ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆಯಲು ಲಾಬಿ
ಚಾಮರಾಜನಗರ

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆಯಲು ಲಾಬಿ

August 15, 2018

ಚಾಮರಾಜನಗರ: ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿ ಆಗಿ ಅಧಿಸೂಚನೆ ಹೊರಬಿದ್ದಿದೆ. ಅಧಿಸೂಚನೆ ಹೊರಬಿದ್ದು 5 ದಿನ ಆದರೂ ಸಹ ಚಾಮರಾಜನಗರ ನಗರಸಭೆ ಸ್ಪರ್ಧೆ ಬಯಸಿ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಕೊಳ್ಳೇ ಗಾಲ ನಗರಸಭೆಗೆ ಇದುವರೆವಿಗೂ ಯಾರೊ ಬ್ಬರು ಉಮೇದುವಾರಿಕೆ ಸಲ್ಲಿಸಿಲ್ಲ.

ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರ ಸಭೆಯ ತಲಾ 31 ವಾರ್ಡ್‍ಗಳ ಸದಸ್ಯ ಸ್ಥಾನಕ್ಕೆ ಇದೇ ತಿಂಗಳ 29ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಕಾರ್ಯ 10ರಿಂದಲೇ ಆರಂಭ ವಾಗಿದೆ. ಆದರೆ ಈ ಐದು ದಿನದಲ್ಲಿ ಚಾ.ನಗರ ನಗರಸಭೆಗೆ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳು ಇಬ್ಬರು ಮಾತ್ರ. ಕೊಳ್ಳೇಗಾಲ ನಗರ ಸಭೆಗೆ ಯಾರೊಬ್ಬರು ನಾಮಪತ್ರ ಸಲ್ಲಿಸಿಲ್ಲ.
ಎರಡು ದಿನ ಮಾತ್ರ ಬಾಕಿ: ಆಗಸ್ಟ್ 15. ಸ್ವಾತಂತ್ರ್ಯ ದಿನಾಚರಣೆ. ಸರ್ಕಾರಿ ರಜೆ ಇರುವ ಕಾರಣ ನಾಮ ಪತ್ರ ಸ್ವೀಕರಿಸುವುದಕ್ಕೆ ರಜೆ ಅನ್ವಯಿಸುತ್ತದೆ. ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲು 17 ಕೊನೆ ದಿನ. ಹೀಗಾಗಿ ಗುರುವಾರ ಮತ್ತು ಶುಕ್ರವಾರ (ಎರಡು ದಿನ ಮಾತ್ರ) ನಾಮಪತ್ರ ಸಲ್ಲಿಸಲು ಉಳಿದಿರುವ ದಿನಗಳು.

ಅಂತಿಮ ಕಸರತ್ತು: ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‍ಪಿ ಆಕಾಂಕ್ಷಿಗ ಳಿಂದ ಅರ್ಜಿ ಆಹ್ವಾನಿಸಿತ್ತು. ಈ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಸ್ಪರ್ಧಿಸಬೇಕು ಎನ್ನುವ ಆಕಾಂ ಕ್ಷಿಗಳ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಜೆಡಿಎಸ್ ಹಾಗೂ ಬಿಎಸ್‍ಪಿಯಿಂದ ಸ್ಪರ್ಧಿಸಬೇಕು ಎನ್ನು ವವರ ಸಂಖ್ಯೆ ಕಡಿಮೆ ಇದ್ದು, ಕೆಲವು ವಾರ್ಡ್ ಗಳಿಗೆ ಅರ್ಜಿಯೇ ಸಲ್ಲಿಕೆ ಆಗಿಲ್ಲ ಎಂದು ತಿಳಿದು ಬಂದಿದೆ. ಈ ಎರಡೂ ಪಕ್ಷಗಳು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಇರುವ ಆಕಾಂಕ್ಷಿ ಗಳಿಗೆ ಗಾಳ ಹಾಕುವ ಪ್ರಯತ್ನ ನಡೆಸುತ್ತಿದೆ ಎನ್ನ ಲಾಗಿದೆ. ಇನ್ನುಳಿದಂತೆ ಎಸ್‍ಡಿಪಿಐ ಕೆಲವು ವಾರ್ಡ್ ಗಳಿಗೆ ಮಾತ್ರ ಸೀಮಿತವಾಗಿದೆ. ಕೊಳ್ಳೇಗಾಲದಲ್ಲಿ ಬಿಎಸ್‍ಪಿ ಪ್ರಬಲ ಆಗಿರುವ ಕಾರಣ ಆ ಪಕ್ಷ ದಿಂದ ಸ್ಪರ್ಧಿಸಬೇಕು ಎನ್ನುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಇದು ಕ್ಷೇತ್ರದ ಶಾಸಕರಾಗಿರುವ ಎನ್.ಮಹೇಶ್ ಅವರಿಗೆ ತಲೆ ಬಿಸಿ ತರಿಸಿದೆ.

ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಅರ್ಜಿ ಸಲ್ಲಿ ಸಿದ್ದು, ಟಿಕೆಟ್ ಪಡೆಯಲು ತಮ್ಮ ರಾಜಕೀಯ ಗಾಡ್‍ಫಾದರ್‍ಗಳಿಗೆ ಒತ್ತಡ ತರಲಾರಂಭಿಸಿದ್ದಾರೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ, ಕೊಳ್ಳೇಗಾಲದಲ್ಲಿ ಕಾಂಗ್ರೆಸ್-ಬಿಎಸ್‍ಪಿ, ಬಿಜೆಪಿ ಯಿಂದ ಸ್ಪರ್ಧಿಸಲು ಒಂದೊಂದು ವಾರ್ಡ್‍ಗೆ ಮೂರು-ನಾಲ್ಕು ಆಕಾಂಕ್ಷಿಗಳು ಇರುವುದು ಆ ಪಕ್ಷದ ಮುಖಂಡರ ತಲೆಬಿಸಿಗೆ ಕಾರಣವಾಗಿದೆ. ಪ್ರಮುಖ ಪಕ್ಷಗಳಿಗೆ ಗೆಲುವೇ ಮಾನದಂಡ ಆಗಿರುವ ಕಾರಣ ಗೆಲ್ಲುವ ಅಭ್ಯರ್ಥಿಯನ್ನು ಹಾಗೂ ಎಲ್ಲಾ ರೀತಿಯಲ್ಲಿ ‘ಶಕ್ತಿ’ ಹೊಂದಿರುವ ಅಭ್ಯರ್ಥಿಗೆ ಟಿಕೆಟ್ ನೀಡಲು ಮುಖಂಡರು ತೀರ್ಮಾನಿಸಿದ್ದಾರೆ. ಹೀಗಾಗಿ ಆಕಾಂ ಕ್ಷಿಗಳಲ್ಲಿ ತಳಮಳ ಆರಂಭವಾಗಿದೆ.

ಇಂದು ಫೈನಲ್ ಸಾಧ್ಯತೆ: ನಾಮಪತ್ರ ಸಲ್ಲಿಕೆಯ ಅಂತಿಮ ದಿನಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಇರುವ ಕಾರಣ ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯನ್ನು ನಾಳೆ (ಆ.15) ಅಂತಿಮಗೊಳಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯ ರ್ಥಿಗಳ ಆಯ್ಕೆಗಾಗಿ ಬುಧವಾರ ಸಭೆ ನಡೆಸಲಿವೆ ಎಂದು ತಿಳಿದು ಬಂದಿದೆ.

ಆಕಾಂಕ್ಷಿಗಳು ಟಿಕೆಟ್ ಪಡೆಯಲು ತಮ್ಮ ರಾಜ ಕೀಯ ಗಾಡ್‍ಫಾದರ್‍ಗಳ ಮೂಲಕ ಒತ್ತಡ ತರು ವುದು ಒಂದೆಡೆ ಆದರೆ, ಟಿಕೆಟ್ ಸಿಗುವುದು ಖಚಿತ ವಾಗಿರುವ ಅಭ್ಯರ್ಥಿಗಳು ಆ ವಾರ್ಡ್‍ನ ಮುಖಂ ಡರನ್ನು, ಸಮುದಾಯಗಳ ಮುಖಂಡರನ್ನು ಭೇಟಿ ಆಗುತ್ತಿರುವುದು ಕಂಡು ಬರುತ್ತಿದೆ. ರಾಮಸಮು ದ್ರದ ವ್ಯಾಪ್ತಿಗೆ ಬರುವ ವಾರ್ಡ್ 27ರಲ್ಲಿ ಬಿಜೆಪಿ ಟಿಕೆಟ್ ಸುರೇಶ್‍ನಾಯ್ಕ ಅವರಿಗೆ ಅಂತಿಮ ವಾಗಿದೆ ಎನ್ನಲಾಗಿದೆ. ಹೀಗಾಗಿ ಅವರು ವಾರ್ಡ್‍ನ ಮುಖಂಡರು ಹಾಗೂ ಆ ಪಕ್ಷದ ಕಾರ್ಯಕರ್ತ ರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತಯಾ ಚನೆ ಆರಂಭಿಸಿದ್ದಾರೆ. ಹಾಗೆಯೇ ವಾರ್ಡ್ 28ರ ಕಾಂಗ್ರೆಸ್ ಟಿಕೆಟ್ ಶೋಭಾ ಪುಟ್ಟಸ್ವಾಮಿ ಅವರಿಗೆ ಸಿಗುವುದು ಗ್ಯಾರಂಟಿ ಆಗಿದೆ. ಹೀಗಾಗಿ ಶೋಭಾ ಪುಟ್ಟಸ್ವಾಮಿ ಮುಖಂಡರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.

Translate »