ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭಾ ಸದಸ್ಯ ಸ್ಥಾನಗಳಿಗೆ ಇದೇ ತಿಂಗಳ 31ರಂದು ಮತದಾನ ನಡೆ ಯಲಿದೆ. ಸಲ್ಲಿಕೆ ಆಗಿರುವ ಉಮೇದು ವಾರಿಕೆಯನ್ನು ಹಿಂಪಡೆಯಲು ನಾಳೆ (ಆ.23) ಕೊನೆಯ ದಿನವಾಗಿದೆ. ಚುನಾ ವಣೆಗೆ ಇನ್ನೂ ಕೇವಲ 8 ದಿನಗಳಷ್ಟೇ ಬಾಕಿ ಉಳಿದಿದ್ದು, ಪ್ರಚಾರ ಬಿರುಸಾಗಿದೆ. ಚಾಮರಾಜನಗರ ನಗರಸಭೆಯ ಎಲ್ಲಾ 31 ವಾರ್ಡ್‍ಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಿದೆ. ಬಿಜೆಪಿ 30 ವಾರ್ಡ್ ಗಳಿಗೆ ಅಭ್ಯರ್ಥಿಯನ್ನು ಹಾಕಿದೆ. ಸ್ಥಳೀಯ ಸಂಸ್ಥೆಯ ಈ ಚುನಾವಣೆಯನ್ನು ಗಂಭೀರ…
ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ರೈತರ ಪ್ರತಿಭಟನೆ
August 22, 2018ಚಾಮರಾಜನಗರ: ಮನೆಯ ವಿದ್ಯುತ್ ಬಿಲ್ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಖಂಡಿಸಿ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಅಮ್ಮನಪುರ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಗ್ರಾಮದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಗ್ರಾಮದ ಬಸ್ ನಿಲ್ದಾಣದ ಬಳಿ ಬೆಳಿಗ್ಗೆಯೇ ಜಮಾಯಿಸಿದ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಸೆಸ್ಕ್ ವಿರುದ್ಧ ಘೊಷಣೆಗಳನ್ನು ಕೂಗುತ್ತ ಪ್ರತಿಭಟನೆ ಆರಂಭಿಸಿದರು. ರಸ್ತೆ ಮಧ್ಯೆದಲ್ಲಿಯೇ ಮಧ್ಯಾಹ್ನ ಅಡುಗೆ ತಯಾರಿಸಿ ಸೇವಿಸಿದರು. ನಂತರ ಸಂಜೆ ತನಕ ಪ್ರತಿಭಟನೆ ನಡೆಸಿದರು….
ಮಳೆ ಸಂತ್ರಸ್ತ ಕೊಡಗು ಜನರ ನೆರವಿಗೆ ಲಕ್ಷ ರೂ. ನೀಡಿದ ಪುಟ್ಟಮಾದಪ್ಪ
August 22, 2018ಚಾಮರಾಜನಗರ: ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜನರ ನೆರವಿಗೆ ಜಿಲ್ಲೆಯ ಜನರ ಹೃದಯ ಮಿಡಿದಿದ್ದು, ಚಾಮರಾಜ ನಗರದ ಪಟೇಲ್ ಬಜಾಜ್ ಷೋ ರೂಂ ಮಾಲೀಕ ಎಚ್.ಎಂ.ಪುಟ್ಟಮಾದಪ್ಪ ಹಾಗೂ ಅವರ ಮಗ ಹರ್ಷ ಪಟೇಲ್ ಗ್ರಾನೈಟ್ ಮಾಲೀಕ ಪಿ.ವೃಷಬೇಂದ್ರಪ್ಪ ಅವರು ನಗರದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮುಖಾಂತರ ಕೊಡಗು ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಇಂದು ಒಂದು ಲಕ್ಷ ರೂ. ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಇಂದು ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರನ್ನು ಭೇಟಿ…
ಕೇರಳ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೆರವು
