ಧರ್ಮಸ್ಥಳ ಸಂಘದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ
ಚಾಮರಾಜನಗರ

ಧರ್ಮಸ್ಥಳ ಸಂಘದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

December 13, 2018

ಬೇಗೂರು:  ಸಮೀಪದ ಕಬ್ಬಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಕಬ್ಬಹಳ್ಳಿ ವಲಯದಿಂದ ಮಹಿಳಾ ಸಂಘಗಳ ಸದಸ್ಯರುಗಳಿಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಪದಾ ಧಿಕಾರಿಗಳ ಪದಗ್ರಹಣ ಸಮಾರಂಭ ಗ್ರಾಮದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಜಿಪಂ ಸದಸ್ಯ ಕೆ.ಎಸ್.ಮಹೇಶ್ ಮಾತ ನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯು ತಾಲೂಕಿನಲ್ಲಿ ಹಲವು ಮಹಿಳಾ ಮತ್ತು ಪುರುಷ ಸಂಘಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಬಡಜನರಿಗೆ ಮಾರ್ಗ ದರ್ಶಕವಾಗಿ ಕಾರ್ಯನಿರ್ವಹಿಸುತ್ತಿ ರುವುದು ಸಂತಸದ ವಿಷಯವಾಗಿದೆ. ಧರ್ಮಸ್ಥಳ ಯೋಜನೆಯಿಂದ ಒಳ್ಳೆಯ ಕೆಲಸ ಆಗುತ್ತದೆ. ಜನರು ಒಳ್ಳೆಯ ರೀತಿಯಲ್ಲಿ ಸಾಲವನ್ನು ಉಪಯೋಗಿಸಿ ಮರು ಪಾವತಿಸಬೇಕು ಎಂದರು.

ಕಬ್ಬಹಳ್ಳಿ ಪಟ್ಟದ ಮಠಾಧ್ಯಕ್ಷ ಶ್ರೀ ಚನ್ನಬಸವಸ್ವಾಮಿ ಮಾತನಾಡಿ, ದುಂದು ವೆಚ್ಚ ಮಾಡದೇ, ಇತೀ ಮಿತಿಯಲ್ಲಿ ಖರ್ಚು ಮಾಡಬೇಕು. ಸಾಲಗಾರರಾಗದೇ ಪಡೆದುಕೊಂಡಿರುವ ಸಾಲವನ್ನು ಪ್ರಾಮಾಣಿಕತೆಯಿಂದ ಮರು ಪಾವತಿಸ ಬೇಕು ಎಂದು ತಿಳಿಸಿದರು.

ಜಿಲ್ಲಾ ನಿರ್ದೇಶಕ ಸತೀಶ್‍ಶೆಟ್ಟಿ ಮಾತ ನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿಯೋಜನೆ ಮುಖಾಂತರ ಮಹಿ ಳೆಯರಿಗೆ ಸ್ವಾವಲಂಬನೆಯ ಬದುಕು ಕಟ್ಟಿ ಕೊಳ್ಳಲು ಸಹಕಾರಿಯಾಗಿದೆ. ಮಹಿಳೆ ಅಬಲೆಯಲ್ಲಿ ಸಬಲೆ ಎಂದು ನಿರೂಪಿಸಬೇಕು. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದುವರಿದಿದ್ದು, ಯೋಜನೆಯ ಮುಖಾಂತರ ಬ್ಯಾಂಕ್ ಗಳಿಂದ ಪಡೆದುಕೊಂಡ ಸಾಲವನ್ನು ಸದುದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು. ಪ್ರಾಮಾಣಿಕತೆ ವ್ಯಕ್ತಪಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯರಾದ ಕೆ.ಎಸ್.ರೇವಣ್ಣ, ಮಧು ಶಂಕರ್, ತಾಲೂಕು ಯೋಜನಾಧಿಕಾರಿ ಶಿವಪ್ರಸಾದ್, ಸತ್ಯನಾರಾಯಣ ಸಮಿತಿಯ ಅಧ್ಯಕ್ಷ ಶಂಭುಮೂರ್ತಿ, ಮುಖಂಡ ರಾದ ಮಹದೇವಸ್ವಾಮಿ, ಸೀತಾರಾಮ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಂಗಾರನಾಯ್ಕ, ಒಕ್ಕೂಟದ ಪದಾಧಿಕಾರಿಗಳು, ಇತರರು, ಮೇಲ್ವಿಚಾರ ಕರು, ಸೇವಾಪ್ರತಿನಿಧಿಗಳು ಹಾಜರಿದ್ದರು.

Translate »