ಕೋಮುವಾದಿಗಳ ಅಧಿಕಾರದಿಂದ ದೂರವಿಡಬೇಕು
ಮೈಸೂರು

ಕೋಮುವಾದಿಗಳ ಅಧಿಕಾರದಿಂದ ದೂರವಿಡಬೇಕು

August 15, 2018

ತಿ.ನರಸೀಪುರ:  ಸಂವಿಧಾನವನ್ನೇ ಸುಟ್ಟು ಹಾಕುವಂತಹ ಕೃತ್ಯಕ್ಕೆ ಕೈ ಹಾಕಿರುವ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು. ಬಹಿ ರಂಗವಾಗಿ ದೇಶದ ಸಂವಿಧಾನ ಸುಟ್ಟು ಹಾಕಿದ ಕೋಮುವಾದಿಗಳ ವಿರುದ್ಧ ಪ್ರಜಾ ಪ್ರಭುತ್ವವಾದಿಗಳು ಸಂಘಟಿತ ಹೋರಾಟ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.

ಪುರಸಭೆ ಚುನಾವಣೆಯ ಪೂರ್ವ ಭಾವಿಯಾಗಿ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಆಕಾಂಕ್ಷಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ, ಸಂವಿಧಾನದ ರಕ್ಷಣೆಯಾಗದಿದ್ದರೆ ದೇಶದ ರಕ್ಷಣೆ ಯಾಗಲು ಸಾಧ್ಯವಿಲ್ಲ. ಸಂವಿಧಾನ ರಕ್ಷಣೆಗೆ, ಪ್ರಜಾಪ್ರಭುತ್ವ ಉಳಿವಿಗಾಗಿ ಹಾಗೂ ಜಾತ್ಯಾತೀತ ಬಲವರ್ಧನೆಗೆ ಹೋರಾಟ ವನ್ನು ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಬೆಂಬಲಿಸಬೇಕಾದ ಅಗತ್ಯವಿದೆ ಎಂದರು.

ದೇಶದಲ್ಲಿ ಸಂವಿಧಾನ ಮತ್ತು ಅಂಬೇ ಡ್ಕರ್ ಅವರನ್ನು ಪ್ರಸ್ತುತವಾಗಿಡಲು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿ ಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಕುರಿತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಯಶಸ್ವಿ ಯಾಗಿ ನಡೆಸಿದ್ದೇವು. ಚಳುವಳಿಯ ಸಂಘರ್ಷದ ಹಿನ್ನೆಲೆಯಲ್ಲಿ ರಾಜಕಾರಣಕ್ಕೆ ಬಂದದ್ದರಿಂದ ಅಧಿಕಾರ ಇಲ್ಲವೆಂದು ಸುಮ್ಮನೆ ಕೂರುವುದಿಲ್ಲ. ಅಭಿವೃದ್ಧಿ ಕೆಲಸ ವನ್ನು ಮಾಡಿದ್ದರೂ ಸೋಲಿಸಿದರೆಂದು ತಾವೆಂದೂ ಜನರಿಂದ ದೂರವಿರದೆ ಜನಪರ ಹೋರಾಟ ಮಾಡುತ್ತೇನೆ ಎಂದು ನುಡಿದರು.

ವರುಣ ಹಾಗೂ ನರಸೀಪುರ ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಪುರಸಭೆ 23 ವಾರ್ಡುಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಹಾಗೂ ಮುಖಂಡರು ಸಂಘಟಿತರಾಗಿ ಹೋರಾಟ ವನ್ನು ಮಾಡಬೇಕು. ಆಕಾಂಕ್ಷಿಗಳೊಂದಿಗೆ ಸಮಾಲೋಚನೆ ನಡೆಸಿ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಗೊಳಿಸಬೇಕು. ಪಕ್ಷದ ಅಭ್ಯರ್ಥಿಯ ಗೆಲುವಿಗೆ ದುಡಿಯಬೇಕು. ಕಳೆದ ವಿಧಾನಸಭೆ ಚುನಾವಣೆಯಂತೆ ಹಿನ್ನೆಡೆ ಯಾಗದಂತೆ ನೋಡಿಕೊಳ್ಳಬೇಕು ಎಂದು ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ಮಾತನಾಡಿ, ಪುರಸಭೆ ಸೇರಿದಂತೆ ಪಾಲಿಕೆಯ ಚುನಾವಣೆಯನ್ನು ಕೂಡ ಮಾಜಿ ಸಚಿವ ಡಾ.ಹೆಚ್.ಸಿ.ಮಹ ದೇವಪ್ಪ ಅವರು ಗಂಭೀರವಾಗಿ ತೆಗೆದು ಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನೇತೃತ್ವವನ್ನು ವಹಿಸಿ ಕೊಳ್ಳಬೇಕು ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಯುವ ಮುಖಂಡ ಸುನೀಲ್ ಬೋಸ್, ಜಿ.ಪಂ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥನ್, ತಾ.ಪಂ ಅಧ್ಯಕ್ಷ ಆರ್.ಚಲುವರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಪುರಸಭೆ ಅಧ್ಯಕ್ಷ ಸಿ. ಉಮೇಶ್(ಕನಕಪಾಪು), ಎಸ್ಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಪದ್ಮನಾಭ, ಜಿ.ಪಂ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ಪ.ಪಂ ಮಾಜಿ ಅಧ್ಯಕ್ಷರಾದ ಬಸವಣ್ಣ, ಎನ್.ಮಹದೇವ ಸ್ವಾಮಿ, ವಿರೇಶ್, ಎನ್.ಪಿ.ಕನಕರಾಜು, ಎನ್.ಎಸ್.ಬಸವರಾಜು, ಟಿಎಪಿಸಿಎಂಎಸ್ ನಿರ್ದೇಶಕ ಬಿ.ಮಹದೇವ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕಿ ಲತಾ ಜಗದೀಶ್, ಮುಖಂಡರಾದ ಎಸ್.ಬಿ. ರಮೇಶ, ರಾಘವೇಂದ್ರ, ಸಿ.ಮಹದೇವ, ಬಾದಾಮಿ ಮಂಜು, ಪುಳ್ಳಾರಿ ಮಾದೇಶ, ಲಕ್ಷ್ಮೀನಾರಾಯಣ, ದದ್ದೂರಿ ಶೇಖರ್ ಹಾಗೂ ಇನ್ನಿತರರು ಹಾಜರಿದ್ದರು.

Translate »