ಚಾಮರಾಜನಗರ: ಕಾರು ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಕೂಟಿಯಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿ ರುವ ಘಟನೆ ತಾಲೂಕಿನ ಹರದನಹಳ್ಳಿ ಗ್ರಾಮದ ಕ್ರಾಸ್‍ನಲ್ಲಿ ಶುಕ್ರವಾರ ನಡೆದಿದೆ.
ಈರೋಡ್ ಜಿಲ್ಲೆಯ ವಿಜಯಮಂಗಳಂನ ಕಾರ್ತಿಕ್ ಹಾಗೂ ಶಂಕರ್ ಗಾಯ ಗೊಂಡವರಾಗಿದ್ದು, ಈಗ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ತಿಕ್ ಮತ್ತು ಶಂಕರ್ ಸ್ಕೂಟಿಯಲ್ಲಿ ಸತ್ತಿಯಿಂದ ಚಾಮರಾಜನಗರಕ್ಕೆ ಬರು ತ್ತಿದ್ದರು. ಈ ವೇಳೆ ಹರದನಹಳ್ಳಿ ಗ್ರಾಮದ ಬಳಿ ಇರುವ ಕ್ರಾಸ್‍ನಲ್ಲಿ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆಯಿತು. ಇದರಿಂದ ಕಾರ್ತಿಕ್ ಹಾಗೂ ಶಂಕರ್ ಗಂಭೀರವಾಗಿ ಗಾಯಗೊಂಡರು. ನಗರದ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸಂಚಾರಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ದೀಪಕ್ ತಿಳಿಸಿದರು.
ಸಬ್‍ಇನ್ಸ್‍ಪೆಕ್ಟರ್ ದೀಪಕ್, ದಫೇದಾರ ಶಿವಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.