ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಬಕ್ರೀದ್ ಆಚರಣೆ
ಚಾಮರಾಜನಗರ

ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಬಕ್ರೀದ್ ಆಚರಣೆ

August 23, 2018

ಚಾಮರಾಜನಗರ/ಗುಂಡ್ಲುಪೇಟೆ:  ತ್ಯಾಗ ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.ಬೆಳಿಗ್ಗೆಯೇ ಹೊಸ ಬಟ್ಟೆ ತೊಟ್ಟು, ಹಿರಿಯರು, ಕಿರಿಯರು ಎಂಬ ಬೇಧಭಾವ ಇಲ್ಲದೇ ಮಸೀದಿ, ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಂರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ಒಬ್ಬರಿಗೊಬ್ಬರು ಅಪ್ಪಿ ಕೊಳ್ಳುವ ಮೂಲಕ ಕೈ-ಕೈ ಕುಲುಕಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೋಂಡರು.

ಚಾಮರಾಜನಗರ: ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಸಹ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಅದ್ಧೂರಿ ಯಾಗಿ ಆಚರಿಸಿದರು. ನಗರದ ಕ್ರೀಡಾಂ ಗಣ ಹಾಗೂ ಸೋಮವಾರಪೇಟೆ ಬಳಿ ಇರುವ ಈದ್ಗಾ ಮೈದಾನಕ್ಕೆ ತೆರಳಿದ ಸಹಸ್ರಾರು ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೆಲವರು ಮಸೀದಿಗಳಿಗೆ ತೆರಳಿ ಪ್ರಾರ್ಥಿಸಿದರು. ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಮೆರುಗು ತಂದರು. ಈ ವೇಳೆ ಅಲ್ಲಾ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಲಾಯಿತು.

ಸಚಿವ ಸಿ.ಪುಟ್ಟರಂಗಶೆಟ್ಟಿ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮುಸ್ಲಿಂರು ಧರಿಸುವ ಟೋಪಿಯನ್ನು ಪುಟ್ಟ ರಂಗಶೆಟ್ಟಿ ಧರಿಸುವ ಮೂಲಕ ಸಮುದಾಯ ದವರಿಗೆ ಹಬ್ಬದ ಶುಭಾಶಯ ಕೋರಿದರು.

ಈ ವೇಳೆ ಕೇರಳ ಹಾಗೂ ಕೊಡಗು ಜಿಲ್ಲೆ ಗಳ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿ ಸಿದ್ದು, ವಿಶೇಷವಾಗಿತ್ತು. ಇಸ್ಲಾಂನ ಪವಿತ್ರ ತಿಂಗಳು ಎನಿಸಿಕೊಂಡಿರುವ ಆಗಸ್ಟ್‍ನಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಅದರಂತೆ ಈ ವರ್ಷದಲ್ಲೂ ಸಹ ಇದೇ ತಿಂಗಳಿನಲ್ಲಿ ಹಬ್ಬವನ್ನು ಆಚರಿಸಲಾಯಿತು. ಪ್ರವಾದಿ ಹಜರತ್ ಇಬ್ರಾಹಿಂ ಖಲೀಲ್ ಉಲ್ಲಾ ವರ್ಷದ ಬಲಿದಾನದ ನೆನಪಿಗಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ.

ಗುಂಡ್ಲುಪೇಟೆ ವರದಿ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ ವನ್ನು ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂ ದಿಗೆ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿದರು. ಪಟ್ಟಣದ ವಿವಿಧ ಮಸೀದಿಯಿಂದ ಹೊರಟ ಶ್ವೇತವಸ್ತ್ರ ಧರಿಸಿದ ಮುಸ್ಲಿಂ ಬಾಂಧವರು ಮೆರವಣಿಗೆ ಸಾಗಿ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡರು. ನಂತರ ಪರಸ್ಪರ ಅಪ್ಪಿಕೊಂಡು ಶುಭಾ ಶಯ ವಿನಿಮಯ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಸಮುದಾಯದ ಧರ್ಮಗುರುಗಳಿಂದ ಬಕ್ರೀದ್ ಆಚರಣೆಯ ಮಹತ್ವ ಹಾಗೂ ತಮ್ಮ ಗಳಿಕೆಯ ಸ್ವಲ್ಪ ಭಾಗ ವನ್ನು ಬಡವರಿಗೆ ದಾನ ಮಾಡಬೇಕಾದ ಬಗ್ಗೆ ಪ್ರವಚನ ನೀಡಿ ನಂತರ ಸಾಮೂ ಹಿಕ ಪ್ರಾರ್ಥನೆ ನಡೆಸಿದರು.

ಬೇಗೂರು: ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಬೇಗೂರಿನಲ್ಲಿ ಮುಸ್ಲಿಂ ಬಾಂಧವರು ಮಜಿದ್ ಈದ್ ಮುಬಾರ್ ಮಸೀದಿಯಿಂದ ಮೆರವಣಿಗೆ ತೆರಳಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಅಬ್ದುಲ್ಲಾ ಅವರು ಪ್ರವಾದಿ ಮಹಮದ್ ಪೈಗಂಬರರು ಬೋಧಿಸಿದ ತ್ಯಾಗ ಹಾಗೂ ಬಲಿದಾನಗಳ ಬಗ್ಗೆ ವಿವರಿಸಿದರು. ನಂತರ ಎಲ್ಲರೂ ಪರಸ್ಪರ ಶುಭಾಶಯ ಕೋರಿದರು, ಇದಲ್ಲದೇ ತಾಲೂಕಿನ ತೆರಕಣಾಂಬಿ, ಕಗ್ಗಳದ ಹುಂಡಿ, ಬಾಚಹಳ್ಳಿ ಗ್ರಾಮಗಳಲ್ಲಿಯೂ ಬಕ್ರೀದ್ ಆಚರಣೆ ಮಾಡಲಾಯಿತು.

Translate »