ಕೊಲ್ಲಿ ಸೇತುವೆ ಜಲಾವೃತ: ರಸ್ತೆ ಸಂಚಾರ ಸ್ಥಗಿತ
ಮೈಸೂರು

ಕೊಲ್ಲಿ ಸೇತುವೆ ಜಲಾವೃತ: ರಸ್ತೆ ಸಂಚಾರ ಸ್ಥಗಿತ

August 15, 2018

ಬೈಲಕುಪ್ಪೆ:  ಧಾರಾಕಾರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಪ್ಪದಿಂದ ಗೋಲ್ಡನ್ ಟೆಂಪಲ್‍ಗೆ ಹೋಗುವ ಮಾರ್ಗ ಮಧ್ಯೆ ರಸ್ತೆಯ ಕೊಲ್ಲಿ ಸೇತುವೆ ತುಂಬಿ ಜಲಾವೃತಗೊಂಡಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದಿಂದ ಗೋಲ್ಡನ್ ಟೆಂಪಲ್‍ಗೆ ಹೋಗುವ ರಸ್ತೆ ಮಾರ್ಗದ ಮಧ್ಯೆಭಾಗದಲ್ಲಿರುವ ಕೊಲ್ಲಿ ಸೇತುವೆ ಜಲಾವೃತದಿಂದ ಮುಚ್ಚಿ ಹೋಗಿದ್ದು, ಗಿರಗೂರು, ದೊಡ್ಡಹೊಸೂರು, ಚಿಕ್ಕ ಹೊಸೂರು, ದೊಡ್ಡಹರವೆ, ರಾಣಿ ಗೇಟ್, ಮಾರ್ಗ ಸಂಪೂರ್ಣ ಬಂದ್ ಆಗಿದೆ ಹಾಗೂ ಗಿರಗೂರು ಶಾಲೆಗೆ ತೆರಳಿದ್ದ ಶಾಲೆಯ ಮಕ್ಕಳು ಮನೆಗೆ ಹಿಂತಿರುಗಿಬರುವುದನ್ನು ಪೋಷಕರು ಕಾತುರದಿಂದ ಕಾಯು ವಂತಾಗಿತ್ತು.

ಕೆಲವರು ನೀರಿಗಿಳಿದು ಸೇತುವೆ ದಾಟಲು ಪ್ರಯತ್ನಿಸಿದಾಗ ಪೊಲೀಸಿನವರು ತಡೆಹಿಡಿ ದರು. ಸುದ್ದಿ ತಿಳಿದು ತಹಸಿಲ್ದಾರ್ ಜೆ.ಮಹೇಶ್ ಸ್ಥಳಕ್ಕೆ ಆಗಮಿಸಿ ಪರಿ ಸ್ಥಿತಿಯನ್ನು ವೀಕ್ಷಿಸಿ ದರು, ನಂತರ ಮಾತ ನಾಡಿದ ಅವರು ಯಾವುದೇ ತೊಂದರೆ ಯಾಗದಂತೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ಬರಲು ಬೋಟಿಂಗ್ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಸಾರ್ವ ಜನಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಾಲ್ನಡಿಗೆ ಹಾಗೂ ವಾಹನ ಸಂಚಾರಕ್ಕೆ ಅವಕಾಶ ನೀಡದೆ ಎಚ್ಚರವಹಿ ಸಬೇಕೆಂದು ಪೊಲೀಸರಿಗೆ ಸೂಚಿಸಿದರು.

ಭಾರಿ ಮಳೆಯಿಂದ ಕೆಲವು ಜಮೀನು ಗಳು ಸಂಪೂರ್ಣ ಜಲಾವೃತಗೊಂಡು ಸಣ್ಣಪುಟ್ಟ ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಹೆಚ್.ಎನ್.ಸಿದ್ದಯ್ಯ, ಕಂದಾಯ ಅಧಿಕಾರಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ಎನ್.ಕೆ.ಪ್ರದೀಪ್, ಪೊಲೀಸ್ ಸಿಬ್ಬಂದಿ ಸಾರ್ವಜನಿಕರು ಹಾಜರಿದ್ದರು.

Translate »