ಅರಣ್ಯ ಸಿಬ್ಬಂದಿಗೆ ದರ್ಶನ್ 12 ಲಕ್ಷ ಧನ ಸಹಾಯ
ಚಾಮರಾಜನಗರ

ಅರಣ್ಯ ಸಿಬ್ಬಂದಿಗೆ ದರ್ಶನ್ 12 ಲಕ್ಷ ಧನ ಸಹಾಯ

December 13, 2018

ಹನೂರು:  ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಅರಣ್ಯ ರಕ್ಷಣೆಗೆ ಕರ್ತವ್ಯ ನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೂ ಕಾಳಜಿ ವಹಿಸಬೇಕಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.

ಸಮೀಪದ ಮಲೆ ಮಹದೇಶ್ವರ ವನ್ಯ ಜೀವಿಧಾಮಕ್ಕೆ ಬುಧವಾರ ಭೇಟಿ ನೀಡಿದ ಅವರು, ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂ ದಿಗೆ 12 ಲಕ್ಷ ಧನಸಹಾಯ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಟುಂಬದವರನ್ನು ಹಾಗೂ ಜೀವದ ಹಂಗು ತೊರೆದು ಅರಣ್ಯ ಮತ್ತು ವನ್ಯ ಜೀವಿ ಸಂರಕ್ಷಣೆಯಲ್ಲಿ ತೊಡಗಿರುವ ಇಲ್ಲಿನ ಸಿಬ್ಬಂದಿಯ ಸೇವೆ ಶ್ಲಾಘನೀಯ. ಗುತ್ತಿಗೆ ಆಧಾರದಲ್ಲಿ ನೌಕರರಲ್ಲಿರುವ ಅಭದ್ರತೆಯನ್ನು ಹೋಗಲಾಡಿಸಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡ ಬೇಕಿದೆ ಎಂದರು.

ತುರ್ತು ಸಂದರ್ಭ ಹಾಗೂ ವಿಪತ್ತಿನ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೆರ ವಾಗುವ ದೃಷ್ಟಿಯಿಂದ ಈ ಸಹಾಯ ಮಾಡುತ್ತಿದ್ದೇನೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಆಸಕ್ತಿಯಿರುವ ಮತ್ತಷ್ಟು ಸೇವೆ ಮನೋಭಾವನೆಯಿರುವ ದಾನಿಗಳನ್ನು ಸಂಪರ್ಕಿಸಿ ಅವರಿಂದಲೂ ಸಹಾಯ ಮಾಡಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

Translate »