ಕುಡಿದ ಮತ್ತಿನಲ್ಲಿ ಟವರ್ ಏರಿದ ಭೂಪ!
ಚಾಮರಾಜನಗರ

ಕುಡಿದ ಮತ್ತಿನಲ್ಲಿ ಟವರ್ ಏರಿದ ಭೂಪ!

December 14, 2018

ಉಮ್ಮತ್ತೂರು:  ಕುಡಿದ ಮತ್ತಿನಲ್ಲಿ ಟವರ್ ಏರಿದ್ದ ವ್ಯಕ್ತಿಯೊಬ್ಬನನ್ನು ಕೆಳ ಗಿಳಿಸಲು ಗ್ರಾಮಸ್ಥರು, ಕುದೇರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾ ಹಸ ನಡೆಸಿದ ಘಟನೆ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಗುರು ವಾರ ಸಾಯಂಕಾಲ ನಡೆದಿದೆ.

ಗ್ರಾಮದ ನಿವಾಸಿ ಶಿವರಾಮೇಗೌಡ (50) ಟವರ್ ಏರಿ ಕುಳಿತವನು. ಈತ ಕಂಠಪೂರ್ತಿ ಕುಡಿದು ಮುಖ್ಯ ರಸ್ತೆಯ ಬದಿಯಲ್ಲಿರುವ ರಿಲಾ ಯನ್ಸ್ ಕಂಪನಿಗೆ ಸೇರಿದ ಸುಮಾರು 100 ಅಡಿ ಎತ್ತರದ ಟವರ್ ಏರಿ ತುದಿಯಲ್ಲಿ ಕುಳಿತು ದಾರಿಹೋಕರನ್ನು ಕೂಗುತ್ತಿದ್ದ ಎನ್ನಲಾಗಿದೆ.

ಮಧ್ಯಾಹ್ನ 3 ಗಂಟೆಯ ವೇಳೆಯಲ್ಲಿ ಟವರ್ ಏರಿದ್ದ ವ್ಯಕ್ತಿ, ಕೆಳಗೆ ಇಳಿಯದೇ ತನ್ನಲ್ಲಿದ್ದ ಟವಲ್ ಅನ್ನು ಬೀಸುತ್ತಿದ್ದ. ಗ್ರಾಮಸ್ಥರು ತಕ್ಷಣ ಕುದೇರು ಪೊಲೀಸ್ ಠಾಣೆಗೆ ವಿಷಯ ತಿಳಿಸಿ ದ್ದಾರೆ. ಅಗ್ನಿಶಾಮಕ ದಳದವರೊಂದಿಗೆ ಆಗಮಿಸಿದ ಪಿಎಸ್‍ಐ ಸಿದ್ದಯ್ಯ ಮತ್ತು ಸಿಬ್ಬಂದಿ ಮೈಕ್ ಮೂಲಕ ಆತನಿಗೆ ಕೆಳಗೆ ಇಳಿಯುವಂತೆ ಎಚ್ಚ ರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಬಳಿಕ, ಆಗ್ನಿಶಾಮಕ ದಳದವರು ನೀರು ಬಿಡಲು ಮುಂದಾ ದರು. ಆತನ ಪತ್ನಿ ಹಾಗೂ ಗ್ರಾಮಸ್ಥರು ಮೈಕ್ ಹಿಡಿದು ಪರಿಪರಿಯಾಗಿ ಬೇಡಿಕೊಂಡ ಹಿನ್ನೆಲೆಯಲ್ಲಿ ಸಾಯಂಕಾಲ 6.30ರ ವೇಳೆಗೆ ಟವರ್‍ನಿಂದ ಕೆಳಗೆ ಇಳಿದಿದ್ದಾನೆ. ಸದ್ಯ ಶಿವರಾಮೇಗೌಡನನ್ನು ಕುದೇರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Translate »