ಚಾಮರಾಜನಗರ, ಕೊಳ್ಳೇಗಾಲ ನಗರಸಭಾ ಚುನಾವಣೆ: ನಾಮಪತ್ರ ವಾಪಸ್‍ಗೆ ಇಂದು ಕೊನೇ ದಿನ
ಚಾಮರಾಜನಗರ

ಚಾಮರಾಜನಗರ, ಕೊಳ್ಳೇಗಾಲ ನಗರಸಭಾ ಚುನಾವಣೆ: ನಾಮಪತ್ರ ವಾಪಸ್‍ಗೆ ಇಂದು ಕೊನೇ ದಿನ

August 23, 2018

ಚಾಮರಾಜನಗರ:  ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭಾ ಸದಸ್ಯ ಸ್ಥಾನಗಳಿಗೆ ಇದೇ ತಿಂಗಳ 31ರಂದು ಮತದಾನ ನಡೆ ಯಲಿದೆ. ಸಲ್ಲಿಕೆ ಆಗಿರುವ ಉಮೇದು ವಾರಿಕೆಯನ್ನು ಹಿಂಪಡೆಯಲು ನಾಳೆ (ಆ.23) ಕೊನೆಯ ದಿನವಾಗಿದೆ. ಚುನಾ ವಣೆಗೆ ಇನ್ನೂ ಕೇವಲ 8 ದಿನಗಳಷ್ಟೇ ಬಾಕಿ ಉಳಿದಿದ್ದು, ಪ್ರಚಾರ ಬಿರುಸಾಗಿದೆ.

ಚಾಮರಾಜನಗರ ನಗರಸಭೆಯ ಎಲ್ಲಾ 31 ವಾರ್ಡ್‍ಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಿದೆ. ಬಿಜೆಪಿ 30 ವಾರ್ಡ್ ಗಳಿಗೆ ಅಭ್ಯರ್ಥಿಯನ್ನು ಹಾಕಿದೆ. ಸ್ಥಳೀಯ ಸಂಸ್ಥೆಯ ಈ ಚುನಾವಣೆಯನ್ನು ಗಂಭೀರ ವಾಗಿ ಪರಿಗಣಿಸಿರುವ ಎರಡು ಪಕ್ಷಗಳು ಗೆಲುವಿಗಾಗಿ ಇನ್ನಿಲ್ಲದ ಕಸರತ್ತಿನಲ್ಲಿ ತೊಡ ಗಿವೆ. ಅಭ್ಯರ್ಥಿಗಳು ತಮ್ಮ ವಾರ್ಡ್‍ನಲ್ಲಿ ವ್ಯಾಪಕ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇನ್ನುಳಿದಂತೆ ಜೆಡಿಎಸ್ 15 ವಾರ್ಡ್ ನಲ್ಲಿ, ಬಿಎಸ್‍ಪಿ 17 ವಾರ್ಡ್‍ನಲ್ಲಿ, ಎಸ್‍ಡಿಪಿ 7 ವಾರ್ಡ್‍ನಲ್ಲಿ ತನ್ನ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಪಕ್ಷೇತರರಾಗಿ 47 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಕೊಳ್ಳೇಗಾಲ ನಗರಸಭೆಯು 31 ವಾರ್ಡ್ ಹೊಂದಿದೆ. ಕಾಂಗ್ರೆಸ್ 30 ವಾರ್ಡ್ ಗಳಲ್ಲಿ, ಬಿಎಸ್‍ಪಿ 1 ವಾರ್ಡ್‍ನಲ್ಲಿ ತನ್ನ ಅಭ್ಯರ್ಥಿ ಯನ್ನು ಹಾಕಿವೆ. ಪಕ್ಷೇತರರಾಗಿ 30 ಮಂದಿ ಸ್ಪರ್ಧಿಸಿದ್ದಾರೆ. (ಒಟ್ಟು 112 ಅಭ್ಯರ್ಥಿಗಳು)
ಇಲ್ಲಿ ಕಾಂಗ್ರೆಸ್. ಎಂಎಸ್‍ಪಿ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂಬುದು ಮೇಲ್ನೋ ಟಕ್ಕೆ ಕಂಡು ಬಂದಿದೆ. ಆದರೆ ಇಲ್ಲಿ ಗೆಲುವಿ ಗಾಗಿ ಪೈಪೋಟಿ ಇರುವುದು ಕಾಂಗ್ರೆಸ್ ಹಾಗೂ ಬಿಎಸ್‍ಪಿ ಅಭ್ಯರ್ಥಿಗಳ ನಡುವೆ ಎಂದೇ ಹೇಳಲಾಗುತ್ತಿದೆ. ಪ್ರಮುಖ ಅಭ್ಯರ್ಥಿಗಳು ಈಗಾಗಲೇ ಪ್ರಚಾರದಲ್ಲಿ ನಿರತವಾಗಿರುವುದು ಪಟ್ಟಣದಲ್ಲಿ ಕಂಡು ಬರುತ್ತಿದೆ. 6ನೇ ವಾರ್ಡ್‍ನಿಂದ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಗಂಗಮ್ಮ ಈಗಾಗಲೇ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಈ ಮೂಲಕ ಪಕ್ಷದ ಗೆಲುವಿ ಗಾಗಿ ಮುನ್ನುಡಿ ಬರೆದಿದ್ದಾರೆ.

