ಹೆಚ್.ಡಿ.ಕೋಟೆ ತಾರಕ ಜಲಾಶಯ ಭರ್ತಿ
ಮೈಸೂರು

ಹೆಚ್.ಡಿ.ಕೋಟೆ ತಾರಕ ಜಲಾಶಯ ಭರ್ತಿ

August 15, 2018

ಹೆಚ್.ಡಿ.ಕೋಟೆ: ತಾಲೂಕಿ ನಾದ್ಯಂತ ತೀವ್ರ ಮಳೆಯಾಗುತ್ತಿದ್ದು ತಾರಕ ಜಲಾಶಯ ಸಂಪೂರ್ಣ ಭರ್ತಿ ಯಾಗಿದೆ ಹಾಗೂ ಜಲಾಶಯದಿಂದ 2000 ಕ್ಯುಸೆಕ್ ನೀರನ್ನು ಹೊರಬಿಡಲಾ ಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2425 ಅಡಿಯಾಗಿದ್ದು 2424.75 ಅಡಿತಲುಪಿದೆ.

2000ಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ನದಿಯಿಂದ ಹರಿದರೆ ಜಲಾಶಯ ಮುಂಭಾಗದ ಸೇತುವೆ ಮುಳುಗಡೆ ಯಾಗುತ್ತದೆ. ಈ ಸಂಬಂಧ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಒದಗಿಸ ಲಾಗಿದ್ದು ಬ್ಯಾರಿಕೇಡ್ ಅಳವಡಿಸಲು ತಿಳಿಸಲಾಗಿದೆ ಎಂದು ಜಲಾಶಯದ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೇತುವೆಯ ಮೇಲೆ ಓಡಾಡುವ ಸಾರ್ವ ಜನಿಕರು ಎಚ್ಚರಿಕೆಯಿಂದ ಸಂಚರಿಸು ವಂತೆ ಹಾಗೂ ಜಲಾಶಯದ ಅಚ್ಚುಕಟ್ಟು ಪ್ರದೇಶ ಮತ್ತು ನದಿ ತೀರದ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ನೀರನ್ನು ಹೊರ ಬೀಡುವ ಸಾಧ್ಯತೆ ಇರುವು ದರಿಂದ ಜಲಾನಯನ ಪ್ರದೇಶದ ಜನರು ಜಾಗೃತಿಯಿಂದ ಇರುವಂತೆ ತಿಳಿಸಿದ್ದಾರೆ.

Translate »