ಬದುಕಿದ್ದಾಗಲೇ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿದ ಉಪ ತಹಸೀಲ್ದಾರ್!
ಮಂಡ್ಯ

ಬದುಕಿದ್ದಾಗಲೇ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿದ ಉಪ ತಹಸೀಲ್ದಾರ್!

August 23, 2018

ಮಂಡ್ಯ:  ಬದುಕಿರುವಾಗಲೇ ವ್ಯಕ್ತಿಯೋರ್ವನಿಗೆ ಸಾವ ನ್ನಪ್ಪಿದ್ದಾನೆಂದು ಮರಣ ಪ್ರಮಾಣಪತ್ರ ನೀಡಿರುವ ವಿಚಿತ್ರ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕ ಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ರಾಮೇಗೌಡ ಎಂಬ ವ್ಯಕ್ತಿಗೆ ಅರಕೆರೆ ಗ್ರಾಮದ ನಾಡ ಕಚೇರಿಯ ಉಪ ತಹಶೀಲ್ದಾರ್ ಅವರು ಜೀವಂತ ವಿರುವಾಗಲೇ ಮರಣ ಪ್ರಮಾಣಪತ್ರ ನೀಡಿದ್ದಾರೆ.

ಏನಿದು ಪ್ರಕರಣ?: ಶ್ರೀರಂಗಪಟ್ಟನ ತಾಲೂಕು ಅರಕೆರೆ ಹೋಬಳಿ ವ್ಯಾಪ್ತಿಯ ಚಿಕ್ಕಹಾರೋಹಳ್ಳಿ ನಿವಾಸಿ ರಾಮೇಗೌಡ ತನ್ನ ತಂದೆ ತಿಮ್ಮೇಗೌಡ ಮೃತ ಪಟ್ಟಿದ್ದಾರೆಂದು ಮರಣ ಪ್ರಮಾಣಪತ್ರ ನೀಡುವಂತೆ ಅರಕೆರೆ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರಕೆರೆ ಉಪ ತಹಶೀಲ್ದಾರ್ ಅರ್ಜಿ ಸಲ್ಲಿಸಿದ ರಾಮೇಗೌಡನನ್ನೇ ಬದುಕಿ ರುವಾಗಲೇ ಸಾಯಿಸಿದ್ದಾರೆ.! ಈ ಅಧಿಕಾರಿಯ ತಪ್ಪನ್ನು ಗಂಭೀರ ವಾಗಿ ಪರಿಗಣಿಸಿರುವ ರಾಮೇಗೌಡ ಸೇರಿದಂತೆ ಈ ಊರಿನ ಗ್ರಾಮಸ್ಥರು ಅಧಿಕಾರಿಗೆ ಮರಣ ಪ್ರಮಾಣ ಪತ್ರದ ತಪ್ಪನ್ನು ಸರಿಪಡಿಸುವಂತೆ ಅಧಿಕಾರಿಯ ಗಮನಕ್ಕೆ ತಂದಿದ್ದರು. ಆದರೆ, ಉಡಾಫೆ ಉತ್ತರ ನೀಡುವುದರ ಜೊತೆಗೆ ಪ್ರಶ್ನಿಸಿದ ಜನರಿಗೆ ಜಾತಿನಿಂದನೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿ ದೌರ್ಜನ್ಯ ನಡೆಸಿ ದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರು ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ದೂರು ಸಲ್ಲಿಸಿದ್ದು, ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಬದುಕಿರೋ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿ ಸಾಯಿಸೋ ಮುಖೇನ ವ್ಯಕ್ತಿಯ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಿರುವ ಅಧಿಕಾರಿಯ ವಿರುದ್ಧ ಇನ್ನಾದರೂ ಮೇಲಧಿಕಾರಿಗಳು ಕ್ರಮ ಕೈಗೊಂಡು ರಾಮೇ ಗೌಡರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

Translate »