August 22, 2018ಚಾಮರಾಜನಗರ: ಕೇರಳ ರಾಜ್ಯದಲ್ಲಿ ವರುಣನ ಅಬ್ಬರಕ್ಕೆ ಅನೇಕ ಜಿಲ್ಲೆಗಳು ಜಲಾವೃತವಾಗಿ ಲಕ್ಷಾಂತರ ಜನ ತೊಂದರೆಗೀಡಾಗಿ ಸಾವುನೋವುಗಳಿಂದ ತತ್ತರಿಸಿ ಹೋಗಿದೆ. ಇದರಿಂದ ಇದಕ್ಕೆ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಸಚಿವ ಸಿ.ಪುಟ್ಟರಂಗಶೆಟ್ಟಿ ಕೇರಳದ ರಾಜ್ಯದ ವೈನಾಡು ಜಿಲ್ಲೆಯ ಸಂತ್ರಸ್ತರಿಗೆ ಅಕ್ಕಿ, ಸಕ್ಕರೆ, ಹೆಸಿರುಕಾಳು, ಸೇರಿದಂತೆ ಇತರ ಸಾಮಾಗ್ರಿಗಳನ್ನು 2 ಲಾರಿಗಳಲ್ಲಿ ಕೇರಳದ ಗಂಜಿ ಕೇಂದ್ರಗಳಿಗೆ ತಲುಪಿಸಲಾಯಿತು. ಈ ಸಂದರ್ಭದಲ್ಲಿ ವೈನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿಯ ಶಾಸಕ ಐ.ಸಿ.ಬಾಲ ಕೃಷ್ಣನ್ ಅವರ ಮೂಲಕ ಚಾಮರಾಜ ನಗರದ ಕಾಂಗ್ರೆಸ್ ಮುಖಂಡ ಹಾಗೂ…
ಗೂಳೀಪುರ ಪಿಎಸಿಸಿ ಅಧ್ಯಕ್ಷರ ಅವಿರೋಧ ಆಯ್ಕೆ
August 22, 2018ಚಾಮರಾಜನಗರ: ತಾಲೂಕಿನ ಗೂಳೀಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೊಮ್ಮ ಗ್ರಾಮದ ಜಿ.ಎಂ.ರವಿಶಂಕರಮೂರ್ತಿ ಅವಿರೋಧವಾಗಿ ಆಯ್ಕೆಗೊಂಡರು. ಕೃಷಿ ಪತಿನ ಸಹಕಾರ ಸಂಘದ ಕಛೇರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೋಟಂಬಳ್ಳಿ ಗ್ರಾಮದ ಎಂ.ರಾಜು, ನಿರ್ದೇಶಕರುಗಳಾಗಿ ಜಿ.ಎನ್. ಬಸವಣ್ಣ, ಹೆಚ್.ನಾರಾಯಣಸ್ವಾಮಿ, ರಂಗಶೆಟ್ಟಿ, ಎಂ.ನಾಗೇಂದ್ರ ಸ್ವಾಮಿ, ಮಹದೇವಯ್ಯ, ಪಿ.ಡೈರಿಶಿವಣ್ಣ, ಗುರುಸ್ವಾಮಿ, ಹೆಚ್.ಡಿ. ಚಂದ್ರೇಗೌಡ, ಮಹಿಳಾ ವಿಭಾಗದಿಂದ ಭಾಗ್ಯಮ್ಮ ಮತ್ತು ಗುರು ಮಲ್ಲಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು…
ಚಾಮರಾಜನಗರ-ಕೊಳ್ಳೇಗಾಲ ನಗರಸಭೆ ಚುನಾವಣೆ: 62 ಸದಸ್ಯ ಸ್ಥಾನಗಳಿಗೆ 280 ಮಂದಿ ನಾಮಪತ್ರ ಸಲ್ಲಿಕೆ
August 19, 2018ಚಾ.ನಗರ-163 ಮಂದಿ, ಕೊಳ್ಳೇಗಾಲ 117 ಮಂದು ಉಮೇದುವಾರಿಕೆ ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆಯ ಒಟ್ಟು 62 ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ ಒಟ್ಟು 280 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಚಾಮರಾಜನಗರ ನಗರಸಭೆಯ 31 ಸ್ಥಾನಗಳಿಗೆ 163 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕೊಳ್ಳೇಗಾಲ ನಗರಸಭೆಯ 31 ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ 117 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನವಾಗಿತ್ತು. ಹೀಗಾಗಿ ಬಹುತೇಕ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು. ಇದುವರೆವಿಗೆ ಬೆರಳೆಣಿಕೆಯಷ್ಟು ಮಂದಿ…
ಚಾಮರಾಜನಗರ ನಗರಸಭೆ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು
August 18, 2018ಚಾಮರಾಜನಗರ: ಚಾಮರಾಜನಗರ ನಗರಸಭಾ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಪ್ರಬಲ ಪೈಪೋಟಿ ಏರ್ಪಟಿದ್ದು, ಜೆಡಿಎಸ್‍ನಿಂದ ಸ್ಪರ್ಧಿಸಲು ಒಲವು ತೋರದೆ ಇರುವುದು ಕಂಡು ಬಂದಿದೆ. ಹಾಗೆಯೇ ಬಿಎಸ್‍ಪಿ ಮತ್ತು ಎಸ್‍ಡಿಪಿಐ ಕೆಲವು ವಾರ್ಡ್‍ಗಳಿಗೆ ಮಾತ್ರ ಸೀಮಿತ ವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ 31 ವಾರ್ಡ್‍ನಿಂದ ಕಣಕ್ಕೆ ಇಳಿಸಿರುವ ಅಭ್ಯರ್ಥಿಗಳ ಪಟ್ಟಿ ‘ಮೈಸೂರು ಮಿತ್ರ’ನಿಗೆ ದೊರಕಿದೆ. ವಾರ್ಡ್ 1-ನೀಲಮ್ಮ (ಕಾಂಗ್ರೆಸ್), ಪುಟ್ಟಲಿಂಗಮ್ಮ (ಬಿಜೆಪಿ), ವಾರ್ಡ್ 2- ನೂರ್ ಆಯುಷಾ (ಕಾಂಗ್ರೆಸ್), ಗೌರಿ (ಬಿಜೆಪಿ), ವಾರ್ಡ್…
