ಮೈಸೂರಲ್ಲಿ ಭಕ್ತಿ ಭಾವದ ಬಕ್ರೀದ್ ಆಚರಣೆ
ಮೈಸೂರು

ಮೈಸೂರಲ್ಲಿ ಭಕ್ತಿ ಭಾವದ ಬಕ್ರೀದ್ ಆಚರಣೆ

August 23, 2018

ಮೈಸೂರು:  ತ್ಯಾಗ ಮತ್ತು ಬಲಿದಾನದ ಸಂಕೇತವಾದ ಈದ್-ಉಲ್-ಅeóÁ (ಬಕ್ರೀದ್) ಹಬ್ಬವನ್ನು ಮೈಸೂರಿನಲ್ಲಿ ಬುಧವಾರ ಮುಸ್ಲಿಂ ಬಾಂಧವರು ಭಕ್ತಿ ಭಾವದಿಂದ ಆಚರಿಸಿದರು. ಮೈಸೂರಿನ ತಿಲಕ್‍ನಗರ, ರಾಜೀವ್‍ನಗರ, ಗೌಸಿಯಾನಗರದ ಈದ್ಗಾ ಮೈದಾನ ಹಾಗೂ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಆಲಂಗಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.

ತಿಲಕ್‍ನಗರದ ಹಳೇ ಈದ್ಗಾ ಮೈದಾನದಲ್ಲಿ ಸಹಸ್ರಾರು ಮುಸಿಂ್ಲ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮೈಸೂರಿನ ಸರ್ಖಾಜಿ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಮಾತನಾಡಿ, ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ವಿವರಿಸಿದರು.

ಇಬ್ರಾಹಿಂ ಖಲೀಮುಲ್ಲಾ ಅವರು ತಮ್ಮ ಮಗ ಇಸ್ಲಾಯಿಲ್ ಜಬೀವುಲ್ಲಾನನ್ನು ಅಲ್ಲಾನಿಗೆ (ದೇವರಿಗೆ) ತ್ಯಾಗ ಮಾಡಲು ನಿರ್ಧರಿಸಿ ತಮ್ಮ ತ್ಯಾಗ ಮತ್ತು ಬಲಿದಾನದ ಮೂಲಕ ದೇವರನ್ನು ಒಲಿಸಿಕೊಂಡ ಧ್ಯೋತಕವಾಗಿ ಈ ಹಬ್ಬ ಆಚರಿಸಲಾಗುತ್ತದೆ.
ಈ ಹಬ್ಬದ ಸಂದರ್ಭದಲ್ಲಿ ತಮ್ಮ ಆಹಾರವನ್ನು ಮೂರು ಭಾಗ ಮಾಡಿ, ಒಂದು ಭಾಗವನ್ನು ಸಂಬಂಧಿಗಳಿಗೆ, ಇನ್ನೊಂದು ಭಾಗ ಬಡವರಿಗೆ ಹಾಗೂ ಉಳಿದ ಇನ್ನೊಂದು ಭಾಗವನ್ನು ಸ್ವಂತಕ್ಕೆ ಬಳಸುವ ಮೂಲಕ ಭಕ್ತಿ ಪ್ರದರ್ಶಿಸಲಾಗುತ್ತದೆ. ಇದು ಸಮಾನತೆಯ ಸಂಕೇತವೂ ಹೌದು ಎಂದರು.

ಬೇರೆ ಧರ್ಮದ ಹಬ್ಬಗಳಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಳ್ಳುವ ಜೊತೆಗೆ ನಮ್ಮ ಹಬ್ಬಗಳ ಸಂದರ್ಭದಲ್ಲಿಯೂ ಇತರೆ ಧರ್ಮದವರನ್ನು ಒಳಪಡಿಸಿಕೊಳ್ಳುವ ಮೂಲಕ ಬಾಂಧವ್ಯ ಮೆರೆಯಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕೊಡಗು ಮತ್ತು ಕೇರಳದ ನೆರೆ ಹಾವಳಿಯಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ದೇವರು ಶಾಂತಿ ಮತ್ತು ಧೈರ್ಯ ಕರುಣಿಸುವಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡಿದರು.

