ಥಳ ಸಂಘದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ
December 13, 2018ಬೇಗೂರು: ಸಮೀಪದ ಕಬ್ಬಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಕಬ್ಬಹಳ್ಳಿ ವಲಯದಿಂದ ಮಹಿಳಾ ಸಂಘಗಳ ಸದಸ್ಯರುಗಳಿಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಪದಾ ಧಿಕಾರಿಗಳ ಪದಗ್ರಹಣ ಸಮಾರಂಭ ಗ್ರಾಮದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಜಿಪಂ ಸದಸ್ಯ ಕೆ.ಎಸ್.ಮಹೇಶ್ ಮಾತ ನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯು ತಾಲೂಕಿನಲ್ಲಿ ಹಲವು ಮಹಿಳಾ ಮತ್ತು ಪುರುಷ ಸಂಘಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಬಡಜನರಿಗೆ ಮಾರ್ಗ ದರ್ಶಕವಾಗಿ ಕಾರ್ಯನಿರ್ವಹಿಸುತ್ತಿ ರುವುದು…