Tag: Chamarajanagar

ಕಾಯಕ, ದಾಸೋಹ ಪರಂಪರೆ ಕಟ್ಟಿದ ಗುರುಮಲ್ಲೇಶ್ವರರು
ಚಾಮರಾಜನಗರ

ಕಾಯಕ, ದಾಸೋಹ ಪರಂಪರೆ ಕಟ್ಟಿದ ಗುರುಮಲ್ಲೇಶ್ವರರು

July 10, 2018

ಚಾಮರಾಜನಗರ:  ‘ಉತ್ತರ ಕರ್ನಾಟಕ ದಿಂದ ದಕ್ಷಿಣದ ಮೈಸೂರು ಪ್ರಾಂತ್ಯಕ್ಕೆ ಬಂದ ಗುರುಮಲ್ಲೇಶ್ವರರು ದೇವಾಲಯ ಕಟ್ಟುವ ಬದಲು ಕಾಯಕ ಮತ್ತು ದಾಸೋಹ ಪರಂಪರೆಯ ಮನಸ್ಸನ್ನು ಕಟ್ಟಿದರು’ ಎಂದು ನವದೆಹಲಿ ಬಸವ ಆಶ್ರಮದ ಮಹಾಂತ ಸ್ವಾಮೀಜಿ ಹೇಳಿದರು. ನಗರದ ಸಿದ್ದಮಲ್ಲೇಶ್ವರ ವಿರಕ್ತಮಠದ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಭಾನುವಾರ ಗುರುಮಲ್ಲೇಶ್ವರ ಸೇವಾ ಸಮಿತಿ ವತಿಯಿಂದ ನಡೆದ ಗುರು ಮಲ್ಲೇಶ್ವರರ 119ನೇ ಸಂಸ್ಮರಣಾ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಶಿವಮೊಗ್ಗ ಜಿಲ್ಲೆಯ ಸವುಳಂಗ ಗ್ರಾಮದಲ್ಲಿ ಜನಿಸಿದ ಗುರುಮಲ್ಲೇಶ್ವರರು 72ವರ್ಷಗಳ ಜೀವನದಲ್ಲಿ ರಾಜ್ಯದ ಹಲವೆಡೆ…

ರಾಜ್ಯ ಹಣಕಾಸು ಸಂಸ್ಥೆಯಿಂದ 1000 ಲಕ್ಷ ರೂ. ಸಾಲ ವಿತರಣೆ ಗುರಿ
ಚಾಮರಾಜನಗರ

ರಾಜ್ಯ ಹಣಕಾಸು ಸಂಸ್ಥೆಯಿಂದ 1000 ಲಕ್ಷ ರೂ. ಸಾಲ ವಿತರಣೆ ಗುರಿ

July 9, 2018

ಚಾಮರಾಜನಗರ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಚಾಮರಾಜನಗರ ಶಾಖೆಯು 2018-19ನೇ ಸಾಲಿನಲ್ಲಿ ವಿವಿಧ ಉದ್ಯಮಗಳಿಗೆ 1200 ಲಕ್ಷ ರೂ. ಸಾಲ ಮಂಜೂರಾತಿ ಮತ್ತು 1000 ಲಕ್ಷ ರೂ. ಸಾಲ ವಿತರಣೆ ಗುರಿಯನ್ನು ಹೊಂದಿದೆ. ಮೊದಲನೇ ಪೀಳಿಗೆಯ ಉದ್ಯಮಿಗಳಿಗೆ ಕೇವಲ ಶೇ. 8 ಬಡ್ಡಿ ದರದಲ್ಲಿ ಸಾಲವನ್ನು ಮಂಜೂರು ಮಾಡಲಿದೆ. 2017-18ನೇ ಹಣಕಾಸು ವರ್ಷದಲ್ಲಿ ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆ ಉದ್ಯಮಗಳ ಸ್ಥಾಪನೆ ಹಾಗೂ ಸೇವಾವಲಯಗಳ ಅಭಿ ವೃದ್ಧಿಗಾಗಿ 1079 ಲಕ್ಷ ರೂ. ಸಾಲ ಮಂಜೂ ರಾತಿ ಮಾಡಿದೆ. ಒಟ್ಟು…

ವಾಟಾಳು ಶ್ರೀಗಳು, ಡಾ.ಆರ್.ರಾಜುಗೆ ಸನ್ಮಾನ
ಚಾಮರಾಜನಗರ

ವಾಟಾಳು ಶ್ರೀಗಳು, ಡಾ.ಆರ್.ರಾಜುಗೆ ಸನ್ಮಾನ

July 9, 2018

ಚಾಮರಾಜನಗರ: ನಗರದ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಶ್ರೀಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಹಾಗೂ ನಿವೃತ್ತ ಅರಣ್ಯಾಧಿಕಾರಿ ಡಾ.ಆರ್.ರಾಜು ಅವರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಿತು. ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ವನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ಅಧಿಕಾರಿಯು ಕಾನೂನಿನ ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ವೇಳೆ ಜನಪರ ಕಾರ್ಯ ಯೋಜನೆಗೆ ಒತ್ತು ನೀಡಿದರೆ ಒಳಿತು ಎಂದು ಅಭಿಪ್ರಾಯಪಟ್ಟರು. ಗೌರವ ಸ್ವೀಕರಿಸಿ ಮಾತನಾಡಿದ…

