ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮುಖ್ಯ: ನ್ಯಾ.ವಿಶಾಲಾಕ್ಷಿ
ಚಾಮರಾಜನಗರ

ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮುಖ್ಯ: ನ್ಯಾ.ವಿಶಾಲಾಕ್ಷಿ

December 13, 2018

ಚಾಮರಾಜನಗರ:  ವಿದ್ಯಾರ್ಥಿ ಗಳಿಗೆ ಕಾನೂನಿನ ಅರಿವು ಮುಖ್ಯವಾಗಿದೆ. ಕಾನೂನು ಜ್ಞಾನದಿಂದ ಹೆಚ್ಚಿನ ಅನು ಕೂಲವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜೆ.ವಿಶಾಲಾಕ್ಷಿ ತಿಳಿಸಿದರು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಹಾಗೂ ಸರ್ಕಾರಿ ಬಾಲ ಕರ ಪದವಿ ಪೂರ್ವ ಕಾಲೇಜು, ಸಾಧನ ಸಂಸ್ಥೆ ಚಾಮರಾಜನಗರ ಇವರ ಸಹ ಯೋಗದಲ್ಲಿ ವಿದ್ಯಾರ್ಥಿಗಳಿಗೆ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ 18 ವರ್ಷ ತುಂಬು ವವರೆಗೆ ಯಾವುದೇ ವಾಹನಗಳನ್ನು ಚಾಲನೆ ಮಾಡುವಂತಿಲ್ಲ. ಅದು ಕಾನೂನಿನಲ್ಲಿ ಅಪ ರಾಧವಾಗುತ್ತದೆ. ಇತ್ತೀಚಿನ ದಿನಗಳಗಳಲ್ಲಿ ಚಿಕ್ಕ ಮಕ್ಕಳು ವಾಹನವನ್ನು ಚಾಲಿಸುತ್ತಿ ರುವುದು ಕಂಡು ಬಂದಿದೆ. ವ್ಯಕ್ತಿಯ ಪರ ವಾನಗಿ ಇಲ್ಲದೆ ವಾಹನ ಚಾಲಿಸುವುದು ಅದರಿಂದಾಗುವ ತೊಂದರೆಗೆ ಮನೆಯ ಹಿರಿಯರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ಧತಿ ಹೆಚ್ಚಾ ಗಿದೆ. ಇದನ್ನು ತಡೆಯಲು ವಿದ್ಯಾರ್ಥಿಗಳು ತಿಳಿದಿರಬೇಕು. ವಿದ್ಯಾರ್ಥಿಗಳಿಗೆ ತೊಂದರೆ ನೀಡು ವುದು ಹಾಗೂ ಮಕ್ಕಳನ್ನು ಮನೆಕೆಲಸ ಗಳಿಗೆ ಬಳಸಿಕೊಳ್ಳುವವರ ಮೇಲೆ ಕಾನೂನಿ ನಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ವಿದ್ಯಾ ರ್ಥಿಗಳಿಗೆ ಶಾಲೆಗಳಲ್ಲಿ ತೊಂದರೆ ನೀಡಿ ದರೆ ಅವರು ಪೋಲಿಸ್ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಬಹುದು ಎಂದು ತಿಳಿಸಿದರು.

ಚಾಮರಾಜನಗರ ಪಟ್ಟಣ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ ಎನ್.ಸಿ.ನಾಗೇ ಗೌಡ ಮಾತನಾಡಿ, ವಿದ್ಯಾರ್ಥಿ ದೆಸೆಯ ಲ್ಲಿಯೇ ಕಾನೂನು ತಿಳಿಯುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ವಿದ್ಯಾರ್ಥಿ ಗಳಿಗೆ ಬಾಲ್ಯ ವಿವಾಹದ ಕಾನೂನಿನ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಉಪ ಪ್ರಾಂಶುಪಾಲ ರಾಚಯ್ಯ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅರುಣ್‍ಕುಮಾರ್, ಬಾಲ ನ್ಯಾಯ ಮಂಡಳಿ ಸದಸ್ಯರಾದ ಟಿ.ಜೆ.ಸುರೇಶ್, ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಇನ್ನು ಮುಂತಾದರು ಹಾಜರಿದ್ದರು.

Translate »