ನಗರಸಭೆ ಚುನಾವಣೆ: ತಿದ್ದುಪಡಿ ಅಧಿಸೂಚನೆ- ಪರಿಷ್ಕøತ ವೇಳಾಪಟ್ಟಿ ಪ್ರಕಟ
August 18, 2018ಚಾಮರಾಜನಗರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಆಗಸ್ಟ್ 17 ರಂದು ಸಾರ್ವತ್ರಿಕ ರಜೆ ಘೋಷಿಸಿದ ಹಿನ್ನಲೆಯಲ್ಲಿ ಜಿಲ್ಲೆಯ ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭೆ ಚುನಾ ವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಿ ಪರಿಷ್ಕøತ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಪರಿಷ್ಕ್ರತ ಚುನಾವಣಾ ವೇಳಾ ಪಟ್ಟಿ ಪ್ರಕಾರ ನಾಮಪತ್ರ ಸಲ್ಲಿಸಲು ಆಗಸ್ಟ್ 18 ಕಡೆಯ ದಿನವಾಗಿದೆ. ಆಗಸ್ಟ್ 20ರಂದು ನಾಮ ಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು…
ಕಾರು-ಸ್ಕೂಟಿ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ
August 18, 2018ಚಾಮರಾಜನಗರ: ಕಾರು ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಕೂಟಿಯಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿ ರುವ ಘಟನೆ ತಾಲೂಕಿನ ಹರದನಹಳ್ಳಿ ಗ್ರಾಮದ ಕ್ರಾಸ್‍ನಲ್ಲಿ ಶುಕ್ರವಾರ ನಡೆದಿದೆ. ಈರೋಡ್ ಜಿಲ್ಲೆಯ ವಿಜಯಮಂಗಳಂನ ಕಾರ್ತಿಕ್ ಹಾಗೂ ಶಂಕರ್ ಗಾಯ ಗೊಂಡವರಾಗಿದ್ದು, ಈಗ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ತಿಕ್ ಮತ್ತು ಶಂಕರ್ ಸ್ಕೂಟಿಯಲ್ಲಿ ಸತ್ತಿಯಿಂದ ಚಾಮರಾಜನಗರಕ್ಕೆ ಬರು ತ್ತಿದ್ದರು. ಈ ವೇಳೆ ಹರದನಹಳ್ಳಿ ಗ್ರಾಮದ ಬಳಿ ಇರುವ ಕ್ರಾಸ್‍ನಲ್ಲಿ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿನಿಂದ…
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆಯಲು ಲಾಬಿ
August 15, 2018ಚಾಮರಾಜನಗರ: ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿ ಆಗಿ ಅಧಿಸೂಚನೆ ಹೊರಬಿದ್ದಿದೆ. ಅಧಿಸೂಚನೆ ಹೊರಬಿದ್ದು 5 ದಿನ ಆದರೂ ಸಹ ಚಾಮರಾಜನಗರ ನಗರಸಭೆ ಸ್ಪರ್ಧೆ ಬಯಸಿ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಕೊಳ್ಳೇ ಗಾಲ ನಗರಸಭೆಗೆ ಇದುವರೆವಿಗೂ ಯಾರೊ ಬ್ಬರು ಉಮೇದುವಾರಿಕೆ ಸಲ್ಲಿಸಿಲ್ಲ. ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರ ಸಭೆಯ ತಲಾ 31 ವಾರ್ಡ್‍ಗಳ ಸದಸ್ಯ ಸ್ಥಾನಕ್ಕೆ ಇದೇ ತಿಂಗಳ 29ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಕಾರ್ಯ 10ರಿಂದಲೇ ಆರಂಭ ವಾಗಿದೆ….