ಚಾಮರಾಜನಗರ ಸೇರಿ 5 ಸರ್ಕಾರಿ ನರ್ಸಿಂಗ್ ಶಾಲೆಗೆ ಪ್ರವೇಶಾತಿ ಬೇಡ
ಚಾಮರಾಜನಗರ

ಚಾಮರಾಜನಗರ ಸೇರಿ 5 ಸರ್ಕಾರಿ ನರ್ಸಿಂಗ್ ಶಾಲೆಗೆ ಪ್ರವೇಶಾತಿ ಬೇಡ

July 9, 2018

ಚಾಮರಾಜನಗರ:  ಚಾಮರಾಜನಗರದ ಸರ್ಕಾರಿ ನರ್ಸಿಂಗ್ ಶಾಲೆಗೆ ಪ್ರಸ್ತುತ 2018-19ನೇ ಸಾಲಿಗೆ ಪ್ರವೇಶ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ವೈದ್ಯ ಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ‘ಮೈಸೂರು ಮಿತ್ರ’ನಿಗೆ ಲಭ್ಯ ವಾಗಿದ್ದು, ಜಿಲ್ಲಾ ಕೇಂದ್ರವಾದ ಚಾಮ ರಾಜನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನರ್ಸಿಂಗ್ ಶಾಲೆಯಲ್ಲಿ ಖಾಯಂ ಬೋಧಕರು ಇಲ್ಲದಿರುವುದು ಹಾಗೂ ಶಾಲೆಯಲ್ಲಿ ಮೂಲ ಭೂತ ಸೌಲಭ್ಯಗಳ ಕೊರತೆ ಇರುವುದು ಕಂಡು…

2.20 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ
ಚಾಮರಾಜನಗರ

2.20 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

July 9, 2018

ಚಾಮರಾಜನಗರ:  ತಾಲೂಕಿನ ಬಿಸಲವಾಡಿ, ಕೊತ್ತಲವಾಡಿ ಹಾಗೂ ಕಿಲಗೆರೆ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ 2.20 ಕೋಟಿ ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ಸಚಿವರಾಗಿ ಮೊದಲ ಬಾರಿಗೆ ಬಿಸಲ ವಾಡಿ ಗ್ರಾಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ನೀಡಿ ಸನ್ಮಾನಿಸಿದರು. ಗ್ರಾಮದ ಲಕ್ಷ್ಮಿ ದೇವಸ್ಥಾನಕ್ಕೂ ತೆರಳಿ ಸಚಿವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಿಸಲವಾಡಿ ಗ್ರಾಮದ ಮುಖ್ಯ ರಸ್ತೆಯಿಂದ…

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ
ಚಾಮರಾಜನಗರ

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ

July 8, 2018

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಬಗ್ಗೆ ವ್ಯಾಪಕ ಚರ್ಚೆ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ತಾಕೀತು ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡ ಸಂಸದ ಧ್ರುವನಾರಾಯಣ ಚಾಮರಾಜನಗರ: ಚಾಮರಾಜನಗರದಿಂದ ಸಂತೇಮರಹಳ್ಳಿ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಮಾರ್ಗದಲ್ಲಿ ಸೃಷ್ಟಿಯಾ ಗಿದ್ದ ಹಳ್ಳಕ್ಕೆ ಬಿದ್ದು ಇಬ್ಬರು ಪ್ರಾಣ ಕಳೆದು ಕೊಂಡಿದ್ದಾರೆ. ಇದಕ್ಕೆ ಹೊಣೆ ಯಾರು? ಮನುಷ್ಯನ ಪ್ರಾಣಕ್ಕೆ ಬೆಲೆ ಇಲ್ಲವೇ? ಎಂದು ಸಂಸದ ಆರ್.ಧ್ರುವನಾರಾಯಣ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು….

ನಗರಸಭೆ ಕಚೇರಿಗೆ ಲೋಕಾಯುಕ್ತ ದಾಳಿ: ದಾಖಲೆ ಪರಿಶೀಲನೆ
ಚಾಮರಾಜನಗರ

ನಗರಸಭೆ ಕಚೇರಿಗೆ ಲೋಕಾಯುಕ್ತ ದಾಳಿ: ದಾಖಲೆ ಪರಿಶೀಲನೆ

July 8, 2018

ಚಾಮರಾಜನಗರ:  ದೂರೊಂದಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಎಸ್‍ಪಿ ಜಿ.ರಶ್ಮಿ ಅವರ ನೇತೃತ್ವದ ತಂಡ ಶನಿವಾರ ನಗರದ ನಗರಸಭೆ ಕಾರ್ಯಾಲ ಯಕ್ಕೆ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು. ಕುಡಿಯುವ ನೀರಿನ ಯೋಜನೆ, ಒಳಚರಂಡಿ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ಲೋಕಾಯುಕ್ತರಿಗೆ ದೂರು ಸಲ್ಲಿಕೆ ಆಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಯಿಂದ ಮಾಹಿತಿ ನೀಡುವಂತೆ ನಗರಸಭೆಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಇದಕ್ಕೆ ಉತ್ತರಿಸಿರಲಿಲ್ಲ. ಹಾಗಾಗಿ, ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಕೆಲವು…