ಸಲಾಮ್ ವೆಲ್‍ಫೇರ್ ಅಸೋಸಿಯೇಷನ್‍ನ ಅಧ್ಯಕ್ಷ ಸಲಾಮ್ ಅಬ್ದುಲ್ ಸಲಾಮ್ ಅವರು ಸರ್ಖಾಜಿ ಅವರನ್ನು ಗೌರವಿಸಿದರು. ಜಮಾತೆ ಇಸ್ಲಾಮಿ ಹಿಂದ್ ಮೈಸೂರು ಘಟಕದ ಕಾರ್ಯಕರ್ತರು ಕೇರಳ ಮತ್ತು ಕೊಡಗಿನಲ್ಲಿ ನೆರೆ ಹಾವಳಿಯಲ್ಲಿ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದರು.

ಮಂಗಳೂರು ಮತ್ತು ಗೋವಾ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಶೇಖ್ ಅಲಿ, ಪಾಲಿಕೆ ಸದಸ್ಯ ಸುಹೇಲ್ ಬೇಗ್, ಸಮಾಜ ಸೇವಕ ಪಝಾಮಿಲ್, ಮೈಸೂರು ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಜಮೀಲ್ ಅಹಮದ್ ಅಶ್ರಫಿ, ಎಬಿಎಸ್ ಕಂಫರ್ಟ್‍ನ ಎಬಿಎಸ್ ಸೈಯ್ಯದ್ ಅಬ್ಬಾಸ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೈಸೂರಿನ ರಾಜೀವ್‍ನಗರ 2ನೇ ಹಂತದ ಮಸ್ಜೀದ್-ಇ-ಖೈರುಲ್‍ವಾರ್, ರಾಜೀವ್‍ನಗರ 1ನೇ ಹಂತದ ಮಸ್ಜೀದ್ ಯಾ ರಸೂಲ್ ಅಲ್ಲಾಹ್, ಎಸ್.ಎ.ಲೇಔಟ್‍ನ ಮಸ್ಜೀದ್ ಸೈಯದ್ ಅಹಮದ್, ಮಿಷನ್ ಆಸ್ಪತ್ರೆ ರಸ್ತೆ ಈದ್ಗಾ ಮಸ್ಜೀದ್, ಅಶೋಕರಸ್ತೆಯ ಮಸ್ಜೀದ್ ಆಜûಮ್ ಮರ್ಕಾಜ್ ಅಹ್ಲೆ ಸುನ್ನತೋ ಜಮಾತ್, ಕಲ್ಯಾಣಗಿರಿಯ ಮಸ್ಜೀದ್ ಯಾರಬ್, ಶಾಂತಿನಗರದ ಮಸ್ಜೀದ್ ರಹಮತಿಯಾ, ನಗರಪಾಲಿಕೆ ಹಿಂಭಾಗದ ಮಸ್ಜೀದ್ ಫಿಲ್‍ಕಾನಾ, ಸಾಡೇ ರಸ್ತೆಯ ದರ್ಗಾ-ಇ-ಮಸ್ಜೀದ್, ಗೌಸಿಯಾನಗರದ ಅಲ್-ನೂರ್ ಮಸ್ಜಿದ್, ಟಿಪ್ಪುನಗರದ ಹಜರತ್ ಟಿಪ್ಪುಸುಲ್ತನ್ ಮಸ್ಜೀದ್, ರಾಜೇಂದ್ರನಗರದ ಮಸ್ಜೀದ್-ಇ-ಖಾತೂನ್-ಇ-ಜನ್ನತ್, ಮಂಡಿಮೊಹಲ್ಲಾದ ಬಿ.ಎನ್.ರಸ್ತೆ ಮಸ್ಜೀದ್ ಒಮರ್‍ಖಾನ್, ಸಿಲ್ಕ್ ಫ್ಯಾಕ್ಟರಿ ಬಳಿಯ ಮಸ್ಜೀದ್ ರೆಹಮಾನಿಯಾ, ಕ್ಯಾತಮಾರನಹಳ್ಳಿ ಮುಸ್ಲಿಂ ಬ್ಲಾಕ್‍ನ ಮದೀನಾ ಮಸ್ಜೀದ್, ರಾಘವೇಂದ್ರ ಬಡಾವಣೆಯ ಈದ್ಗಾ ಮೈದಾನ ಸೇರಿದಂತೆ ಮೈಸೂರಿನ ನಾನಾ ಮಸೀದಿಗಳು ಹಾಗೂ ಈದ್ಗಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಈದ್-ಉಲ್-ಅeóÁ (ಬಕ್ರಿದ್) ಹಬ್ಬವನ್ನು ಆಚರಿಸಿದರು.

Translate »