ಮೈಸೂರಿನ ಮೂವರು ಪೊಲೀಸರಿಗೆ ರಾಷ್ಟ್ರಪತಿ ಪದಕ
ಮೈಸೂರು

ಮೈಸೂರಿನ ಮೂವರು ಪೊಲೀಸರಿಗೆ ರಾಷ್ಟ್ರಪತಿ ಪದಕ

August 15, 2018

ಮೈಸೂರು: 72ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೊಲೀಸ್ ಸೇವೆಗೆ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕದ 18 ಪೊಲೀಸ್ ಅಧಿಕಾರಿಗಳ ಪೈಕಿ ಮೈಸೂರಿನ ಮೂವರು ಪೊಲೀಸರು ಆಯ್ಕೆಯಾಗಿದ್ದಾರೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ 942 ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘ ನೀಯ ಸೇವಾ ಪದಕ ನೀಡಿ ಗೌರವಿಸಲಿ ದ್ದಾರೆ. ಪೊಲೀಸ್ ಶೌರ್ಯ ಪ್ರಶಸ್ತಿಗೆ 177 ಮಂದಿ. ವಿಶೇಷ ಸೇವೆಗೆ 88 ಮಂದಿ ಹಾಗೂ ಉತ್ತಮ ಸೇವೆಗೆ 675 ಪೆÇಲೀಸ್ ಸಿಬ್ಬಂದಿ ರಾಷ್ಟ್ರಪತಿಗಳಿಂದ ಸನ್ಮಾನಿತರಾ ಗಲಿದ್ದಾರೆ. ಇದರಲ್ಲಿ ಎನ್.ಆರ್. ಉಪ ವಿಭಾಗದ ಎಸಿಪಿ ಸಿ.ಗೋಪಾಲ್, ಎಸಿಬಿ ವಿಭಾಗದ ಡಿವೈಎಸ್ಪಿ ಉಮೇಶ್ ಜಿ.ಸೇಠ್ ಹಾಗೂ ಕೆಎಸ್‍ಆರ್‍ಪಿ 5ನೇ ಬೆಟಾಲಿನ್ ಆರ್‍ಹೆಚ್‍ಸಿ ಎಸ್.ಎಂ.ಬಿಳಗಿ ಸೇರಿದಂತೆ 18 ಮಂದಿ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪದಕ ದೊರಕಿದೆ.

Translate »