ಪೂರ್ಣ ಸಾಲ ಮನ್ನಾ ಭರವಸೆ  ಭಗ್ನ: ಇಬ್ಬರು ರೈತರ ಆತ್ಮಹತ್ಯೆ
ಚಾಮರಾಜನಗರ, ಮಂಡ್ಯ

ಪೂರ್ಣ ಸಾಲ ಮನ್ನಾ ಭರವಸೆ  ಭಗ್ನ: ಇಬ್ಬರು ರೈತರ ಆತ್ಮಹತ್ಯೆ

July 7, 2018

ಮಂಡ್ಯ, ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಪೂರ್ಣ ಸಾಲ ಮನ್ನಾ ಆಗಲಿಲ್ಲ ಎಂದು ಮನ ನೊಂದು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ದೇಮಹಳ್ಳಿ ಹಾಗೂ ಮಂಡ್ಯ ಜಿಲ್ಲೆ ಕಚ್ಚಿಗೆರೆ ಗ್ರಾಮದಲ್ಲಿ ನಡೆದಿದೆ. ಚಾಮರಾಜನಗರ ವರದಿ: ಚಾಮರಾಜ ನಗರ ತಾಲೂಕಿನ ದೇಮಹಳ್ಳಿ ಗ್ರಾಮದ ನಂಜುಂಡಪ್ಪನವರ ಮಗ ಚಿಕ್ಕಸ್ವಾಮಿ ಉ. ಬೆಳ್ಳಪ್ಪ (42) ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಸ್ವಾಮಿ ತಮಗಿದ್ದ ಎರಡೂ ವರೆ ಎಕರೆ ಜಮೀನಿನಲ್ಲಿ ಬಾಳೆ ಮತ್ತು ಉದ್ದು…

ಪ್ರವಾಸದಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಳ: ಆರ್.ಎಂ.ರಾಜಪ್ಪ
ಚಾಮರಾಜನಗರ

ಪ್ರವಾಸದಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಳ: ಆರ್.ಎಂ.ರಾಜಪ್ಪ

July 7, 2018

ಚಾಮರಾಜನಗರ: ಪ್ರವಾಸಗಳ ಮೂಲಕ ಮಕ್ಕಳಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಹೊರಗಿನ ಪ್ರಪಂಚದ ಜ್ಞಾನ ಮತ್ತು ಅರಿವು ಹೆಚ್ಚಾಗುತ್ತದೆ ಎಂದು ನಗರಸಭೆ ಉಪಾಧ್ಯಕ್ಷ ಆರ್.ಎಂ. ರಾಜಪ್ಪ ಅಭಿಪ್ರಾಯಪಟ್ಟರು. ತಾಲೂಕು ಭಾರತ ಸೇವಾದಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಸಹಯೋಗದಲ್ಲಿ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬದನಗುಪ್ಪೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಅರಣ್ಯ ವೀಕ್ಷಣೆ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅರಣ್ಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಪ್ರವಾಸ ಕೈಗೊಳ್ಳುವುದರಿಂದ ವನ್ಯಜೀವಿಗಳ ಕುರಿತು…

ಪಿಎಫ್‍ಐನಿಂದ ಈದ್‍ಮಿಲನ್ ಕ್ರೀಡೆ
ಚಾಮರಾಜನಗರ

ಪಿಎಫ್‍ಐನಿಂದ ಈದ್‍ಮಿಲನ್ ಕ್ರೀಡೆ

July 7, 2018

ಚಾಮರಾಜನಗರ: ರಂಜಾನ್ ಹಬ್ಬದ ಪ್ರಯುಕ್ತ ನಗರದ ಗಾಳೀಪುರದಲ್ಲಿ ಪಾಪ್ಯು ಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಈದ್ ಮಿಲನ್ ಕ್ರೀಡೆ ನಡೆಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರ ವೇರಿಸಿದ ಸಂಘಟನೆಯ ಜಿಲ್ಲಾಧ್ಯಕ್ಷ ಅಜೀಂ ಷರೀಫ್ ಮಾತನಾಡಿ, ರಂಜಾನ್ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಂಘಟನೆಯ ವತಿಯಿಂದ ಈದ್ ಮಿಲನ್ ಕ್ರೀಡಾ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗುತ್ತದೆ. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ದೈಹಿಕ, ಮಾನಸಿಕ ಸದೃಢರಾಗು ವಂತೆ ಮಾಡಲಾಗುವುದು. ಕ್ರೀಡೆಯಲ್ಲಿ ವಿದ್ಯಾ ರ್ಥಿಗಳು, ಸಂಘಟನೆಯ ಕಾರ್ಯಕರ್ತರು ಭಾಗವಹಿಸುತ್ತಾರೆ….

1 58 59 60 61 62 74
Translate »