ಪ್ರಚಾರ ಚುರುಕು: ಗೆಲುವಿಗಾಗಿ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿರುವ ಪ್ರಮುಖ ಅಭ್ಯರ್ಥಿಗಳು ವ್ಯಾಪಕ ಪ್ರಚಾರದಲ್ಲಿ ನಿರತ ರಾಗಿದ್ದಾರೆ. ತಮ್ಮ ವಾರ್ಡ್ ವ್ಯಾಪ್ತಿಗೆ ಒಳ ಪಡುವ ಪ್ರದೇಶದಲ್ಲಿ ಪ್ರತಿನಿತ್ಯ ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಎನ್ನದೇ ಪ್ರಚಾರ ದಲ್ಲಿ ತೊಡಗಿರುವುದು ವಾರ್ಡ್‍ಗಳಲ್ಲಿ ಕಂಡು ಬರುತ್ತಿದೆ. ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳೊಂದಿಗೆ ಮನೆ ಮನೆಗೆ ತೆರಳುತ್ತಿರುವ ಅಭ್ಯರ್ಥಿಗಳು ಕೈ ಮುಗಿದು ಮತಯಾಚನೆಯಲ್ಲಿ ತೊಡಗಿ ದ್ದಾರೆ. ಹಿರಿಯರು ಎದುರಾದ ತಕ್ಷಣ ಕಾಲಿಗೆ ನಮಸ್ಕರಿಸುವ ಮೂಲಕ ಮತದಾರರ ಓಲೈಕೆ ಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ.
ಜಿಲ್ಲೆಯ ಸಚಿವರಾದ ಸಿ.ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಸಂಸದ ಆರ್.ಧ್ರುವನಾರಾ ಯಣ್ ಅವು ಇನ್ನೂ ಸಹ ಚುನಾವಣಾ ಅಖಾಡಕ್ಕೆ ಇಳಿದಿಲ್ಲ. ಆದರೂ ಸಹ ತಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ಮೊಬೈಲ್ ಕರೆ ಮಾಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡುತ್ತಿದ್ದಾರೆ.

ಅಭ್ಯರ್ಥಿಯಾಗಲೀ, ಪಕ್ಷದ ಮುಖಂಡ ರಾಗಲೀ, ಕಾರ್ಯಕರ್ತರಾಗಲೀ ಅಥವಾ ಜನಪ್ರತಿನಿಧಿಗಳಾಗಲೀ ಯಾರಾದರೂ ಸರಿ ಎಷ್ಟೇ ಬಾರಿ ಮನೆಗೆ ಭೇಟಿ ನೀಡಿದರೂ ಸಹ ಮತದಾರ ಪ್ರಭುಗಳು ಮಾತ್ರ ತಮ್ಮನ್ನೇ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ. ಆದರೆ ತಮ್ಮ ಮತ ಯಾರಿಗೆ ಎಂಬ ಗುಟ್ಟನ್ನು ಮಾತ್ರ ಬಿಟ್ಟು ಕೊಡದ ಮತದಾರರು, ಯಾರನ್ನ ಗೆಲ್ಲಿಸು ತ್ತಾರೋ, ಯಾವ ಅಭ್ಯರ್ಥಿಯನ್ನು ಮನೆ ಯಲ್ಲಿಯೇ ಕೂರಿಸುತ್ತಾರೋ ಎಂಬು ದನ್ನು ಕಾದು ನೋಡಬೇಕಾಗಿದೆ.

Translate »