ಕಡವೆ ಬೇಟೆ, ಸಾಕ್ಷ್ಯ ನಾಶ, ಮರಗಳ ಅಕ್ರಮ ಹನನ ಆರೋಪ ಆರ್‍ಎಫ್‍ಓ ರಾಘವೇಂದ್ರ ಎಂ.ಅಗಸೆ ಅಮಾನತು
ಚಾಮರಾಜನಗರ

ಕಡವೆ ಬೇಟೆ, ಸಾಕ್ಷ್ಯ ನಾಶ, ಮರಗಳ ಅಕ್ರಮ ಹನನ ಆರೋಪ ಆರ್‍ಎಫ್‍ಓ ರಾಘವೇಂದ್ರ ಎಂ.ಅಗಸೆ ಅಮಾನತು

December 14, 2018

ಚಾಮರಾಜನಗರ: ಕರ್ತವ್ರ್ಯ ಲೋಪ ಎಸಗಿದ ಆರೋಪದ ಮೇಲೆ ಬಿಳಿಗಿರಿ ರಂಗನಾಥಬೆಟ್ಟ ಹುಲಿ ಸಂರ ಕ್ಷಿತ ಅರಣ್ಯ ಪ್ರದೇಶದ ವಲಯ ಅರಣ್ಯಾ ಧಿಕಾರಿಯೊಬ್ಬರನ್ನು (ಆರ್‍ಎಫ್‍ಓ) ಅಮಾ ನತುಗೊಳಿಸಲಾಗಿದೆ. ಪುಣಜನೂರು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಂ.ಅಗಸೆ ಸೇವೆಯಿಂದ ಅಮಾನತುಗೊಂಡವರು.

ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣ ಜನೂರು ವನ್ಯಜೀವಿ ವಲಯದಲ್ಲಿ ಕಡವೆ ಬೇಟೆಯಾಡಿದ ದುಷ್ಕರ್ಮಿಗಳ ವಿರುದ್ಧ ಪ್ರಕ ರಣ ದಾಖಲಿಸದೇ, ಕಡವೆ ಮಾಂಸವನ್ನು ಸುಟ್ಟು ಸಾಕ್ಷ್ಯ ನಾಶ ಮಾಡಿದ ಆರೋಪದ ಮೇರೆಗೆ ರಾಘವೇಂದ್ರ ಎಂ.ಅಗಸೆ ಅವ ರನ್ನು ಅಮಾನತುಗೊಳಿಸಿ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್ ಆದೇಶ ಹೊರಡಿಸಿದ್ದಾರೆ. ಪುಣಜನೂರು ವನ್ಯಜೀವಿ ವಲಯದ ಹುಚ್ಚನಕೆಂಬಾರೆಗಸ್ತು ವ್ಯಾಪ್ತಿ ಯಲ್ಲಿ ನ.1ರಂದು ಕಡವೆಯೊಂದನ್ನು ದುಷ್ಕ ರ್ಮಿಗಳು ಬೇಟೆಯಾಡಿದ್ದರು. ಈ ವಿಷಯ ರಾಘವೇಂದ್ರ ಎಂ.ಅಗಸೆಗೆ ತಿಳಿದಿತ್ತು. ಇದನ್ನು ಅವರು ಮೇಲಧಿಕಾರಿಗಳ ಗಮನಕ್ಕೆ ತಂದಿರ ಲಿಲ್ಲ. ಕಡವೆ ಬೇಟೆಯಾಡಿದ ದುಷ್ಕರ್ಮಿ ಗಳ ವಿರುದ್ಧ ಪ್ರಕರಣ ದಾಖಲಿಸಿರಲಿಲ್ಲ. ಇದಲ್ಲದೆ ಕಡವೆ ಮಾಂಸವನ್ನು ಸುಟ್ಟು ಸಾಕ್ಷ್ಯ ವನ್ನು ನಾಶ ಮಾಡಲಾಗಿದೆ. ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರ ಕ್ಷಣಾಧಿಕಾರಿ, ಹುಲಿ ಯೋಜನೆ ನಿರ್ದೇಶಕ ಪಿ.ಶಂಕರ್ ಅವರು ಇಲಾಖೆಯ ಮೇಲ ಧಿಕಾರಿಗಳಿಗೆ ಪತ್ರ ಬರೆದಿದ್ದರು.

ಇದಲ್ಲದೆ ಬೇಡಗುಳಿ ಅರಣ್ಯದಲ್ಲಿ ಅಕ್ರಮ ವಾಗಿ 167 ಸಿಲ್ವರ್ ಓಕ್ ಮರಗಳ ಪ್ರಕರಣ ದಲ್ಲೂ ಆರೋಪಿ ರಜಾಕ್ ಎಂಬಾತನ ಜೊತೆಯಲ್ಲಿ ಆರ್‍ಎಫ್‍ಓ ರಾಘವೇಂದ್ರ ಶಾಮೀಲಾಗಿರುವ ಬಗ್ಗೆಯೂ ವರದಿ ಯಲ್ಲಿ ತಿಳಿಸಲಾಗಿತ್ತು. ಈ ವರದಿ ಅನ್ವಯ 1975ರ ಕರ್ನಾಟಕ ನಾಗರಿಕ ಸೇವಾ ನಿಯಮದ ಪ್ರಕಾರ ಆರ್‍ಎಫ್‍ಓ ರಾಘ ವೇಂದ್ರ ಎಂ.ಅಗಸೆ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇವರನ್ನು ಸೇವೆಯಿಂದ ಅಮಾನತುಗೊಳಿಸಿ ಎಂದು ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್ ಆದೇಶಿಸಿದ್ದಾರೆ.

Translate »