ಮಧುವನಹಳ್ಳಿ ಶಾಲಾ ದುರಸ್ತಿಗೆ ಸಿಎಂ ಕ್ರಮ
ಚಾಮರಾಜನಗರ

ಮಧುವನಹಳ್ಳಿ ಶಾಲಾ ದುರಸ್ತಿಗೆ ಸಿಎಂ ಕ್ರಮ

December 14, 2018

ಬೆಳಗಾವಿ:  ಕೊಳ್ಳೇಗಾಲ ತಾಲೂಕು, ಹನೂರು ಕ್ಷೇತ್ರದ, ಮಧುವನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವು ದುಸ್ಥಿತಿಯಲ್ಲಿದ್ದು, ಈ ಶಾಲೆಯ ಕೊಠಡಿಗಳ ದುರಸ್ತಿಗಾಗಿ 2018-19ನೇ ಸಾಲಿನಲ್ಲಿ 5ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಧಾನ ಪರಿಷತ್ತಿಗೆ ತಿಳಿಸಿದರು. ಸಂದೇಶ್ ನಾಗರಾಜ್ ಅವರು ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮುಖ್ಯಮಂತ್ರಿಯವರು, ಈ ಶಾಲೆಯಲ್ಲಿ ವಿಶೇಷ ಪ್ಯಾಕೇಜ್ ಮೂಲಕ ಒಂದು ಹೆಚ್ಚುವರಿ ಕೊಠಡಿಯನ್ನು ನಿರ್ಮಿಸಲು 10.50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಈಗಾಗಲೇ ಶೇಕಡಾ 50 ರಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

Translate »